Video: ಇದೇ ನೋಡಿ ತಾಯಿ ಪ್ರೀತಿ; ತನ್ನ ಕರುವನ್ನು ತೋರಿಸಲು ಮಾಲೀಕನನ್ನು ಕರೆದೊಯ್ದ ಹಸು

ಈ ಸಾಕು ಪ್ರಾಣಿಗಳು ತನ್ನ ಮಾಲೀಕನ ಜತೆಗೆ ತುಂಬಾನೇ ಸಲುಗೆಯಿಂದ ವರ್ತಿಸುತ್ತವೆ. ಮಾತು ಬಾರದೇ ಇದ್ದರೂ ತನ್ನ ಭಾವನೆಗಳನ್ನು ಮಾಲೀಕನಿಗೆ ಬೇರೆ ಯಾವುದೋ ರೀತಿಯಲ್ಲಿ ತಿಳಿಸುತ್ತವೆ. ಇದೀಗ ಹಸುವೊಂದು ತನ್ನ ಕಂದಮ್ಮನನ್ನು ತೋರಿಸಲು ಮಾಲೀಕನನ್ನು ಕರೆದುಕೊಂಡು ಹೋಗುತ್ತಿರುವ ಹೃದಯ ಸ್ಪರ್ಶಿ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಇದೇ ನೋಡಿ ತಾಯಿ ಪ್ರೀತಿ; ತನ್ನ ಕರುವನ್ನು ತೋರಿಸಲು ಮಾಲೀಕನನ್ನು ಕರೆದೊಯ್ದ ಹಸು
ವೈರಲ್‌ ವಿಡಿಯೋ
Image Credit source: Facebook

Updated on: Jul 03, 2026 | 5:01 PM

ಮನುಷ್ಯರೇ ಆಗಿರಲಿ, ಪ್ರಾಣಿಗಳೇ ಆಗಿರಲಿ, ತಾಯಿ (mother) ಪ್ರೀತಿ ಯಾವತ್ತೂ ಬದಲಾಗಲ್ಲ. ಮಾತು ಬಾರದ ಪ್ರಾಣಿಗಳು ತನ್ನ ಕಂದಮ್ಮಗಳ ಮೇಲೆ ಇಟ್ಟಿರುವ ಪ್ರೀತಿಯೇ ಹಾಗೆ, ತನ್ನ ಮರಿಗಳನ್ನು ಪ್ರೀತಿಯಿಂದ ಮುದ್ದಿಸುತ್ತವೆ, ಕಾಳಜಿ ವಹಿಸುತ್ತವೆ. ಇದೀಗ ಹಸುವೊಂದು ತನ್ನ ಮಾಲೀಕನಿಗೆ ತನ್ನ ಕರು (calf) ಎಲ್ಲಿ ಮಲಗಿದೆ ಎಂದು ತೋರಿಸಲು ಕರೆದ್ಯೋಯುತ್ತಿರುವ ಮುದ್ದಾದ ವಿಡಿಯೋ ವೈರಲ್ ಆಗಿದೆ. ಈ ಹೃದಯ ಸ್ಪರ್ಶಿ ದೃಶ್ಯ ನೆಟ್ಟಿಗರ ಮನಸ್ಸು ಗೆದ್ದಿದೆ.

ರವಿ ಚಂದ್ರ (Ravi Chandra) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಹಸುವೊಂದು ತನ್ನ ಕರು ಎಲ್ಲಿ ಮಲಗಿದೆ ಎಂದು ತೋರಿಸಲು ಮಾಲೀಕನನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೀವು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಮನೆಮಾಲೀಕನು ಈ ಹಸು ಕೆಲವು ದಿನಗಳ ಹಿಂದೆಯಷ್ಟೇ ಕರು ಹಾಕಿದೆ. ಮೇಯುತ್ತಾ ಬೇರೆ ಹಸುಗಳ ಜತೆಗೆ ಬಂದು ಬಿಟ್ಟಿದೆ. ಈಗ ನನ್ನನ್ನು ಕರು ಎಲ್ಲಿ ಮಲಗಿದೆ ತೋರಿಸಲು ನನ್ನ ಕರ್ಕೊಂಡು ಹೋಗುತ್ತಿದೆ ಎಂದು ವಿವರಿಸಿರುವುದನ್ನು ಕಾಣಬಹುದು. ಈ ಮಾಲೀಕ ಹಸುವನ್ನೇ ಹಿಂಬಾಲಿಸಿದ್ದು, ಹುಲ್ಲಿನ ದೊಡ್ಡ ಪೊದೆ ಮುಂದೆ ಹೋಗಿ ನಿಂತು ಕೊಂಡಿದೆ. ಹುಲ್ಲಿನ ಪೊದೆಯೊಳಗೆ ಕರು ಮಲಗಿರುವುದನ್ನು ಇಲ್ಲಿ ನೋಡಬಹುದು.

ಇದನ್ನೂ ಓದಿ: ತನ್ನನ್ನು ಕಾಳಜಿ ಮಾಡುವ ಜೀವಕೆ ಮುತ್ತು ನೀಡಿದ ಕರು; ಹೃದಯಸ್ಪರ್ಶಿ ದೃಶ್ಯ ವೈರಲ್‌

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಹೃದಯಕ್ಕೆ ಹತ್ತಿರವಾಗಿದೆ ಎಂದರೆ, ಮತ್ತೊಬ್ಬರು, ಈ ಮೂಕ ಪ್ರಾಣಿಗಳು ಭಾವನೆಗಳಿವೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ತಾಯಿ ಹಸು ತನ್ನ ಕರು ಎಷ್ಟು ಕ್ಷೇಮವಾಗಿದೆ ಎಂದು ತೋರಿಸುತ್ತಿರುವ ದೃಶ್ಯ ನಿಜಕ್ಕೂ ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us