AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ನನ್ನ ಟ್ಯಾಲೆಂಟ್ ನೋಡಲು ಮೊದ್ಲು ಕೆಲಸ ಕೊಡಿ; ವಿಭಿನ್ನ ಸಿವಿಯೊಂದಿಗೆ ಕೆಲ್ಸಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ

ಕೆಲಸ ಹುಡುಕುವಾಗ ರೆಸ್ಯೂಮ್ ಅಥವಾ ಸಿವಿ ಬಹಳ ಮುಖ್ಯ. ಸಿವಿ ನೋಡಿಯೇ ಎಷ್ಟೋ ಕಂಪನಿಗಳು ಕೆಲಸಕ್ಕೆ ತೆಗೆದುಕೊಳ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ರೆಸ್ಯೂಮ್ ನಲ್ಲಿ ಯಾವುದನ್ನು ಯಾವುದೇ ವಿವರವಾದ ಮಾಹಿತಿ ಉಲ್ಲೇಖಿಸದೇ, ನನ್ನ ಟ್ಯಾಲೆಂಟ್ ತಿಳಿಯಲು ನೀವು ನನಗೆ ಕೆಲಸ ಎಂದು ಉಲ್ಲೇಖಿಸಿದ್ದಾನೆ. ಈ ವ್ಯಕ್ತಿ ಉದ್ಯೋಗದಾತರಿಗೆ ಚಾಲೆಂಜ್ ನೀಡಿದ್ದಂತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ನನ್ನ ಟ್ಯಾಲೆಂಟ್ ನೋಡಲು ಮೊದ್ಲು ಕೆಲಸ ಕೊಡಿ; ವಿಭಿನ್ನ ಸಿವಿಯೊಂದಿಗೆ ಕೆಲ್ಸಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ
ಸಾಂದರ್ಭಿಕ ಚಿತ್ರImage Credit source: bymuratdeniz/E+/Getty Images/ Reddit
ಸಾಯಿನಂದಾ
|

Updated on: Oct 13, 2026 | 4:28 PM

Share

ಜಾಬ್ ಹುಡುಕುವಾಗ, ಕೆಲಸಕ್ಕೆ (job) ಅರ್ಜಿ ಹಾಕುವಾಗ ರೆಸ್ಯೂಮ್ ಬೇಕೇ ಬೇಕು. ಇದರಲ್ಲಿ ಉದ್ಯೋಗ ಹುಡುಕುವ ವ್ಯಕ್ತಿಯ ಕೌಶಲ್ಯಗಳು, ಅನುಭವ ಹಾಗೂ ಅರ್ಹತೆಗಳನ್ನು ಉಲ್ಲೇಖಿಸಲಾಗುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ವಿಭಿನ್ನವಾದ ರೆಸ್ಯೂಮ್ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾನೆ. ಹೌದು, ವಿವರವಾದ ಮಾಹಿತಿಯಿಲ್ಲದ ಅರ್ಧ ಫೋಟೋವಿರುವ ರೆಸ್ಯೂಮ್ ಕಳುಹಿಸಿ ನನ್ನ ಟ್ಯಾಲೆಂಟ್ ತಿಳಿಯಬೇಕು ಅಂದ್ರೆ ನನಗೆ ಕೆಲಸ ಕೊಡಿ ಎಂದು ಬರೆದಿರುವ ರೆಸ್ಯೂಮ್‌ ಸದ್ಯ ವೈರಲ್ ಆಗಿದೆ. ಈ ಉದ್ಯೋಗಕಾಂಕ್ಷಿಯ ಐಡಿಯಾಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ನನ್ನ ಟ್ಯಾಲೆಂಟ್ ನೋಡಲು ಮೊದ್ಲು ಕೆಲ್ಸ ಕೊಡಿ

ರಿಕ್ರೂಟಿಂಗ್ ಹೆಲ್ (r/recruitinghell) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬ ರೆಸ್ಯೂಮ್ ಹಂಚಿಕೊಂಡಿದ್ದಾನೆ. ಈ ಸಿವಿಯಲ್ಲಿ ವ್ಯಕ್ತಿಯ ವಿದ್ಯಾರ್ಹತೆ, ಕೆಲಸದ ಅನುಭವ, ಕೌಶಲ್ಯಗಳು, ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ವಿಳಾಸ ಸೇರಿದಂತೆ ಯಾವುದೇ ಮಾಹಿತಿ ಇಲ್ಲದಿರುವುದನ್ನು ಕಾಣಬಹುದು. ಅರ್ಧ ಫೋಟೋದ ಜತೆಗೆ ನನ್ನ ಟ್ಯಾಲೆಂಟ್ ಬಗ್ಗೆ ತಿಳಿಯಲು ಮೊದ್ಲು ಕೆಲಸ ಕೊಡಿ ಎಂದು ಬರೆದಿರುವುದನ್ನು ನೋಡಬಹುದು.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

Resume printed halfway and said: ‘Hire me to unlock full potential.’ 😂 by u/eloanmask in recruitinghell

ಇದನ್ನೂ ಓದಿ: ಕೆಲಸ ಕಳೆದುಕೊಂಡದ್ದು ನಷ್ಟಕ್ಕಿಂತ ಲಾಭವೇ ಹೆಚ್ಚು; ಭಾರತೀಯ ಯುವತಿ ಹೀಗೆನ್ನಲು ನೀಡಿದ ಕಾರಣ ಇಲ್ಲಿದೆ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ವ್ಯಕ್ತಿ ಎಷ್ಟು ಬುದ್ಧಿವಂತ ನೋಡಿ ಎಂದಿದ್ದಾರೆ. ಇನ್ನೊಬ್ಬರು, ನಮ್ಮದೇ ಸ್ವಂತ ಕಂಪನಿಯಿದ್ದರೆ ಉದ್ಯೋಗಕ್ಕೆ ಆಹ್ವಾನಿಸುತ್ತಿದ್ದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ನಾನೆಂದು ನೋಡಿರದ ಸಿವಿ ಇದು, ಉದ್ಯೋಗ ನೀಡುವವರಿಗೂ ಇದೊಂದು ಚಾಲೆಂಜ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ