Video: ನಿನಗೆ ಬಿಸ್ಕೆಟ್ ಬೇಕಾ, ಇರು ತಂದು ಕೊಡ್ತೇನೆ: ಶ್ವಾನದ ಜತೆಗೆ ಪುಟಾಣಿಯ ಕ್ಯೂಟ್‌ ಸಂಭಾಷಣೆ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ನೆಟ್ಟಿಗರ ಹೃದಯ ಗೆಲ್ಲುತ್ತವೆ. ಹೌದು, ಈ ಶ್ವಾನದ ಜತೆಗೆ ಮಕ್ಕಳು ಆಟವಾಡುವ, ಅವುಗಳ ಜತೆಗೆ ಸ್ನೇಹಿತರಂತಿರುವ ಪುಟ್ಟ ಮಕ್ಕಳ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಆದರೆ ಇದೀಗ ಪುಟ್ಟ ಹುಡುಗಿಯೊಬ್ಬಳು ಶ್ವಾನದ ಜತೆಗೆ ಮುದ್ದಾದ ಸಂಭಾಷಣೆಯಲ್ಲಿ ತೊಡಗಿದ್ದಾಳೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ನಿನಗೆ ಬಿಸ್ಕೆಟ್ ಬೇಕಾ, ಇರು ತಂದು ಕೊಡ್ತೇನೆ: ಶ್ವಾನದ ಜತೆಗೆ ಪುಟಾಣಿಯ ಕ್ಯೂಟ್‌ ಸಂಭಾಷಣೆ
ವೈರಲ್ ವಿಡಿಯೋ
Image Credit source: Instagram

Updated on: Jun 04, 2026 | 5:31 PM

ಶ್ವಾನಗಳ (Dogs) ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿಯೇ ಇಲ್ಲ. ಮನೆಯ ಸದಸ್ಯರಂತೆ ಇರುವ ಈ ಶ್ವಾನಗಳು ಮಕ್ಕಳ ಜತೆಗೆ ಮಕ್ಕಳಾಗುತ್ತವೆ. ಪುಟಾಣಿಗಳ ಪಾಲಿಗೆ ಈ ಶ್ವಾನಗಳು ಬಾಡಿ ಗಾರ್ಡ್ ನಂತೆ ಇರುತ್ತವೆ. ಇದೀಗ ಪುಟಾಣಿಯೊಂದು ಶ್ವಾನದ ಜತೆಗೆ ಸಂಭಾಷಣೆಗೆ ಇಳಿದಿದ್ದಾಳೆ. ಶ್ವಾನದ ಬಳಿ ನೀನು ಏನನ್ನೂ ತಿನ್ನಲು ಬಯಸುತ್ತೀಯಾ ಎಂದು ಪ್ರಶ್ನಿಸಿದ್ದಾಳೆ. ಈ ಕ್ಯೂಟ್ ವಿಡಿಯೋ ಆನ್ಲೈನ್ ನಲ್ಲಿ ನೆಟ್ಟಿಗರ ಹೃದಯ ಗೆದ್ದಿದೆ.

@kuhu_coo_bird ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪ್ ಗೆ ಡಾಗೇಶ್ ಭಾಯ್
ಯೊಂದಿಗೆ ಮುದ್ದಾದ ಸಂಭಾಷಣೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಶ್ವಾನವೊಂದು ಪ್ರಶಾಂತವಾದ ಸ್ಥಳದಲ್ಲಿ ಮಲಗಿರುವುದನ್ನು ಕಾಣಬಹುದು. ಪುಟಾಣಿಯೊಂದು ಅದರತ್ತ ಬಂದು ಸಂಭಾಷಣೆಗೆ ಇಳಿದಿದೆ. ಡಾಗ್ಗೀ ನಿನಗೆ ಬಿಸ್ಕೆಟ್ ಬೇಕಾ? ಬಿಸ್ಕೆಟ್ ಬೇಡ್ವಾ ಎನ್ನುತ್ತಾಳೆ. ಆ ಬಳಿಕ ಚಪಾತಿ ಬೇಕಾ? ಚಪಾತಿ ಕೂಡ ಬೇಡ್ವಾ ಎಂದು ಕೇಳುತ್ತಾಳೆ. ಆ ಬಳಿಕ ಬಿಸ್ಕೆಟ್ ಬೇಕಾ, ಇರು ಸ್ವಲ್ಪ ನಾನು ನಿನಗೆ ತರಿಸಿ ಕೊಡುತ್ತೇನೆ ಎಂದು ಪುಟ್ಟ ಶ್ವಾನದ ಬಳಿ ಹೇಳುತ್ತಿರುವುದನ್ನು ಕಾಣಬಹುದು. ಪುಟಾಣಿ ಇಷ್ಟು ಮಾತಾಡಿದ್ರು ಶ್ವಾನ ಯಾವುದಕ್ಕೂ ರಿಯಾಕ್ಷನ್ ಕೊಡದೇ ತನ್ನ ಪಾಡಿಗೆ ಇದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮುಗ್ಧ ಮನಸ್ಸುಗಳ ಶುದ್ಧ ಸ್ನೇಹ: ಬೀದಿ ನಾಯಿ ಜತೆಗೆ ಆಟವಾಡಿದ ಪುಟಾಣಿಗಳು

ಈ ವಿಡಿಯೋ 2 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ವೆಶ್ಚನ್ ಅಂಡ್ ಆನ್ಸರ್ ಸೆಶನ್ ಮುಕ್ತಾಯವಾಯಿತು ಎಂದಿದ್ದಾರೆ. ಇನ್ನೊಬ್ಬರು, ಶ್ವಾನ ನನಗೆ ಶಾಂತಿ ಬೇಕೆಂದು ಹೇಳುತ್ತಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಡಾಗೇಶ್ ಭಾಯ್ ಗೆ ಶಾಕ್ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us