Video: ಶ್ವಾನವನ್ನು ಕಂಡೊಡನೆ ತಬ್ಬಿ ಮುದ್ದಾಡಿದ ಗೊರಿಲ್ಲಾ

ಪರಿಶುದ್ಧ ಸ್ನೇಹವೇ ಹಾಗೆ, ಈ ನಿಸ್ವಾರ್ಥ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸುಂದರ ಸ್ನೇಹ ಸಂಬಂಧದ ವಿಡಿಯೋ ವೈರಲ್ ಆಗಿದೆ. ಗೊರಿಲ್ಲಾವೊಂದು ತನ್ನ ಸ್ನೇಹಿತನನ್ನು ಕಂಡೊಡನೆ ಅಪ್ಪಿ ಮುದ್ದಾಡಿದ ದೃಶ್ಯವು ಎಲ್ಲರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಶ್ವಾನವನ್ನು ಕಂಡೊಡನೆ ತಬ್ಬಿ ಮುದ್ದಾಡಿದ ಗೊರಿಲ್ಲಾ
ವೈರಲ್‌ ವಿಡಿಯೋ
Image Credit source: Facebook

Updated on: Feb 27, 2026 | 11:18 AM

ಈ ಜಗತ್ತಿನಲ್ಲಿ ಎಲ್ಲ ಬಂಧ ಮೀರಿದ ಸಂಬಂಧವೇ ಈ ಸ್ನೇಹ (friendship). ಪ್ರಪಂಚದಲ್ಲಿ ಸ್ನೇಹಿತರಿಲ್ಲದ ವ್ಯಕ್ತಿಯಿರಲು ಸಾಧ್ಯವೇ ಇಲ್ಲ. ಈ ಸುಂದರವಾದ ಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮೂಕ ಪ್ರಾಣಿಗಳ ನಡುವಿನ ಶುದ್ಧ ಸ್ನೇಹಕ್ಕೆ ಈ ವಿಡಿಯೋನೇ ಸಾಕ್ಷಿ. ತನ್ನ ಬೆಸ್ಟ್ ಫ್ರೆಂಡ್ ಶ್ವಾನವನ್ನು (dog) ಕಂಡೊಡನೆ ಗೊರಿಲ್ಲಾ ಕುಣಿದಾಡಿದ್ದು, ಓಡಿ ಹೋಗಿ ತಬ್ಬಿಕೊಂಡು ಮುದ್ದಾಡಿರುವ ವಿಡಿಯೋ ವೈರಲ್‌ ಆಗಿದೆ.

Bobby Lloyd ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಗೊರಿಲ್ಲಾ ಹಾಗೂ ಶ್ವಾನವು ಮುಖಾಮುಖಿಯಾಗಿರುವ ಆಗಿರುವುದನ್ನು ಕಾಣಬಹುದು.  ಗೊರಿಲ್ಲಾವು ಶ್ವಾನವನ್ನು ಕಂಡೊಡನೆ ಕುಣಿದಾಡಿದೆ. ಅಷ್ಟೇ ಅಲ್ಲದೇ,  ಶ್ವಾನವನ್ನು ಬಾಚಿ ತಬ್ಬಿಕೊಂಡು ಮುದ್ದಾಡಿದ ದೃಶ್ಯವನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಎತ್ತಿನ ಕಾಲು ಒತ್ತಿ ಸೇವೆ ಮಾಡಿದ ಮುದ್ದು ಮಕ್ಕಳು, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸ್ನೇಹಿತರಿಬ್ಬರ ಪುನರ್ಮಿಲನ ಎಂದರೆ, ಮತ್ತೊಬ್ಬರು, ಮೂಕ ಪ್ರಾಣಿಗಳ ಶುದ್ಧ ಪ್ರೀತಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us