ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿದ ಬರಗಾಲ ಎದುರಾಗಿದೆ. ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಬೇಸಿಗೆ ಶುರುವಾಗುತ್ತಿದ್ದಂತೆ ಕುಡಿಯುವ ನೀರಿಗೂ ಆಹಾಕಾರ ಶುರುವಾಗಿದೆ. ಬೋರ್ ವೆಲ್ ಗಳು, ಕೆರೆ, ಬಾವಿ, ನದಿಗಳು ಬರಿದಾಗುತ್ತಿದ್ದು, ಜನ ಜೀವ ಜಲಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ನಡುವೆ ಇಲ್ಲೊಂದು ಕುಡಿಯೋ ನೀರಿನ ಸಮಸ್ಯೆಯ ಬಗೆಗಿನ ಹಾಸ್ಯಮಯ ವಿಡಿಯೋವೊಂದು ವೈರಲ್ ಆಗಿದ್ದು, ನೀರ್ ಕೊಡಿ ಎಂದು ಕೇಳಿದ್ರೆ ಇಲ್ಲೊರ್ವ ಯುವತಿ ಎಣ್ಣೆ ಬೇಕಾದ್ರೂ ಕೊಡ್ತೀನಿ ಆದ್ರೆ ನೀರಿನ್ ಬಾಟಲ್ ಮಾತ್ರ ಕೊಡಲ್ಲ ಅಂದಿದ್ದಾಳೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಯುವತಿಯ ಈ ಮಾತಿಗೆ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಈ ವಿಡಿಯೋವನ್ನು RJ ತ್ರಿಶೂಲ್ (@rjthrishool) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನೀರ್ ಕೇಳಿದ್ರೆ ಹಿಂಗನ್ನೋದಾ?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಆರ್.ಜೆ ತ್ರಿಶೂಲ್ ಅವರು ಬೆಂಗ್ಳೂರಲ್ಲಿ ಕುಡಿಯೋಕೆ ನೀರಿಲ್ಲ, ಹಾಗಾಗಿ ನಾನ್ ನಿಮ್ಮ ನೀರಿನ್ ಬಾಟಲ್ ತಗೆದುಕೊಳ್ಳಾ ಎಂದು ತಮ್ಮ ಸಹದ್ಯೋಗಿಯೊಂದಿಗೆ ಕೇಳುತ್ತಾರೆ. ಅದಕ್ಕೆ ಆ ಯುವತಿ ಎಣ್ಣೆ ಬೇಕಾದ್ರೂ ಕುಡಿಸಿ ಬಿಡ್ತೀನಿ, ಆದ್ರೆ ವಾಟರ್ ಬಾಟಲ್ ಮಾತ್ರ ಕೊಡಲ್ಲ ಎಂದು ಹೇಳುತ್ತಿರುವ ಹಾಸ್ಯಮಯ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಆಯ್ತ ಆಯ್ತು ನಮ್ಗೆ ಬೇಗ ಎಣ್ಣೆ ಕೊಡ್ಸಿ ಎಂದು ನೆಟ್ಟಿಗರು ತಮಾಷೆಯ ಕಾಮೆಂಟ್ಸ್ಗಳನ್ನು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ