Video: ಭಾರತೀಯ ಸ್ನೇಹಿತೆ ತಂದು ಕೊಟ್ಟ ಡ್ರೈ ಫ್ರೂಟ್ಸ್ ಲಡ್ಡು ಸವಿದ ರಷ್ಯನ್ ಯುವತಿ

ಇಂಡಿಯನ್ ಫುಡ್ ಅಂದ್ರೆ ವಿದೇಶಗಳಲ್ಲಿಯೂ ಸಿಕ್ಕಾಪಟ್ಟೆ ಫೇಮಸ್. ಮಸಾಲೆ ಭರಿತ ಹಾಗೂ ಸಿಹಿಯಾದ ಭಾರತೀಯ ತಿನಿಸುಗಳನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಆದ್ರೆ ಇದೀಗ ವಿದೇಶಿ ಯುವತಿಯೊಬ್ಬಳು ಡ್ರೈ ಫ್ರೂಟ್ಸ್ ಲಡ್ಡು ರುಚಿಗೆ ಫುಲ್ ಫಿದಾ ಆಗಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಭಾರತೀಯ ಸ್ನೇಹಿತೆ ತಂದು ಕೊಟ್ಟ ಡ್ರೈ ಫ್ರೂಟ್ಸ್ ಲಡ್ಡು ಸವಿದ ರಷ್ಯನ್ ಯುವತಿ
ವೈರಲ್‌ ವಿಡಿಯೋ
Image Credit source: Instagram

Updated on: Aug 20, 2026 | 3:57 PM

ಆಹಾರ ಪ್ರಿಯರಿಗಂತೂ ತಿನ್ನುವುದೆಂದರೆ ಇಷ್ಟನೇ. ಅದರಲ್ಲೂ ವಿವಿದ ಬಗೆಯ ತಿಂಡಿ ತಿನಿಸುಗಳನ್ನು ತಂದು ಮುಂದೆ ಇಟ್ಟರೆ ಬೇಡ ಎನ್ನಲು ಮನಸ್ಸು ಬರುವುದಿಲ್ಲ. ಭಾರತೀಯ ಆಹಾರ ಶೈಲಿಗೆ ವಿದೇಶಿಗರು ಫಿದಾ ಆಗೋದಿದೆ. ರಷ್ಯನ್ ಯುವತಿ (Russian young woman) ತನ್ನ ಭಾರತೀಯ ಸ್ನೇಹಿತೆ ತಂದು ಕೊಟ್ಟ ಡ್ರೈ ಫ್ರೂಟ್ಸ್ ಲಡ್ಡು ಸವಿದಿದ್ದಾಳೆ. ವಿದೇಶಿ ಯುವತಿ ಭಾರತೀಯರ ಕೈ ರುಚಿಗೆ ಫುಲ್ ಫಿದಾ ಆಗಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಾಣಿ (Rani) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕ್ಲಿಪಿಂಗ್ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಭಾರತೀಯ ಯುವತಿ ರಷ್ಯನ್ ಸ್ನೇಹಿತೆಗೆ ಮನೆಯಲ್ಲೇ ಮಾಡಿದ ಡ್ರೈ ಫ್ರೂಟ್ಸ್ ಲಡ್ಡು ತಂದುಕೊಟ್ಟಿದ್ದಾಳೆ. ಇದು ಹೋಮ್ ಮೇಡ್ ಲಡ್ಡು, ಇದು ನನ್ನ ಸಹೋದರಿ ಮಾಡಿದ್ದು ಎಂದು ಹೇಳಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಬಾಯಿಚಪ್ಪರಿಸಿಕೊಂಡು ಲಡ್ಡು ಸವಿದ ರಷ್ಯನ್ ಯುವತಿ ಕ್ಯೂಟ್ ರಿಯಾಕ್ಷನ್ ನೀಡಿದ್ದಾಳೆ. ಇದು ಯಾವುದರಿಂದ ಮಾಡಿದ್ದು ಎಂದು ವಿದೇಶಿ ಯುವತಿ ಕೇಳುತ್ತಿದ್ದಂತೆ, ಒಣ ಹಣ್ಣುಗಳು, ವಾಲ್ ನಟ್ಸ್, ಬೀಜದಿಂದ ಮಾಡಿದ್ದು, ಇದರಲ್ಲಿ ಸಕ್ಕರೆ ಹಾಕಿಲ್ಲ, ಆರೋಗ್ಯಕ್ಕೆ ಒಳ್ಳೆಯದು ಎಂದು ತನ್ನ ಭಾರತೀಯ ಸ್ನೇಹಿತೆ ಹೇಳುತ್ತಿರುವುದನ್ನು  ನೋಡಬಹುದು.

ಇದನ್ನೂ ಓದಿ: ಬಾಯಿ ಚಪ್ಪರಿಸಿಕೊಂಡು ಪಾನಿಪುರಿ ಸವಿದ ವಿದೇಶಿ ಮಹಿಳೆ

ಈ ವಿಡಿಯೋ ಎಪ್ಪತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನೋಡಿದ್ರೆ ರುಚಿಕರವಾಗಿದೆ ಎಂದೇನಿಸುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಲಡ್ಡು ಗೋಪಾಲ್ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು, ನನ್ನ ಬಾಯಲ್ಲಿ ನೀರು ಬಂತು ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 3:55 pm, Thu, 20 August 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us