Video: ಗೊಂಬೆಗೆ ಸ್ನಾನ ಮಾಡಿಸಿ ಆರೈಕೆ ಮಾಡಿದ ಪುಟಾಣಿ, ವೈರಲ್‌ ಆಯ್ತು ದೃಶ್ಯ

ಸೋಶಿಯಲ್ ಮೀಡಿಯಾದಲ್ಲಿ ಮುದ್ದು ಮಕ್ಕಳ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈ ಪುಟಾಣಿಗಳ ಆಟ ತುಂಟಾಟಗಳ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳುವ ಖುಷಿಯೇ ಬೇರೆ. ಇದೀಗ ಪುಟಾಣಿಯೊಂದು ಗೊಂಬೆಗೆ ಸ್ನಾನ ಮಾಡಿಸಿದ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಗೊಂಬೆಗೆ ಕಾಳಜಿ ತೋರುವ ಈ ಪುಟ್ಟ ಹುಡುಗಿಯ ಮುಗ್ಧತೆಗೆ ನೆಟ್ಟಿಗರು ಕರಗಿ ಹೋಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಗೊಂಬೆಗೆ ಸ್ನಾನ ಮಾಡಿಸಿ ಆರೈಕೆ ಮಾಡಿದ ಪುಟಾಣಿ, ವೈರಲ್‌ ಆಯ್ತು ದೃಶ್ಯ
ವೈರಲ್ ವಿಡಿಯೋ
Image Credit source: Instagram

Updated on: Jun 07, 2026 | 6:13 PM

ಮನೆಯಲ್ಲಿ ಪುಟಾಣಿ ಮಕ್ಕಳಿದ್ದರೆ (little girl) ಗೊಂಬೆಯಾಟ ಆಡುತ್ತಾರೆ. ಹೆಣ್ಣು ಮಕ್ಕಳು ಈ ಗೊಂಬೆಗಳಿಗೆ ಬಟ್ಟೆ ತೊಡಿಸುವುದು, ತಲೆ ಬಾಚುವುದು ಮತ್ತು ಆರೈಕೆ ಮಾಡುವ ಮೂಲಕ ಮಗುವಿನಂತೆ ನೋಡಿಕೊಳ್ಳುತ್ತಾರೆ. ಈ ದೃಶ್ಯ ನೋಡಿದಾಗ ದೊಡ್ಡವರ ಮುಖದಲ್ಲಿ ನಗು ಮೂಡುತ್ತದೆ. ಇದೀಗ ಇಂತಹದ್ದೇ ಮುದ್ದಾದ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಪುಟಾಣಿಯೊಂದು ಗೊಂಬೆಗೆ ಸ್ನಾನ ಮಾಡಿಸಿ ಆರೈಕೆ ಮಾಡುವ ದೃಶ್ಯವಿದೆ. ಈ ಪುಟಾಣಿಯ ಗೊಂಬೆಯಾಟ ನೋಡಿ ನೆಟ್ಟಿಗರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

ಶೋಭಾ (shobha) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಪುಟಾಣಿಯೊಂದು, ಸಣ್ಣ ಮಗುವಿಗೆ ಸ್ನಾನ ಮಾಡಿಸಿದ್ದಂತೆ ಗೊಂಬೆಗೆ ಸ್ನಾನ ಮಾಡಿಸುತ್ತಿದೆ. ಆರೈಕೆ ಮಾಡುವುದರಲ್ಲಿ ಬ್ಯುಸಿಯಾಗಿರುವ ಪುಟ್ಟ ಮಗುವನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಿನಗೆ ಬಿಸ್ಕೆಟ್ ಬೇಕಾ, ಇರು ತಂದು ಕೊಡ್ತೇನೆ: ಶ್ವಾನದ ಜತೆಗೆ ಪುಟಾಣಿಯ ಕ್ಯೂಟ್‌ ಸಂಭಾಷಣೆ

ಈ ವಿಡಿಯೋ ಒಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಗೊಂಬೆ ಅಂದ್ರೆ ಮಕ್ಕಳಿಗೆ ಇಷ್ಟ ಎಂದಿದ್ದಾರೆ. ಮತ್ತೊಬ್ಬರು, ಬಾಲ್ಯದ ದಿನಗಳು ಕಣ್ಣ ಮುಂದೆ ಬಂತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಹೆಣ್ಣು ಮಕ್ಕಳಿಗೆ ಹುಟ್ಟಿನಿಂದಲೇ ಆರೈಕೆ, ಕಾಳಜಿ ತೋರಿಸುವ ಬಂದು ಬಿಟ್ಟಿರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:11 pm, Sun, 7 June 26

Loading...
Unable to load recommendations.
Follow Us