
ಸೋಶಿಯಲ್ ಮೀಡಿಯಾದಲ್ಲಿ ಹಾವು ಮುಂಗುಸಿಯ ಕಾದಾಟದ ದೃಶ್ಯಗಳನ್ನು ನೋಡಿರುತ್ತೀರಿ. ಬೆಕ್ಕೊಂದು (cats) ಹಾವಿನೊಂದಿಗೆ ಕಾದಾಟಕ್ಕೆ ಇಳಿದಿದೆ. ಮನೆ ಹತ್ತಿರ ಬಂದ ಹಾವಿನ ಜತೆಗೆ ಜಗಳಕ್ಕೆ ಇಳಿದಿದೆ. ಕೊನೆಗೆ ಈ ಬಿಗ್ ಫೈಟ್ ತಿರುವು ಪಡೆದುಕೊಂಡಿದೆ. ಈ ಕಾದಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂಥೋನಿ ಹ್ಯಾರ್ರಿಸ್ (Anthony Harris) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಬೆಕ್ಕು ಹಾವು ಕಾಳಗದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮನೆಯ ಅಂಗಳದಲ್ಲಿ ಹಾವೊಂದು ತೆವಳುತ್ತಾ ಬಂದಿದೆ. ಇದನ್ನು ನೋಡಿ ಬೆಕ್ಕು ಹಾವನ್ನು ಕೆಣಕಿದೆ. ಆದರೆ ಈ ಹಾವು ಬೆಕ್ಕಿಗೆ ಹೆದರಿ ಜೀವ ರಕ್ಷಣೆಗಾಗಿ ಕಾದಾಟಕ್ಕೆ ಇಳಿದಿದೆ. ಕೊನೆಗೆ ಈ ಬಿಗ್ ಫೈಟ್ ತಾರಕಕ್ಕೇರಿದ್ದು ಸುಸ್ತಾದ ಹಾವು ಮಾತ್ರ ಸುಮ್ಮನೆ ಹೊರಟಿದೆ. ಆದರೆ ಬೆಕ್ಕು ಮತ್ತೆ ತನ್ನ ಮುಂಭಾಗದ ಕಾಲಿನಿಂದ ಹಾವನ್ನು ಎಳೆಯುತ್ತಾ ಕೆಣಕಿದೆ. ಕೊನೆಗೆ ಹಾವು ಸುಮ್ಮನಾಗಿದ್ದು ಬೆಕ್ಕು ಅದರ ಪಕ್ಕದಲ್ಲೇ ಸುಮ್ಮನೆ ಕುಳಿತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಅಟ್ಯಾಕ್ ಮಾಡಲು ಬಂದ ಬೆಕ್ಕನ್ನೇ ಹೆದರಿಸಿ ಓಡಿಸಿದ ವಿಷಕಾರಿ ಹಾವು, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ, ಈ ಹಾವಿಗಿಂತ ಬೆಕ್ಕು ಬಹಳ ವೇಗವಾಗಿ ಪ್ರತಿಕ್ರಿಯಿಸುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಕೊನೆಗೆ ಬೆಕ್ಕು ಗೆದ್ದು ಬಿಡ್ತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದರಲ್ಲಿ ಗೆದ್ದವರು ಯಾರು ಎಂದು ಕೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ