
ವಾಹನಗಳನ್ನು ನಿಧಾನವಾಗಿ ಓಡಿಸಿ ಅಂದ್ರೂ ಕೆಲವರಿಗೆ ಎಷ್ಟೇ ಹೇಳಿದ್ರು ಅರ್ಥವೇ ಆಗಲ್ಲ. ಯಾವುದಕ್ಕೂ ಕ್ಯಾರೇ ಎನ್ನದೇ ಅತಿವೇಗವಾಗಿ ವಾಹನ ಚಲಾಯಿಸಿ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಅದಲ್ಲದೇ, ಅತಿ ವೇಗವಾಗಿ ವಾಹನ ಓಡಿಸಿದರ ಪರಿಣಾಮವಾಗಿ ಭಯಾನಕ ಅಪಘಾತ (accident) ಗಳು ನಡೆಯುತ್ತಲೇ ಇರುತ್ತದೆ. ಇದೀಗ ಇಂತಹದ್ದೇ ಭಯಾನಕ ಅಪಘಾತವೊಂದು ಸಂಭವಿಸಿದ್ದು ನಿಂತಿದ್ದ ಟ್ಯಾಂಕರ್ (tanker) ಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಟ್ಯಾಂಕರ್ ಹಿಂಬದಿಯಲ್ಲಿ ನಿಂತಿದ್ದ ಟ್ಯಾಂಕರ್ ಡ್ರೈವರ್ ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೂ ಮೇಲಕ್ಕೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದಾರೆ.ಈ ದೃಶ್ಯವೊಂದು ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
@DriveSmartIN ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ.ಈ ವಿಡಿಯೋದಲ್ಲಿ ರಸ್ತೆಯ ಪಕ್ಕದಲ್ಲಿ ಟ್ಯಾಂಕರ್ ವೊಂದು ನಿಂತಿರುವುದನ್ನು ಕಾಣಬಹುದು. ಟ್ಯಾಂಕರ್ ಹಿಂಭಾಗದಲ್ಲಿ ಡ್ರೈವರ್ ನಿಂತಿದ್ದಾನೆ.ಯಮವೇಗದಲ್ಲಿ ಬಂದ ಕಾರು ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಟ್ಯಾಂಕರ್ ಡ್ರೈವರ್ ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೂ ಮೇಲಕ್ಕೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದು ಸ್ಥಳೀಯರು ಓಡೋಡಿ ಬಂದಿದ್ದಾರೆ.
ಇದನ್ನೂ ಓದಿ : ಅಯ್ಯೋ ರಾಮ, ಅಮ್ಮ ನಿಂಗೆ ಹೇಗೆ ಅರ್ಥ ಮಾಡಿಸೋದು ಗೊತ್ತಾಗ್ತಿಲ್ಲ ನನಗೆ, ಈ ಪುಟಾಣಿಯ ಕಷ್ಟ ನೋಡಿ
When an EV desperately wants fuel ⛽ !!
Poor infrastructure, untrained drivers and powerful cars –> its waiting to happen !!
Unfortunately, as everything is random,no one focuses on these and just riding on luck !! pic.twitter.com/vddFvPaGOi
— DriveSmart🛡️ (@DriveSmart_IN) May 30, 2025
ಈ ವಿಡಿಯೋವೊಂದು ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾರೆ. ಬಳಕೆದಾರರೊಬ್ಬರು, ಏನೇ ಆಗಲಿ ನಮ್ಮ ಜನರು ಇಂತಹ ವಿಷಯಗಳಲ್ಲಿ ಬುದ್ಧಿ ಕಲಿಯುವುದಿಲ್ಲ. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಮೊಬೈಲ್ ಬಳಕೆ ಮಾಡುವುದು ಒಳ್ಳೆಯದಲ್ಲ ಎಂದಿದ್ದಾರೆ. ಮತ್ತೊಬ್ಬರು, ಈಗಿನ ಚಾಲಕನು ಕೈಗೆ ವಾಹನ ಸಿಕ್ಕೊಡನೆ ವೇಗವಾಗಿ ವಾಹನ ಓಡಿಸುತ್ತಾರೆ, ಈ ಮೂಲಕ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ದಾರಿ ಮಾಡಿಕೊಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಡ್ರೈವಿಂಗ್ ಲೈಸನ್ಸ್ ನೀಡುವಾಗ ಕಟ್ಟು ನಿಟ್ಟಿನ ಕಾನೂನನ್ನು ಜಾರಿಗೊಳಿಸಬೇಕು. ಮಾರುತಿ 800 ಕಾರನ್ನು ಓಡಿಸಲು ಬಾರದ ಜನರ ಕೈಗೆ ದೊಡ್ಡ ದೊಡ್ಡ ಕಾರುಗಳನ್ನು ನೀಡಬಾರದು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Fri, 30 May 25