
ಕೆಲಸದ ಜೊತೆ ಜೊತೆಗೆ ಕುಟುಂಬಕ್ಕೂ ಸಮಯ ನೀಡುವುದು ಮುಖ್ಯವಾಗಿದೆ. ಸಂಬಳಕ್ಕಿಂತ ವೈಯಕ್ತಿಕ ಜೀವನವೇ ಮುಖ್ಯ ಎನ್ನುವವರು ಹಲವರಿದ್ದಾರೆ. ಹೀಗೆ ಒತ್ತಡದ ಕೆಲಸದ ಕಾರಣದಿಂದ ಕುಟುಂಬದ ಜೊತೆ ಸಮಯ ಕಳೆಯಲು ಸಾಧ್ಯವಿಲ್ಲ ಎಂದು ಕೈ ತುಂಬಾ ಸಂಬಳ ಸಿಗುವ ದೊಡ್ಡ ಹುದ್ದೆಯನ್ನೇ ತ್ಯಜಿಸಿದವರು ಇದ್ದಾರೆ. ಅದೇ ರೀತಿ ಇಲ್ಲೊಬ್ರು ವಕೀಲ 8 ಕೋಟಿ ಸಂಬಳ ಸಿಗುವ ಉದ್ಯೋಗವನ್ನೇ ತ್ಯಜಿಸಿದ್ದಾರೆ. ಪ್ರತಿಷ್ಠಿತ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ತಮ್ಮ ಪತ್ನಿ 8 ತಿಂಗಳ ಗರ್ಭಿಣಿ ಆಗಿದ್ದ ಕಾರಣ ನನ್ನನ್ನು ವರ್ಗಾವಣೆ ಮಾಡಬೇಡಿ, ಪಿತೃತ್ವ ರಜೆ ಕೊಡಿ ಕೇಳಿದ್ದು, ಆದ್ರೆ ಬಾಸ್ ಇದಕ್ಕೆ ನಿರಾರಿಸಿದ್ದು, ಬಾಸ್‌ನ ಈ ನಿರ್ಧಾರದಿಂದ ಬೇಸತ್ತ ವಕೀಲ ಕೈ ತುಂಬಾ ಸಂಬಳ ಸಿಗುವ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರತಿಷ್ಠಿತ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅಮೆರಿಕದ ವಕೀಲರೊಬ್ಬರು ತಮ್ಮ ಬಾಸ್ ವರ್ಗಾವಣೆ ಮಾಡುವುದರ ಜೊತೆಗೆ ತಾನು ಕೇಳಿದ್ದ ಪಿತೃತ್ವ ರಜೆ ನಿರಾಕರಿಸಿದಕ್ಕೆ ಬೇಸರಗೊಂಡು ವಾರ್ಷಿಕವಾಗಿ ಸುಮಾರು $900,000 ಅಂದರೆ ಸುಮಾರು 7.8 ಕೋಟಿ ರೂ. ಸಂಬಳ ಸಿಗುತ್ತಿದ್ದ ಕೆಲಸವನ್ನೇ ತೊರೆದಿದ್ದಾರೆ.
ನಿಕ್ ಹ್ಯೂಬರ್ (Nick Huber) ವಕೀಲರ ಈ ಕಥೆಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದು, ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವ ವಿಷಯಕ್ಕೆ ಬಂದಾಗ ಪ್ರತಿಯೊಬ್ಬರೂ ತಮ್ಮ ಜೀವನದ ಒಂದು ಹಂತದಲ್ಲಿ ಇಂತಹ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಹೇಳಿದ್ದಾರೆ.
ವಾರ್ಷಿಕವಾಗಿ ಸುಮಾರು $900,000 ಅಂದರೆ 7.8 ಕೋಟಿ ರೂ. ಗಳಿಸುತ್ತಿದ್ದ 32 ವರ್ಷದ ವಕೀಲರು ತಮ್ಮ ಬಾಸ್‌ನ ನಡೆಯಿಂದ ಕೆಲಸವನ್ನು ತೊರೆಯಬೇಕಾಯಿತು. ಈ ಲಾಯರ್ ಕಳೆದ ಐದು ವರ್ಷಗಳಿಂದ ಪ್ರತಿಷ್ಠಿತ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸದ ವಿಷಯದ ಬಗ್ಗೆ ತುಂಬಾ ನಿಷ್ಠಾವಂತರಾಗಿದ್ದ ಇವರು ವಾರಕ್ಕೆ ಸುಮಾರು 80 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಆದರೆ ಇವರ ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗಲೇ, ಇವರ ಬಾಸ್ ಇವರನ್ನು ಬೇರೆಡೆ ವರ್ಗಾವಣೆ ಮಾಡಲು ನಿರ್ಧರಿಸಿದರು.
I spoke to a guy last year who spent 5 years at a big prestigious law firm.
One of the top firms in the world working litigation.
He laid down 80 hour weeks for years and was making damn near $900k as a 32 year old.
He got assigned a case in another city when his wife was 8…
— Nick Huber (@sweatystartup) February 26, 2025
ಹೆರಿಗೆಯ ಸಮಯದಲ್ಲಿ ತನ್ನ ಹೆಂಡತಿಯೊಂದಿಗೆ ಇರಬೇಕೆಂದು ಬಯಸಿದ ಲಾಯರ್ ವರ್ಗಾವಣೆ ಮಾಡ್ಬೇಡಿ, ನನಗೆ ಒಂದಷ್ಟು ದಿನ ಪಿತೃತ್ವ ರಜೆ ನೀಡುವಂತೆ ವಿನಂತಿಸಿದರು. ಆದರೆ ಬಾಸ್ ಅವರ ಕೋರಿಕೆಯನ್ನು ತಿರಸ್ಕರಿಸಿದ್ದು, ಆ ತಕ್ಷಣವೇ ಲಾಯರ್ ಕೆಲಸ ತ್ಯಜಿಸಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಟ್ರೈನ್ ನಿಲ್ಲಿಸಿ ರೈಲ್ವೆ ಹಳಿಯ ಮೇಲೆಯೇ ಮೂತ್ರ ವಿಸರ್ಜಿಸಿದ ಲೋಕೋ ಪೈಲಟ್; ವಿಡಿಯೋ ವೈರಲ್
ಫೆಬ್ರವರಿ 26 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 4.9 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಣಕ್ಕಿಂತ ವಕೀಲ ಅವರ ಸ್ವಾತಂತ್ರ್ಯವನ್ನು ಆಯ್ಕೆ ಮಾಡಿದ್ದಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಸ್ಟೋರಿ ತುಂಬಾ ಆಸಕ್ತಿಕರವಾಗಿತ್ತುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹಣಕ್ಕಿಂತ ಕುಟುಂಬವೇ ಮುಖ್ಯವೆಂದು ಇವರು ತಿಳಿಸಿಕೊಟ್ಟಿದ್ದಾರೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Fri, 28 February 25