Viral Video: ವೈಪರ್ ವಿಥ್ ಸ್ಟಿಕರ್​; ಈ ಕಾರ್​ನಿಂದ ಅದೆಷ್ಟು ಅಪಘಾತಗಳಾಗಿವೆಯೋ

| Updated By: ಶ್ರೀದೇವಿ ಕಳಸದ

Updated on: Jul 28, 2023 | 6:41 PM

Car : 26 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ನಿಮ್ಮ ಕಾರನ್ನು ಉಳಿದ ಕಾರುಗಳೆಲ್ಲಾ ಹಿಂಬಾಲಿಸಬೇಕೆಂದರೆ ಇಂಥ ಅದ್ಭುತವಾದ ಪ್ರಯೋಗ ಮಾಡಬೇಕು ನೋಡಿ ಎಂದು ಒಂದಿಷ್ಟು ಜನ ಸಲಹೆ ನೀಡಿದ್ದಾರೆ!?

Viral Video: ವೈಪರ್ ವಿಥ್ ಸ್ಟಿಕರ್​; ಈ ಕಾರ್​ನಿಂದ ಅದೆಷ್ಟು ಅಪಘಾತಗಳಾಗಿವೆಯೋ
ಯಾರ ತಲೆಯಲ್ಲಿ ಮೊಳೆತ ಐಡಿಯಾ ಇದು?
Follow us on

Wiper : ಇದಕ್ಕೇನು ಅತಿಯಾಟ ಅನ್ನುತ್ತೀರೋ ಅಧಿಕ ಪ್ರಸಂಗ ಎನ್ನುತ್ತೀರೋ ಅಭಿವ್ಯಕ್ತಿ ಸ್ವಾತಂತ್ರ್ಯವೆನ್ನುತ್ತೀರೋ ಅಸಭ್ಯವೆನ್ನುತ್ತೀರೋ ನಿಮಗೆ ಬಿಟ್ಟದ್ದು. ‘Out of Context Human Race’ ಎನ್ನುವ ಟ್ವಿಟರ್ ಬಳಕೆದಾರರು ಇದನ್ನು ಟ್ವೀಟ್ ಮಾಡಿದ್ದಾರೆ. ಇದನ್ನು ನೀವು ಎಡಬಿಡಂಗಿತನವೆಂತಲೂ ಅನ್ನಿ ಬೇಕಿದ್ದರೆ. ಲೋಕೋ ಭಿನ್ನ ರುಚಿಃ. ಇಲ್ಲಿ ಹೆದ್ದಾರಿಯ ಮೇಲೆ ನಿಧಾನವಾಗಿ ಒಂದು ಕಾರು (Car) ಸಾಗುತ್ತಿದೆ. ಮಳೆ ಸುರಿಯುತ್ತಿರುವುದರಿಂದ ಅದರ ಹಿಂದಿನ ವೈಪರ್ ಅತ್ತಿಂದಿತ್ತ ಓಡಾಡುತ್ತಿದೆ. ವಿಡಿಯೋ ಇರುವುದು ಇಷ್ಟೇ.

ನೋಡಿದಿರಲ್ಲ ಹೇಳಲು ಉಳಿದಿದೆ ಏನು? ಕಾರಿನ ಹಿಂದೆ ಅಂಟಿಸಿದ ಸ್ಟಿಕರ್ ಮತ್ತು ವೈಪರ್​ಗಳ ಜೊತೆಯಾಟದಿಂದ ಈ ಕಾರು ನೆಟ್ಟಿಗರ ಗಮನವನ್ನು ಸೆಳೆದಿದೆ. 26 ಮಿಲಿಯನ್​ ಜನರು ಇದನ್ನು ನೋಡಿದ್ದಾರೆ. ಸುಮಾರು 2.5 ಲಕ್ಷ ಜನರು ಲೈಕ್ ಮಾಡಿದ್ದಾರೆ. ರೀಟ್ವೀಟ್​ ಮಾಡಿದವರ ಸಂಖ್ಯೆ 28,000. ಜಗತ್ತಿನ ಪೋಲಿಗಳ ಗುಂಪೆಲ್ಲಾ ಇಲ್ಲಿ ನೆರೆದಿದೆ. ಅನೇಕರು ನನಗೆ ಇಂಥ ವೈಪರ್​ ಮತ್ತು ಸ್ಟಿಕರ್ ಬೇಕು ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ : Viral Video: ಇವರುಗಳ ಶ್ರಮಕ್ಕೆ ವಿಜ್ಞಾನವೂ ವಿಚಾರವೂ ಕೌಶಲವೂ ಸೇರಿದಾಗ

ಹೀಗೆ ಮಳೆಯಲ್ಲಿ ಹೋಗುತ್ತಿರುವಾಗ ಟ್ರಾಫಿಕ್​ನಲ್ಲಿ ಈ ಕಾರಿನ ಹಿಂದೆ ಸಿಕ್ಕಿಹಾಕಿಕೊಳ್ಳುವುದು ಬಹಳ ಮಜಾ! ಎಂದಿದ್ದಾರೆ. ಈ ಕನಸು ಯಾವಾಗ ನನಸಾಗುತ್ತದೆಯೋ ಎಂದು ಕೆಲವರು. ಇಂಥ ಕ್ರಿಯೇಟಿವ್​ ವಿಡಿಯೋ ಎಂದೂ ನೋಡಿರಲಿಲ್ಲ ಎಂದು ಇನ್ನೂ ಕೆಲವರು. ಈ ಕಾರು ಓಡಾಡಿದ ಊರುಗಳಲ್ಲೆಲ್ಲ ಆ್ಯಕ್ಸಿಡೆಂಟ್ ಆಗುವುದು ಗ್ಯಾರಂಟೀ! ಎಂದಿದ್ದಾರೆ ಮತ್ತೊಂದಿಷ್ಟು ಜನ.

ಇದನ್ನೂ ಓದಿ : Viral: ಚಿಪ್ಪುಮೀನಿನ ಖಾದ್ಯದಲ್ಲಿ ಸಿಕ್ಕ ಮುತ್ತು; ಅದನ್ನಾಕೆ ನಿಶ್ಚಿತಾರ್ಥದ ಉಂಗುರವಾಗಿಸಿಕೊಂಡಳು

ಟ್ರಾಫಿಕ್ ಪೊಲೀಸರು ಈ ವ್ಯಕ್ತಿಯನ್ನು ವಿಚಾರಿಸಿಕೊಳ್ಳುತ್ತಿಲ್ಲವೆ? ಎಂದು ಒಬ್ಬರು ಕೇಳಿದ್ದಾರೆ. ಇದೇನು ಭಾರತವೋ? ಎಂದು ಪ್ರತಿಯಾಗಿ ಕೇಳಿದ್ದಾರೆ ಇನ್ನೊಬ್ಬರು. ನಿಮ್ಮ ಕಾರನ್ನು ಉಳಿದ ಕಾರುಗಳೆಲ್ಲಾ ಹಿಂಬಾಲಿಸಬೇಕೆಂದರೆ ಇಂಥ ಅದ್ಭುತವಾದ ಪ್ರಯೋಗ ಮಾಡಬೇಕು ನೋಡಿ! ಎಂದಿದ್ದಾರೆ ಒಂದಿಷ್ಟು ಜನ. ಭಾರತದಲ್ಲಾಗಿದ್ದರೆ ಪುಟ್ಟ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಏನಂತ ಉತ್ತರಿಸುವುದು? ದೊಡ್ಡ ಮಕ್ಕಳ ನೋಟವನ್ನು ಹೇಗೆ ಎದುರಿಸುವುದು? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತಿತ್ತು. ಸದ್ಯ!

ಏನಂತೀರಿ ನೀವು?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 6:40 pm, Fri, 28 July 23