Viral: ಪುರುಷರಂತೆ ನಿಂತುಕೊಂಡೇ ಮೂತ್ರ ವಿಸರ್ಜನೆ ಮಾಡಿದ ಯುವತಿ, ಈ ವಿಷಯದಲ್ಲಿ ಮಾತ್ರ ಹುಡುಗರನ್ನು ಕಾಪಿ ಮಾಡ್ಬೇಡಮ್ಮಾ

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ನಮ್ಮನ್ನು ಬಾಯಿ ಮೇಲೆ ಬೆರಳಿಡುವಂತೆ ಮಾಡುತ್ತವೆ. ಇದೀಗ ಅಂತಹದ್ದೇ ಅಚ್ಚರಿಯ ವಿಡಿಯೋವೊಂದು ವೈರಲ್‌ ಆಗಿದ್ದು, ಯುವತಿಯೊಬ್ಬಳು ಪುರುಷರಂತೆ ನಿಂತುಕೊಂಡೇ ಮೂತ್ರ ವಿಸರ್ಜನೆ ಮಾಡಿದ್ದಾಳೆ. ಈ ವೈರಲ್‌ ದೃಶ್ಯವನ್ನು ಕಂಡು ಅಮ್ಮಾ ತಾಯಿ ಈ ವಿಷಯದಲ್ಲಾದ್ರೂ ಹುಡುಗರನ್ನು ಕಾಪಿ ಮಾಡದೇ ಸುಮ್ನೆ ಇರಮ್ಮಾ ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

Viral: ಪುರುಷರಂತೆ ನಿಂತುಕೊಂಡೇ ಮೂತ್ರ ವಿಸರ್ಜನೆ ಮಾಡಿದ ಯುವತಿ, ಈ ವಿಷಯದಲ್ಲಿ ಮಾತ್ರ ಹುಡುಗರನ್ನು ಕಾಪಿ ಮಾಡ್ಬೇಡಮ್ಮಾ
ವೈರಲ್​​ ವಿಡಿಯೋ
Edited By:

Updated on: Oct 22, 2024 | 10:06 AM

ಸಾಮಾನ್ಯವಾಗಿ ಪುರುಷರು ಕುಳಿತುಕೊಳ್ಳುವ ಬದಲು ನಿಂತುಕೊಂಡೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಎಲ್ಲಾ ವಿಷಯದಲ್ಲೂ ಪುರುಷರನ್ನು ಕಾಪಿ ಮಾಡುವಂತೆ ಯುವತಿಯೊಬ್ಬಳು ಹುಡುಗರಂತೆ ತಾನು ಕೂಡಾ ನಿಂತುಕೊಂಡೇ ಮೂತ್ರ ವಿಸರ್ಜನೆ ಮಾಡಿದ್ದಾಳೆ. ಈ ಅಚ್ಚರಿಯ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಈ ದೃಶ್ಯವನ್ನು ಕಂಡು ಅಮ್ಮಾ ತಾಯಿ ಈ ವಿಷಯದಲ್ಲಾದ್ರೂ ಹುಡುಗರನ್ನು ಕಾಪಿ ಮಾಡದೇ ಸುಮ್ನೆ ಇರಮ್ಮಾ ಎಂದು ನೆಟ್ಟಿಗರು ರಿಕ್ವೆಸ್ಟ್‌ ಮಾಡಿದ್ದಾರೆ.

ಈ ಕುರಿತ ಫನ್ನಿ ವಿಡಿಯೋವೊಂದನ್ನು vishvaguru0 ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಅವಳದು ಎಲ್ಲಕ್ಕಿಂತ ಭಿನ್ನ ಎಂದು ಜನರು ಹೇಳುವ ಮಾತು ಸರಿಯಾಗಿದೆ” ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲಿ ಯುವತಿಯೊಬ್ಬಳು ಹುಡುಗರಂತೆ ಮೂತ್ರ ವಿಸರ್ಜನೆ ಮಾಡುವ ದೃಶ್ಯವನ್ನು ಕಾಣಬಹುದು. ಯಾವುದೋ ಮೂಲೆಯಲ್ಲಿರುವ ಪೊದೆಯ ಬಳಿ ಬಂದ ಆಕೆ ಪುರುಷರಂತೆ ನಿಂತುಕೊಂಡೇ ಮೂತ್ರ ವಿಸರ್ಜನೆಯನ್ನು ಮಾಡಿದ್ದಾಳೆ. ಈ ವಿಚಿತ್ರ ದೃಶ್ಯವನ್ನು ಕಂಡು ಅಲ್ಲಿದ್ದ ಯಾರೋ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ: ಪತ್ನಿಯ ಮೇಲಿನ ಕೋಪಕ್ಕೆ ತನಗೆ ತಾನೇ ಹೊಡೆದುಕೊಂಡ ಪತಿರಾಯ; ಪಾಕಿಸ್ತಾನದಲ್ಲಿ ಗಂಡ-ಹೆಂಡ್ತಿ ಹೇಗೆ ಜಗಳ ಆಡ್ತಾರೆ ನೋಡಿ

ಅಕ್ಟೋಬರ್‌ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನೀನು ಪುರುಷರನ್ನು ಕಾಪಿ ಮಾಡು ಅದನ್ನು ಯಾರು ತಡೆಯೊಲ್ಲ, ಆದ್ರೆ ದಯವಿಟ್ಟು ಇಂತಹ ವಿಷಯದಲ್ಲಿ ಹುಡುಗರನ್ನು ಕಾಪಿ ಮಾಡಬೇಡ ತಾಯಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಬ್ಬಬ್ಬಾ ಹಿಂಗೂ ಇದ್ಯಾʼ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಹೇಗೆ ನಡೆಯಲು ಸಾಧ್ಯʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:48 pm, Mon, 21 October 24

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us