
ಆನೆಗಳ (elephants)ಆಟ ತುಂಟಾಟಗಳನ್ನು ನೋಡುವುದೇ ಖುಷಿ. ಪುಟಾಣಿ ಆನೆಗಳು ನೋಡ ನೋಡುತ್ತಿದ್ದಂತೆ ಎಡವಟ್ಟು ಮಾಡಿಕೊಳ್ಳುವುದೇ ಹೆಚ್ಚು. ಈ ವೇಳೆ ತಾಯಾನೆ ತನ್ನ ಕಂದಮ್ಮಗಳ ರಕ್ಷಣೆಗೆ ನಿಲ್ಲುತ್ತವೆ. ಇದೀಗ ಈ ದೃಶ್ಯ ನೋಡಿದ್ರೆ ಜಗತ್ತಿನಲ್ಲಿ ಯಾರು ಕೈ ಬಿಟ್ಟರೂ ತಾಯಿ ಮಾತ್ರ ಸದಾ ಜತೆಗೆ ನಿಲ್ಲುತ್ತಾಳೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಮರಿಯಾನೆ ತಾಯಾನೆ ಹಿಂಬಾಲಿಸಿಕೊಂಡು ಹೋಗುತ್ತಾ ಮುಗ್ಗರಿಸಿ ಬಿದ್ದಿದೆ. ತನ್ನ ಕಂದ ಬಿದ್ದದನ್ನು ಕಂಡು ಎಬ್ಬಿಸಲು ಹರಸಾಹಸ ಪಟ್ಟಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಸಿನಗುಡಿ ಡೈರೀಸ್ (Masinagudi dairies) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ತಮಿಳುನಾಡಿನ ಮಸಿನಗುಡಿ ಈ ವನ್ಯಜೀವಿ ತಾಣದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ತಾಯಾನೆ ರಸ್ತೆ ದಾಟುತ್ತಿದ್ದಂತೆ ಮರಿಯಾನೆ ಅದನ್ನೇ ಹಿಂಬಾಲಿಸಿದೆ. ಹೀಗೆ ಹೋಗುತ್ತಿದ್ದ ವೇಳೆ ಪುಟಾಣಿ ಆನೆ ಮುಗ್ಗರಿಸಿ ಬಿದ್ದಿದೆ. ತನ್ನ ಕಂದಮ್ಮ ಬೀಳುತ್ತಿದ್ದಂತೆ ಮೇಲೆತ್ತಲು ತಾಯಾನೆ ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಹಣ್ಣು ಕೊಟ್ಟದ್ದಕ್ಕೆ ಫ್ರೂಟ್ಸ್ ಕಾರ್ಟ್ ಓನರ್‌ಗೆ ಥ್ಯಾಂಕ್ಸ್ ಹೇಳಿದ ಗಜರಾಜ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತಾಯಿ ಪ್ರೀತಿ ಎಂದರೆ, ಮತ್ತೊಬ್ಬರು, ತಾಯಿ ಪ್ರೀತಿ ಬಗ್ಗೆ ಹೇಳಲು ಪದಗಳೇ ಇಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಬೆಸ್ಟ್ ಮಮ್ಮಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ