
ಉದ್ಯೋಗಕ್ಕಾಗಿ ಅನೇಕರು ದೂರದ ಊರು, ರಾಜ್ಯದಿಂದ ಬೆಂಗಳೂರಿಗೆ ಬರುತ್ತಾರೆ. ಹೀಗೆ ಬಂದವರಲ್ಲಿ ಕೆಲವರು ಇಲ್ಲೇ ನೆಲೆಸುತ್ತಾರೆ. ಇನ್ನು ಕೆಲವರು ಅನಿವಾರ್ಯ ಕಾರಣಕ್ಕಾಗಿ ಮಾಯನಗರಿ ಬಿಟ್ಟು ತಮ್ಮ ಊರಿಗೆ ತೆರಳುವುದಿದೆ. ಇದೀಗ ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ (Bengaluru) ನೆಲೆಸಿರುವ ವ್ಯಕ್ತಿಯೊಬ್ಬರು ಗುರಗಾಂವ್‌ಗೆ (Gurgaon) ಹೋಗುವ ನಿರ್ಧಾರ ಮಾಡಿದ್ದಾರೆ. ತನ್ನ ತಂದೆ ತಾಯಿಯನ್ನು ನೋಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ. ಈ ರೆಡ್ಡಿಟ್ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರೆಡ್ಡಿಟ್ ಪೋಸ್ಟ್‌ನಲ್ಲಿ, ಬೆಂಗಳೂರಿನಿಂದ ಗುರಗಾಂವ್‌ಗೆ ಸ್ಥಳಾಂತರಗೊಳ್ಳುತ್ತಿದ್ದೇನೆ. ತಮ್ಮ ವಯಸ್ಸಾದ ಪೋಷಕರನ್ನು ನೋಡಿಕೊಳ್ಳಲು ಬೆಂಗಳೂರಿನಲ್ಲಿ ವರ್ಷಗಳ ಕಾಲ ಕಳೆದ ನಂತರ ಅವರು ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ಆದರೆ ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿದ್ದೇನೆ. ನನಗೆ ಇಲ್ಲಿ ವೃತ್ತಿಪರ ಮಿತ್ರರು ಮತ್ತು ವೈಯಕ್ತಿಕ ಆತ್ಮೀಯರ ಬಳಗವೇ ಇದೆ. ಮಕ್ಕಳು ಇಲ್ಲೇ ಶಾಲೆಗೆ ಹೋಗುತ್ತಿದ್ದಾರೆ. ನನ್ನ ಹೆತ್ತವರು ಇಲ್ಲಿಗೆ ಬರಲು ಸಿದ್ಧರಿಲ್ಲ, ಆದ್ದರಿಂದ ಅಲ್ಲಿಗೆ ಸ್ಥಳಾಂತರಗೊಳ್ಳಬೇಕಾಗಿದೆ. ಆದರೆ ಗುರಗಾಂವ್‌ನ ಸಕಾರಾತ್ಮಕ ಅಂಶಗಳು ಬೆಂಗಳೂರನ್ನು ಬಿಟ್ಟು ತೆರಳುವ ನೋವನ್ನು ಕಡಿಮೆ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: “ನಿಮ್ಮ ಸಂಸ್ಥೆಗಾಗಿ ನನ್ನ ರಕ್ತ ಸುರಿಸಿದ್ದೇನೆ”: ಕಾರಣವಿಲ್ಲದೆ ವಜಾ ಮಾಡಿದ ಕಂಪನಿಗೆ ಹಿಗ್ಗಾಮುಗ್ಗಾ ಜಾಡಿಸಿದ ಬೆಂಗಳೂರಿನ ಯುವಕ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಭಾಷೆ ಬಿಟ್ಟರೆ ನಿಮಗೆ ಬೇರೇನೂ ಸಮಸ್ಯೆ ಆಗಲ್ಲ ಎಂದಿದ್ದಾರೆ. ಮತ್ತೊಬ್ಬರು, ಇಲ್ಲಿ ಒಂದು ಸಮಸ್ಯೆಯಿದೆ. ಗುರಗಾಂವ್‌ನಲ್ಲಿ ಜನರ ಮನಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಅಲ್ಲದೆ, ದಯವಿಟ್ಟು ಉತ್ತಮ ಗಾಳಿ ಶುದ್ಧೀಕರಣ ಯಂತ್ರದಲ್ಲಿ ಹೂಡಿಕೆ ಮಾಡಲು ಮರೆಯಬೇಡಿ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ಎಲ್ಲಿ ನೆಲೆಸಿದರೂ ಆ ಊರನ್ನು ಪ್ರೀತಿಸಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ