ಹೆಣ್ಣು ಮೇಕೆಯೊಂದಿಗೆ ವ್ಯಕ್ತಿಯೊಬ್ಬರು ಮದುವೆಯಾದ ಘಟನೆಯೊಂದು ಇಂಡೋನೇಷ್ಯಾದಲ್ಲಿ ನಡೆದಿದ್ದು, ಇದರ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ಅಲ್ಲದೆ ವಿಡಿಯೋ ನೋಡಿದ ನೆಟ್ಟಿಜನ್ಸ್ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಒಂದಷ್ಟು ಮಂದಿ ಟೀಕೆಗಳನ್ನೂ ವ್ಯಕ್ತಪಡಿಸಿದ್ದಾರೆ. 44 ವರ್ಷದ ಸೈಫುಲ್ ಆರಿಫ್ ಎಂಬ ಇಂಡೋನೇಷ್ಯಾದ ವ್ಯಕ್ತಿ ಜೂನ್ 5 ರಂದು ಗ್ರೆಸಿಕ್ನ ಬೆಂಜೆಂಗ್ ಜಿಲ್ಲೆಯ ಕ್ಲಾಂಪೋಕ್ ಗ್ರಾಮದಲ್ಲಿ ರಹಾಯು ಬಿನ್ ಬೆಜೊ ಎಂಬ ಮೇಕೆಯನ್ನು ಮದುವೆಯಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಸೂರ್ಯ ಟಿವಿ ಕೂಡ ರಿಪೋಸ್ಟ್ ಮಾಡಿದೆ.
ಇದನ್ನೂ ಓದಿ: Viral Video: ಬೋರ್ವೆಲ್ಗೆ ಬಿದ್ದ 18 ತಿಂಗಳ ಮಗುವನ್ನು ಕಾಪಾಡಿದ ಸೈನಿಕರು; ವಿಡಿಯೋ ವೈರಲ್
ವೀಡಿಯೋದಲ್ಲಿ ನೋಡುವಂತೆ, ವಧು(ಮೇಕೆ) ಶಾಲು ಹೊದ್ದುಕೊಂಡಿರುವುದನ್ನು ಕಾಣಬಹುದು. ಸಾಂಪ್ರದಾಯಿಕ ಜಾವಾನೀಸ್ ವೇಷಭೂಷಣಗಳನ್ನು ಧರಿಸಿದ ಸ್ಥಳೀಯರ ಗುಂಪು ವಿವಾಹ ಸಮಾರಂಭದಲ್ಲಿ ಭಾಗವಹಿಸಿದೆ. ವರದಿಯ ಪ್ರಕಾರ, ಸೈಫುಲ್ ವರದಕ್ಷಿಣೆಯನ್ನು 22,000 ರೂಪಾಯಿ ಎಂದು ಉಲ್ಲೇಖಿಸಿದ ‘ಅಕಾದ್ ನಿಕಾಹ್’ ಅನ್ನು ಪಠಿಸಿದರು. ಅಲ್ಲದೆ ವಿಚಿತ್ರ ಮದುವೆಯ ವಿಡಿಯೋ ಸಾರ್ವಜನಿಕ ಟೀಕೆಗೆ ಕಾರಣವಾಗಿದೆ.
ವೈರಲ್ ಉದ್ದೇಶಕ್ಕಾಗಿ ನಿರ್ಮಿಸಲಾದ ವಿಡಿಯೋ ಎಂದು ಒಪ್ಪಿಕೊಳ್ಳುವಂತೆ ಸೈಫುಲ್ ಅವರಿಗೆ ಮುಂದೆ ಬರಲು ಒತ್ತಾಯಿಸಲಾಗಿದೆ. ಅದರಂತೆ ”ಇದು ಸಂಪೂರ್ಣವಾಗಿ ನಟನೆಯಾಗಿದೆ ಮತ್ತು ಅದನ್ನು ವೈರಲ್ ಮಾಡುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮದ ವಿಷಯಕ್ಕಾಗಿ ನಿರ್ಮಿಸಲಾಗಿದೆ. ವಿಡಿಯೋವನ್ನು ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ರಚಿಸಲಾಗಿದೆ” ಎಂದು ಸೈಫುಲ್ ಹೇಳಿದ್ದಾರೆ.
ಇದನ್ನೂ ಓದಿ: Viral Video: ಚಲಿಸುತ್ತಿರುವ ರೈಲಿನಿಂದ ಸ್ಪೈಡರ್ಮ್ಯಾನ್ ಶೈಲಿಯಲ್ಲಿ ಮೊಬೈಲ್ ಕದ್ದ ಖದೀಮ
ಆದರೆ, ನೆಟ್ಟಿಜನ್ಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, “ಅಸಹ್ಯಕರ ವಿಷಯ, ಹಣವನ್ನು ಗಳಿಸಬಹುದು, ಆದರೆ ಸಾರ್ವಜನಿಕರಿಗೆ ಸಮಸ್ಯೆಯನ್ನು ಸೃಷ್ಟಿಸುತ್ತದೆ” ಎಂದಿದ್ದಾರೆ. ಮತ್ತೊಬ್ಬರು, “ಮದುವೆಯಾಗುವವರನ್ನು ಮಾತ್ರ ದೂಷಿಸಬೇಡಿ. ಗ್ರಾಮದ ಮುಖ್ಯಸ್ಥರು ಮತ್ತು ಮದುವೆಯನ್ನು ಬೆಂಬಲಿಸುವ ಸುತ್ತಮುತ್ತಲಿನ ಜನರು ಹುಚ್ಚರಾಗಿದ್ದಾರೆಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ. ಇನ್ನಬ್ಬ ನೆಟ್ಟಿಗರು, “ಅವರು ಅದನ್ನು ನಿಷೇಧಿಸಲಿಲ್ಲ, ಆದರೆ ಅವರು ಅದನ್ನು ಪ್ರೋತ್ಸಾಹಿಸಿದರು” ಎಂದಿದ್ದಾರೆ.
ವಿಡಿಯೋ ವೀಕ್ಷಿಸಿ:
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:21 am, Fri, 10 June 22