Viral Video : ಕಳೆದ ವರ್ಷವು ರಷ್ಯಾ-ಉಕ್ರೇನ್ ಯುದ್ಧದ ಕರಾಳ ನೆನಪಲ್ಲೇ ಕಳೆದು ಹೋಯಿತು. ಹೊಸ ವರ್ಷದ ಆರಂಭದಲ್ಲಿ ಈ ವಿಡಿಯೋ ಆಶಾಭಾವನೆಯನ್ನು ತರಲಿ ಎಂಬ ಆಶಯದಿಂದ ಉಕ್ರೇನಿನ ಆಂತರಿಕ ವ್ಯವಹಾರಗಳ ಸಚಿವರಿಗೆ ಸಲಹೆಗಾರರಾಗಿರುವ ಆ್ಯಂಟನ್ ಗೆರಾಶ್ಚೆಂಕೋ ಈ ಮುದ್ದಾದ ವಿಡಿಯೋ ಟ್ವೀಟ್ ಮಾಡಿದ್ದಾರೆ. ಉಕ್ರೇನಿನ ಯೋಧ ತನ್ನ ಎಳೆಗೂಸನ್ನು ಗಿಟಾರಿನ ಮೇಲೆ ಮಲಗಿಸಿಕೊಂಡು ಜೋಗುಳ ಹಾಡುತ್ತಿರುವ ವಿಡಿಯೋ ಇದಾಗಿದೆ. ಈ ಯೋಧ ಹಾಡಿರುವ ಜೋಗುಳವನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ ಆ್ಯಂಟನ್.
Ukrainian Warrior Oleg Berestovyi sang a lullaby for his son with beautiful lyrics. I decided to translate them for you. pic.twitter.com/nAjyftvQY6
ಇದನ್ನೂ ಓದಿ— Anton Gerashchenko (@Gerashchenko_en) January 2, 2023
ರಷ್ಯಾದ ದಾಳಿ ನಡೆದು ಇಷ್ಟು ತಿಂಗಳಾದರೂ ಉಕ್ರೇನ್ ಇನ್ನೂ ಕತ್ತಲೆಯಲ್ಲಿಯೇ ಇದೆ ಎಂಬ ಬೇಸರ ಜಗತ್ತಿನ ಅನೇಕರನ್ನು ನೋಯಿಸುತ್ತಿದೆ. ಹಾಗಾಗಿ ಅಲ್ಲಿ ಬೆಳಕು ಸೂಸಲೆಂದು ಅನೇಕ ಬಗೆಯ ಪ್ರಯತ್ನಗಳನ್ನು ಕೆಲವರಾದರೂ ನಡೆಸುತ್ತಿದ್ಧಾರೆ ಎನ್ನುವುದೇ ಈ ಹೊತ್ತಿನ ಭರವಸೆ. ಇಂಥ ವಿಡಿಯೋಗಳು ಹಲವಾರು ಜನರ ಮನದಲ್ಲಿ ಮೂಡಿರುವ ಭಯವನ್ನು ಹೊಡೆದೋಡಿಸಲಿ, ಮತ್ತೆ ಹೊಸ ಕಾಲ ಅರಳಲಿ ಎಂದು ಅನೇಕ ನೆಟ್ಟಿಗರು ಹಾರೈಸುತ್ತಿದ್ದಾರೆ.
ಇದನ್ನೂ ಓದಿ : ನಾನಂತೂ ಕೂಸು, ಎಲ್ಲಾ ಈ ಬಿಯರ್ ಕ್ಯಾನಿನದೇ ತಪ್ಪು!
ಈ ವಿಡಿಯೋದಲ್ಲಿರುವ ಯೋಧನ ಹೆಸರು ಒಲೆಗ್ ಬೆರೆಸ್ಟೋವಿ. ಗಿಟಾರಿನ ಮೇಲೆ ಹಸುಗೂಸನ್ನು ಮಲಗಿಸಿಕೊಂಡು ಹಾಡುತ್ತಿರುವ ಈ ವಿಡಿಯೋ ಎಂಥವರ ಮನಸ್ಸನ್ನೂ ಅಲ್ಲಾಡಿಸುವಂತಿದೆ. ಸಂಗೀತಕ್ಕೆ ಮನಸೋಲದವರು ಯಾರಿದ್ಧಾರೆ? ಮಗು ಶಾಂತವಾಗಿ ನಿದ್ರಿಸುತ್ತಿದೆ. ಈ ಕ್ಲಿಪ್ನ ಪೂರ್ತಿ ವಿಡಿಯೋ ಇಲ್ಲಿದೆ ಕೇಳಿ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
Here is longer version. It is really moving. https://t.co/2eK7vt3umJ
— Mikolaj (@mikolajnalej) January 3, 2023
ಈತನಕ ಈ ವಿಡಿಯೋ ಅನ್ನು ಸುಮಾರು 74,000 ಜನರು ನೋಡಿದ್ದಾರೆ. ಹೀಗೆ ಸಂಗೀತವನ್ನು ಕೇಳುತ್ತ ಬೆಳೆಯುತ್ತಿರುವ ಮಗು ಖಂಡಿತ ಸ್ವತಂತ್ರ್ಯ ವ್ಯಕ್ತಿತ್ವನ್ನು ಹೊಂದುತ್ತದೆ ಎಂದು ಹೇಳಿದ್ಧಾರೆ ಅನೇಕರು. ಈ ಭಾಷೆ ಮತ್ತು ಅದರ ಅರ್ಥದ ಕಡೆ ಗಮನ ಕೊಡದೆ ಹಲವಾರು ಬಾರಿ ಈ ವಿಡಿಯೋ ನೋಡಿದೆ, ಜೋಗುಳವನ್ನೂ ಕೇಳಿದೆ. ಪ್ರೀತಿಯಿಂದ ಎರಕ ಹೊಯ್ದಿದೆ. ಖಂಡಿತ ಈ ಧ್ವನಿಯು, ದೃಶ್ಯವು ಕದಡಿದ ನೀರನ್ನು ತಿಳಿಗೊಳಿಸುತ್ತದೆ ಎಂದಿದ್ದಾರೆ ಒಬ್ಬರು. ಅನೇಕರು ಈ ಕುರಿತು ಇದೇ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:25 pm, Tue, 3 January 23