Diary : ಯಾರ ಬಳಿಯೂ ಹೇಳಿಕೊಳ್ಳಲಾಗದ ಭಾವನೆಗಳನ್ನು ವಿಷಯಗಳನ್ನು ಇವನ/ಇವಳ ಹೊಟ್ಟೆಗೆ ಹಾಕಿ ತುಸುಹೊತ್ತು ನಿರಾಳವಾಗಿ ಇರಬಹುದು. ಡೈರಿ ಎಂಬ ಇಂಥ ಆಪ್ತಮಿತ್ರ/ಮಿತ್ರೆ ಈಗಲೂ ನಿಮ್ಮ ಬಳಿ ಇದ್ದಾರೆಯೇ? ಈಗಲೂ ಇವರೊಂದಿಗೆ ನಿಮ್ಮ ಒಡನಾಟ ಮುಂದುವರೆದಿದೆಯೇ? ಎಂದಾದರೂ ನಿಮ್ಮ ಡೈರಿಯನ್ನು ಯಾರಾದರೂ ತೆರೆದು ನೋಡಿದ್ದಿದೆಯೇ? ಇದೀಗ ವೈರಲ್ ಆಗಿರುವ ಈ ಫೋಟೋ ನೋಡಿ. ಅಕ್ಕ ತನ್ನ ತಮ್ಮನ ಡೈರಿ ಪುಟವನ್ನು ರೆಡ್ಡಿಟ್ನಲ್ಲಿ (Reddit) ಹಂಚಿಕೊಂಡು, ತಾನೊಬ್ಬಳು ಮೂರ್ಖ ಅಕ್ಕ ಎಂದೆನ್ನಿಸುತ್ತಿದೆ ಎಂದಿದ್ದಾಳೆ.
Found this in my brothers diary. Feeling like a fool sister 🙂
by u/cartboarding in indiasocial
ಈ ಡೈರಿಯಲ್ಲಿ ಏನಿದೆ?
ನನ್ನ ಈ ನಡೆವಳಿಕೆಗಳನ್ನು ನಾನು ತೊರೆಯಬೇಕು;
ಒರಟಾಗಿ ಮಾತನಾಡುವುದು.
ಬೆಳಗ್ಗೆ ತಡವಾಗಿ ಏಳುವುದು.
ಅಭ್ಯಾಸ ಮಾಡದೇ ಇರುವುದು.
ಮೊಬೈಲ್ ನೋಡುವುದು.
ಟಿವಿ ನೋಡುವುದು.
ಮೂರ್ಖ ಅಕ್ಕನ ಮೇಲೆ ಕೋಪ ಮಾಡಿಕೊಳ್ಳುವುದು.
ತುಂಬಾ ಮಾತನಾಡುವುದು.
ಇದನ್ನೂ ಓದಿ : Viral Video: ಚುಂಬನವೃತ್ತಾಂತ; ಆಕೆ ಕೊಟ್ಟಿದ್ದನ್ನು ಆಕೆಗೇ ಮರಳಿಸಿತು ಹಾವು, ಮುಂದೆ?
ನೆಟ್ಟಿಗರ ಪ್ರತಿಕ್ರಿಯೆ
ಎಲ್ಲಾ ಸರಿ ಆದರೆ ನೀವು ಯಾಕೆ ಈ ಡೈರಿ ಓದುತ್ತಿದ್ದೀರಿ? ಮೂರ್ಖ ಸಹೋದರಿಯರು ಮಾಡುವ ಅಪರಾಧವಿದು! ಎಂದಿದ್ದಾರೆ ನೆಟ್ಟಿಗರು. ಡೈರಿ ಎಂದರೆ ಖಾಸಗೀ ಅಲ್ಲವೆ, ನೀವು ಹೀಗೆ ಓದಿದ್ದು ಸರಿಯಲ್ಲ, ಜತೆಗೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಕೂಡ ಎಂದಿದ್ದಾರೆ ಒಬ್ಬರು. ಎಂಥ ಮುದ್ದು, ನಿಮ್ಮ ತಮ್ಮನಿಗೆ ಎಷ್ಟು ವಯಸ್ಸು? ಎಂದು ಕೇಳಿದ್ದಾರೆ ಇನ್ನೊಬ್ಬರು. ಪ್ರತಿಯೊಬ್ಬರೂ ಇಂಥ ಸಹೋದರ ಅಥವಾ ಸಹೋದರಿಯರನ್ನು ತಮ್ಮ ಜೀವನದಲ್ಲಿ ಬಯಸುತ್ತಾರೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಮಕ್ಕಳಿಂದಾಗಿ ಫಜೀತಿಗೆ ಬಿದ್ದ ಕರಡಿಯಮ್ಮ; ಅಪ್ಪನೆಲ್ಲಿ ಎನ್ನುತ್ತಿರುವ ನೆಟ್ಟಿಗರು
ಹೀಗೆ ನೀವು ಅವನ ಡೈರಿ ಹಂಚಿಕೊಂಡಿದ್ದು ಅವನಿಗೆ ಗೊತ್ತಾದರೆ ನೀವು ನಿಜವಾಗಲೂ ಮೂರ್ಖ ಅಕ್ಕನಾಗುತ್ತೀರಿ ಎಂದಿದ್ದಾರೆ ಒಬ್ಬರು. ಮೂರ್ಖ ಎಂದು ಕರೆಯಲು ಕಾರಣ ಇದೆ, ಇನ್ನೊಬ್ಬರ ಡೈರಿಯನ್ನು ಯಾವತ್ತೂ ಓದಬಾರದು, ಇದು ಆ ಮಗುವಿಗೆ ಗೊತ್ತಾದರೆ ನಂಬಿಕೆಯನ್ನು ಕಳೆದುಕೊಳ್ಳುತ್ತೀರಿ, ದಯವಿಟ್ಟು ನಿಲ್ಲಿಸಿ ಇಲ್ಲವಾದಲ್ಲಿ ಬದುಕಿನುದ್ದಕ್ಕೂ ಇದು ಸಮಸ್ಯೆಯಾಗುತ್ತದೆ ಎಂದಿದ್ದಾರೆ ಮತ್ತೊಬ್ಬರು.
ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:58 am, Sat, 5 August 23