AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಗೇಮ್ ಆಡುತ್ತಿದ್ದ ಯುವಕನ ಮೊಬೈಲ್ ಸ್ಕ್ರೀನ್‌ ನೋಡುತ್ತಾ ಕುಳಿತ ಕೋತಿ

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹದ್ದೇ ದೃಶ್ಯವೊಂದು ವೈರಲ್ ಆಗಿದೆ. ಕೋತಿಯೊಂದು ಮೊಬೈಲ್ ಗೇಮ್‌ಗೆ ಫುಲ್ ಫಿದಾ ಆಗಿದೆ. ಹೌದು, ಯುವಕನ ಮೊಬೈಲ್‌ ಸ್ಕ್ರೀನ್‌ನನ್ನೇ ನೋಡುತ್ತಾ ಕುಳಿತ ಕೋತಿಯ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಗೇಮ್ ಆಡುತ್ತಿದ್ದ ಯುವಕನ ಮೊಬೈಲ್ ಸ್ಕ್ರೀನ್‌ ನೋಡುತ್ತಾ ಕುಳಿತ ಕೋತಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Sep 09, 2026 | 5:20 PM

Share

ಮನುಷ್ಯರೇನಾದ್ರೂ ಅತಿಯಾಗಿ ಆಡಿದ್ರೆ, ಮಂಗನಂತೆ (monkey) ವರ್ತಿಸಬೇಡ ಎಂದು ಹೇಳುತ್ತೇವೆ. ಹೌದು, ನೀವು ಕೋತಿಗಳ ಚೇಷ್ಟೆಯನ್ನು ನೋಡಿರುತ್ತೀರಿ. ಆದರೆ ಈ ಕೋತಿ ಮಾತ್ರ ಬುದ್ಧಿವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ಯುವಕನೊಬ್ಬ ವಿಡಿಯೋ ಗೇಮ್ ಆಡುತ್ತಿದ್ದರೆ ಆತನ ಪಕ್ಕದಲ್ಲೇ ಕುಳಿತು ಮೊಬೈಲ್ ನನ್ನೇ ದಿಟ್ಟಿಸಿ ನೋಡುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ಯುವಕನ ಮೊಬೈಲ್‌ ಸ್ಕ್ರೀನ್ ನೋಡುತ್ತಾ ಕುಳಿತ ಕೋತಿ

ಗುಷನ್ ಲತಾ ತುಫನಿ (Gulshan Lat Tufani) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮೊಬೈಲ್ ನಲ್ಲಿ ಯುವಕನೊಬ್ಬ ಗೇಮ್ ಆಡುತ್ತಿದ್ದಾನೆ. ಆತನ ಪಕ್ಕದಲ್ಲೇ ಕುಳಿತಿದ್ದ ಕೋತಿಯೊಂದು ಸ್ಕ್ರೀನ್ ನ್ನು ತದೇಕಚಿತ್ತದಿಂದ ನೋಡುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಸಹವಾಸ ದೋಷ ಅಂದ್ರೆ ಇದೇ ಇರ್ಬೇಕು; ಹಸುವಿನ ಜತೆ ಸೇರಿ ಹುಲ್ಲು ತಿಂದ ಶ್ವಾನ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮೊಬೈಲ್ ಕಸಿದುಕೊಳ್ಳಲು ಸ್ಕೆಚ್ ಆಗ್ತಿದೆ ಎಂದಿದ್ದಾರೆ. ಇನ್ನೊಬ್ಬರು, ಇದು ಸಾಕಿದ ಮಂಗನೇ ಇರಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಕೋತಿ ಹಿಂದಿನ ಜನ್ಮದಲ್ಲಿ ಈತನ ಸ್ನೇಹಿತನಾಗಿರಬಹುದು ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us