Video: ಕ್ಯಾರೆಟ್ ಪ್ರಿಯ ಈ ಶ್ವಾನ; ತರಕಾರಿ ಮಾರುವ ಮಹಿಳೆಗಾಗಿ ಕಾದು ಕುಳಿತ ಮನೆಯ ಮುದ್ದಿನ ನಾಯಿ

ಶ್ವಾನಗಳೇ ಹಾಗೆ, ಒಮ್ಮೆ ಪ್ರೀತಿ, ಕಾಳಜಿ ತೋರಿದರೆ ಜೀವನ ಪರ್ಯಂತ ನೆನಪಿಟ್ಟುಕೊಳ್ಳುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಮನೆಯ ಮುದ್ದಿನ ಶ್ವಾನವೊಂದು ತರಕಾರಿ ಮಾರುವ ಮಹಿಳೆಗಾಗಿ ಕಾದು ಕುಳಿತಿದೆ. ಪ್ರತಿನಿತ್ಯ ತನ್ನ ಬಳಿಗೆ ಕ್ಯಾರೆಟ್ ಕೊಡುವ ಮಹಿಳೆಯ ಪ್ರೀತಿಗೆ ಈ ಶ್ವಾನವು ಕಳೆದು ಹೋಗಿದೆ. ಈ ಮುದ್ದಾದ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಕ್ಯಾರೆಟ್ ಪ್ರಿಯ ಈ ಶ್ವಾನ; ತರಕಾರಿ ಮಾರುವ ಮಹಿಳೆಗಾಗಿ ಕಾದು ಕುಳಿತ ಮನೆಯ ಮುದ್ದಿನ ನಾಯಿ
ವೈರಲ್‌ ವಿಡಿಯೋ
Image Credit source: Instagram

Updated on: Oct 27, 2026 | 11:06 AM

ಶ್ವಾನಗಳಿಗೆ (Dogs) ನಾನ್ ವೆಜ್ ಅಂದ್ರೆ ತುಂಬಾನೇ ಇಷ್ಟ. ಆದರೆ ಈ ಶ್ವಾನ ಮಾತ್ರ ತರಕಾರಿ ಪ್ರೇಮಿಯಾಗಿದೆ. ಹೌದು, ಮನೆಯ ಮುದ್ದಿನ ಶ್ವಾನಗಳ ವಿಡಿಯೋಗಳು ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇದೀಗ, ತರಕಾರಿ ಮಾರುವ ಮಹಿಳೆ ಬರುವಿಕೆಗಾಗಿ ಕಾದು ಕುಳಿತಿದೆ. ಇದರ ಹಿಂದಿನ ಕಾರಣ ತಿಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಹೌದು, ವೈರಲ್ ಆಗಿರುವ ಈ ದೃಶ್ಯವು ನೆಟ್ಟಿಗರ ಹೃದಯ ಗೆದ್ದಿದೆ.

ತರಕಾರಿ ಮಾರುವ ಮಹಿಳೆಗಾಗಿ ಕಾದು ಕುಳಿತ ಶ್ವಾನ

ಸ್ಪಾರ್ಕಿ (Sparkyy008) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶ್ವಾನದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಶ್ವಾನವೊಂದು ಕಿಟಕಿಯತ್ತ ನೋಡುತ್ತಾ ತರಕಾರಿ ಮಾರುವ ಮಹಿಳೆಯ ಆಗಮನಕ್ಕಾಗಿ ಕಾಯುತ್ತಿದೆ. ಆಕೆ ಬರುತ್ತಿದ್ದಂತೆ ತಾನು ಇಲ್ಲಿದ್ದೇನೆ ಎನ್ನುವ ಸೂಚನೆ ನೀಡಿದೆ. ಕೊನೆಗೆ ತರಕಾರಿ ಮಾರುವ ಮಹಿಳೆ ಶ್ವಾನವಿರುವಲ್ಲಿಗೆ ಬಂದು ಕ್ಯಾರೆಟ್ ನೀಡಿದ್ದಾಳೆ. ಶ್ವಾನವು ಕ್ಯಾರೆಟ್‌ ತಿನ್ನುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಆರ್ಡರ್ ತಲುಪಿಸಲು ಪುಟ್ಟ ನಾಯಿ ಮರಿ ಜತೆಗೆ ಮನೆ ಬಾಗಿಲಿಗೆ ಬಂದ ಬ್ಲಿಂಕಿಟ್ ಡೆಲಿವರಿ ಬಾಯ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಪ್ರೀತಿ ಕಾಳಜಿಯೇ ಅದ್ಭುತ ಎಂದಿದ್ದಾರೆ. ಇನ್ನೊಬ್ಬರು, ಕ್ಯಾರೆಟ್ ಬಾಯ್ ಎಂದು ಕಾಲೆಳೆದಿದ್ದಾರೆ. ಮತ್ತೊಬ್ಬರು, ಎಷ್ಟು ಬಾರಿ ಈ ವಿಡಿಯೋ ನೋಡಿದ್ರು ಬೇಜಾರ್ ಆಗಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us