ಮದುವೆಗೆ ಟ್ರಾಕ್ಟರ್ ಓಡಿಸುತ್ತಾ ಬಂದ ವಧು; ವೈರಲ್ ಆದ ವಿಡಿಯೋ ಇಲ್ಲಿದೆ

| Updated By: sandhya thejappa

Updated on: May 28, 2022 | 4:38 PM

ಮಧ್ಯಪ್ರದೇಶದ ಬೇತುಲ್ನಲ್ಲಿ ನಡೆದ ಮದುವೆಗೆ ವಧು ಗ್ರ್ಯಾಂಡ್ ಆಗಿ ಟ್ರಾಕ್ಟರ್ ಮೂಲಕ ಎಂಟ್ರಿ ಕೊಟ್ಟಿದ್ದಾಳೆ. ಕೆಂಪು ಬಣ್ಣದ ಬಟ್ಟೆ ಧರಿಸಿ ಮದುವೆಗೆ ಸಿದ್ಧವಾಗಿರುವ ವಧು, ಕಣ್ಣಿಗೆ ಕಪ್ಪು ಕನ್ನಡಕ ಹಾಕಿ ಟ್ರಾಕ್ಟರ್ ಮೇಲೆ ಬಂದಿದ್ದಾಳೆ.

ಮದುವೆಗೆ ಟ್ರಾಕ್ಟರ್ ಓಡಿಸುತ್ತಾ ಬಂದ ವಧು; ವೈರಲ್ ಆದ ವಿಡಿಯೋ ಇಲ್ಲಿದೆ
ಟ್ರಾಕ್ಟರ್ ಓಡಿಸುತ್ತಾ ವಧು ಮದುವೆಗೆ ಬಂದಳು
Follow us on

ಮದುವೆ (Marriage) ಅಂದರೆ ಸಂಭ್ರಮ, ಸಡಗರ. ದಾಂಪತ್ಯ ಜೀವನಕ್ಕೆ ಕಾಲಿಡಲು ಎರಡು ಮೂರು ತಿಂಗಳಿನಿಂದಲೇ ತಯಾರಿಗಳು ನಡೆಯುತ್ತವೆ. ಮದುವೆ ಹೀಗೆ ಆಗಬೇಕು, ಹಾಗೆ ನಡೆಯಬೇಕು ಅಂತ ಮಧು- ವರ ಕನಸು ಕಂಡಿರುತ್ತಾರೆ. ಅದರಲ್ಲೂ ಕೆಲವರು ಕಲ್ಯಾಣ ಮಂಟಪಕ್ಕೆ (Marriage Hall) ಎಂಟ್ರಿ ಕೊಡುವ ಬಗ್ಗೆ ಚರ್ಚೆಗಳನ್ನ ಮಾಡಿರುತ್ತಾರೆ. ಬೇರೆ- ಬೇರೆ ರೀತಿಯಲ್ಲಿ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಡುವ ದೃಶ್ಯಗಳು ಸಾಮಾನ್ಯವಾಗಿ ವೈರಲ್ (Viral) ಆಗುತ್ತವೆ. ಅದೇ ರೀತಿ ಇದೊಂದು ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮಧ್ಯಪ್ರದೇಶದ ಬೇತುಲ್ನಲ್ಲಿ ನಡೆದ ಮದುವೆಗೆ ವಧು ಗ್ರ್ಯಾಂಡ್ ಆಗಿ ಟ್ರಾಕ್ಟರ್ ಮೂಲಕ ಎಂಟ್ರಿ ಕೊಟ್ಟಿದ್ದಾಳೆ. ಕೆಂಪು ಬಣ್ಣದ ಬಟ್ಟೆ ಧರಿಸಿ ಮದುವೆಗೆ ಸಿದ್ಧವಾಗಿರುವ ವಧು, ಕಣ್ಣಿಗೆ ಕಪ್ಪು ಕನ್ನಡಕ ಹಾಕಿ ಟ್ರಾಕ್ಟರ್ ಮೇಲೆ ಬಂದಿದ್ದಾಳೆ. ಆಕೆಯೇ ಟ್ರಾಕ್ಟರ್ ಚಾಲನೆ ಮಾಡಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದು ವಿಶೇಷವಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ
Viral Video: ಚಿಕ್ಕ ಹುಡುಗಿಯನ್ನು ಯಾಮಾರಿಸಿ ಲಾಲಿಪಾಪ್ ಕಚ್ಚಿಕೊಂಡು ಓಡಿದ ನಾಯಿಮರಿ; ವಿಡಿಯೋ ವೈರಲ್
Viral Video: ನವಜಾತ ಮಗನನ್ನು ಭೇಟಿಯಾದ ಗಂಡು ಜಿರಾಫೆ, ಮತ್ತೆ ನೆಟ್ಟಿಜನ್​ಗಳ ಹೃದಯ ಕದ್ದ ವಿಡಿಯೋ
Trending: ಪೈನ್ ಮರವನ್ನು ಹಿಂದಿಕ್ಕಿದ ‘ಗ್ರೇಟ್ ಅಜ್ಜ’: ಈ ಮರದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ ನೋಡಿ
Shocking News: ಇಲ್ಲಿ ಮೂತ್ರದಿಂದ ತಯಾರಾಗುತ್ತೆ ಬಿಯರ್; ಚಪ್ಪರಿಸಿ ಕುಡಿಯೋರೂ ಇದಾರೆ ಸ್ವಾಮಿ!

ವಧು ಮತ್ತು ವರ ತಮ್ಮ ಮದುವೆಗೆ ಸಹಜವಾಗಿ ಕಾರು ಅಥವಾ ಪಲ್ಲಕ್ಕಿಯಲ್ಲಿ ಆಗಮಿಸುತ್ತಾರೆ. ಆದರೆ ಈ ಪ್ರವೃತ್ತಿ ಹಳೆಯದಾಗಿದೆ. ಅದರಲ್ಲೂ ವಧು ತೀರಾ ವಿಭಿನ್ನವಾಗಿ ಎಂಟ್ರಿ ಕೊಡುತ್ತಾರೆ. ಈ ಹಿಂದೆ ವಧುವೊಬ್ಬರು ಬುಲೆಟ್ ಬೈಕ್​ನಲ್ಲಿ ರಾಯಲ್ ಆಗಿ ಪ್ರವೇಶ ನೀಡಿದ್ದರು. ಅದೇ ರೀತಿ ಇದೀಗ ಮಧ್ಯಪ್ರದೇಶದಲ್ಲಿ ಟ್ರಾಕ್ಟರ್ ಮೂಲಕ ಮದುವೆಗೆ ಬಂದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಮದುಮಗಳ ಎಡ, ಬಲಕ್ಕೆ ಆಕೆಯ ಸಹೋದರರು ನಿಂತಿದ್ದಾರೆ.

ಇದನ್ನೂ ಓದಿ: ಸಚಿವ ಅಶೋಕ ಬೀದರ್​ನಲ್ಲಿ ಜಾಸ್ತಿ ಸ್ಪೈಸಿಯಾಗಿದ್ದ ಆಹಾರವನ್ನು ಮುಖದ ಮೇಲಿನ ಬೆವರು ಒರೆಸಿಕೊಳ್ಳುತ್ತಾ ಸವಿದರು!

ನಿನ್ನೆ (ಮೇ 27) ಸಂಜೆ ಬೇತುಲ್ ಜಿಲ್ಲೆಯ ಜಾವ್ರಾ ಗ್ರಾಮದಲ್ಲಿ ಮದುವೆ ನಡೆದಿತ್ತು. ಈ ವೇಳೆ ವಧು ಸ್ವತಃ ಟ್ರಾಕ್ಟರ್ ಚಾಲನೆ ಮಾಡಿದ್ದಾರೆ. ಪಲ್ಲಕ್ಕಿ ಅಥವಾ ಕಾರಿನಲ್ಲಿ ಪ್ರವೇಶಿಸುವ ಪ್ರವೃತ್ತಿ ಹಳೆಯದಾಗಿದೆ. ಸದ್ಯ ಜನರು ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸುತ್ತಾರೆ ಎಂದು ಶ್ರೀಮತಿ ತಗ್ಡೆ ಎಂಬುವವರು ಹೇಳಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Sat, 28 May 22