
ಇಂದಿನ ಕಾಲದಲ್ಲಿ ಮಾನವೀಯತೆ ಎನ್ನುವ ಪದಕ್ಕೆ ಬೆಲೆಯೇ ಇಲ್ಲ. ಎಲ್ಲರೂ ಕೂಡ ಸ್ವಾರ್ಥಿಗಳಾಗಿದ್ದು ಬೇರೆಯವರ ಕಷ್ಟ ಹಾಗೂ ನೋವಿಗೆ ಸ್ಪಂದಿಸುವವರನ್ನು ಕಾಣುವುದೇ ಕಡಿಮೆ. ಆದರೆ ಇದೀಗ ದಿಕ್ಕು ದೆಸೆಯಿಲ್ಲದೇ ರಸ್ತೆಯ ಮಲಗಿದ್ದ ವೃದ್ಧ ವ್ಯಕ್ತಿಗೆ ವಿದೇಶಿಗನೊಬ್ಬನು (foreigner) ಸಹಾಯ ಮಾಡಿದ್ದಾನೆ. ಹೌದು, ದಿಂಬು ಹಾಸಿಗೆ ತಂದು ಕೊಟ್ಟು ವಿದೇಶಿಗ ಮಾನವೀಯತೆ ಮೆರೆದಿದ್ದಾನೆ. ಈ ದೃಶ್ಯ ನೋಡಿ ನೆಟ್ಟಿಗರ ಕಣ್ಣು ಒದ್ದೆಯಾಗಿದೆ.
ರ್ಯಾನ್ ಕಲಿಶ್ (Ryan Kalish) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬ ಮಲಗಿರುವುದನ್ನು ಕಾಣಬಹುದು. ಇದೇ ವೇಳೆ ವಿದೇಶಿಗನೊಬ್ಬ ಕೈಯಲ್ಲಿ ದಿಂಬು ಹಾಸಿಗೆಯೊಂದಿಗೆ ಆತನ ಬಳಿ ಬಂದಿದ್ದಾನೆ. ಮಲಗಿದ್ದ ವೃದ್ಧ ವ್ಯಕ್ತಿಗೆ ಎಬ್ಬಿಸಿದ್ದು, ಇದನ್ನು ನೋಡಿದ ವೃದ್ಧ ವ್ಯಕ್ತಿಯೂ ಕೈ ಮುಗಿದು ಕೃತಜ್ಞತೆ ಸಲ್ಲಿಸಿದ್ದಾನೆ. ಆ ಬಳಿಕ ವೃದ್ಧ ವ್ಯಕ್ತಿಗೆ ಆಹಾರ ತಂದು ಕೊಟ್ಟು ಹಸಿವು ನೀಗಿಸಿರುವುದನ್ನು ಕಾಣಬಹುದು.
ಇದನ್ನೂ ಓದಿ: ಭಾರತೀಯರ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿದೇಶಿಗ, ಕಾರಣ ತಿಳಿದ್ರೆ ನೀವು ಶಾಕ್ ಆಗ್ತೀರಾ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಳ್ಳೆಯ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, ನೀವು ನಿಜಕ್ಕೂ ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ವ್ಯಕ್ತಿಯ ಹೃದಯ ಬಂಗಾರದಂತಹದ್ದು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ