ಸಂಪೂರ್ಣವಾಗಿ ವಿವಸ್ತ್ರಗೊಂಡು ವಿಮಾನದೊಳಗೆ ಅಸಭ್ಯ ವರ್ತನೆ ತೋರಿದ ಮಹಿಳೆ; ಬೆಚ್ಚಿ ಬಿದ್ದ ಸಹ ಪ್ರಯಾಣಿಕರು

ವಿಮಾನ ಹಾರಟದ ವೇಳೆ ಪ್ರಯಾಣಿಕರು ಜಗಳವಾಡುವ, ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಯತ್ನಿಸಿದಂತಹ ಘಟನೆಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇಲ್ಲೊಂದು ಅದೇ ರೀತಿಯ ವಿಚಿತ್ರ ಘಟನೆ ನಡೆದಿದ್ದು, ಹಾರಾಟದ ಮಧ್ಯೆ ಮಹಿಳೆಯೊಬ್ಬಳು ಸಂಪೂರ್ಣವಾಗಿ ವಿವಸ್ತ್ರಗೊಂಡು ವಿಮಾನದೊಳಗೆ ಗದ್ದಲ ಸೃಷ್ಟಿಸಿದ್ದಾಳೆ. ಈಕೆಯ ಈ ವರ್ತನೆಯಿಂದ ಸಹ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ.

ಸಂಪೂರ್ಣವಾಗಿ ವಿವಸ್ತ್ರಗೊಂಡು ವಿಮಾನದೊಳಗೆ ಅಸಭ್ಯ ವರ್ತನೆ ತೋರಿದ ಮಹಿಳೆ; ಬೆಚ್ಚಿ ಬಿದ್ದ ಸಹ ಪ್ರಯಾಣಿಕರು
ವೈರಲ್​​ ವಿಡಿಯೋ
Edited By:

Updated on: Mar 08, 2025 | 10:37 AM

ಅಮೆರಿಕ, ಮಾ.07: ವಿಮಾನದಲ್ಲಿ ಪ್ರಯಾಣಿಕರು ಅನುಚಿತ ವರ್ತನೆ ತೋರುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದಿಷ್ಟು ಪ್ರಯಾಣಿಕರು ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಯತ್ನಿಸಿದ, ಗಗನ ಸಖಿಯರೊಂದಿಗೆ ಜಗಳವಾಡಿದ, ಕುಡಿದು ಗದ್ದಲ ಸೃಷ್ಟಿಸಿದ ಸಾಕಷ್ಟು ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಇದೀಗ ಅಂತಹದ್ದೇ ಮತ್ತೊಂದು ಆಘಾತಕಾರಿ ಘಟನೆಯ ಸುದ್ದಿ ಕೇಳಿ ಬಂದಿದ್ದು, ಹಾರಾಟದ ಮಧ್ಯೆ ಮಹಿಳೆಯೊಬ್ಬಳು ಸಂಪೂರ್ಣವಾಗಿ ವಿವಸ್ತ್ರಗೊಂಡು ವಿಮಾನದೊಳಗೆ ಗದ್ದಲ ಸೃಷ್ಟಿಸಿದ್ದಾಳೆ. ಈಕೆಯ ಈ ವರ್ತನೆಯಿಂದ ಸಹ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ.

ಅಮೆರಿಕದಲ್ಲಿ ಈ ಘಟನೆ ನಡೆದಿದ್ದು, ಓರ್ವ ಮಹಿಳೆ ವಿವಸ್ತ್ರಗೊಂಡು ಓಡಾಡುವ ಮೂಲಕ ವಿಮಾನದೊಳಗೆ ಗದ್ದಲ ಸೃಷ್ಟಿಸಿದ್ದಾಳೆ. ಹೂಸ್ಟನ್‌ನಿಂದ ಫೀನಿಕ್ಸ್ ಗೆ ಹೊರಟಿದ್ದ ಸೌತ್ ವೆಸ್ಟ್ ಏರ್ ಲೈನ್ಸ್ ವಿಮಾನದಲ್ಲಿ ಓರ್ವ ಮಹಿಳೆ ಸಂಪೂರ್ಣವಾಗಿ ತನ್ನ ಬಟ್ಟೆ ಬಿಚ್ಚಿ ಗದ್ದಲ ಸೃಷ್ಟಿಸಿದ್ದಾಳೆ. ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಈ ಘಟನೆ ಸಂಭವಿಸಿದ್ದು, ವಿಮಾನ ಹಾರಾಟದ ಮಧ್ಯೆ ಆ ಮಹಿಳೆ ಪ್ರಯಾಣಿಕರು ಕಿರುಚುತ್ತಾ, ತನ್ನ ಟಾಪ್ ಮತ್ತು ಪ್ಯಾಂಟ್ ತೆಗೆದು ಕಾಕ್‌ಪಿಟ್‌ಗೆ ಪ್ರವೇಶಿಸಲು ಪ್ರಯತ್ನಿಸಿದ್ದಾಳೆ. ಮತ್ತು ಸುಮಾರು 30 ನಿಮಿಷಗಳ ಕಾಲ ಬೆತ್ತಲಾಗಿಯೇ ಸಹ ಪ್ರಯಾಣಿಕರ ಮುಂದೆ ಓಡಾಡಿದ್ದಾಳೆ ಮತ್ತು ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾಳೆ.

ಇದನ್ನೂ ಓದಿ
ಕುದುರೆಗೆ ಬಲವಂತವಾಗಿ ಸಿಗರೇಟ್ ಸೇದಿಸಿದ ಯುವಕರು
ನಿಮ್ಮ ಮೂಗು ದುಂಡಾಗಿದ್ಯಾ? ಹಾಗಾದ್ರೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ
20 ಹೆಂಡತಿಯರು, 104 ಮಕ್ಕಳು, 144 ಮೊಮ್ಮಕ್ಕಳು ಇವರದ್ದೇ ಒಂದು ಹಳ್ಳಿ
ಚರಂಡಿಯಲ್ಲಿ ಸಿಲುಕಿದ್ದ ಹಸುವನ್ನು ರಕ್ಷಿಸಿದ ಹೃದಯವಂತ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದ ಪೈಲಟ್ ವಿಮಾನವನ್ನು ಮತ್ತೆ ವಿಮಾನ ನಿಲ್ದಾಣದಲ್ಲಿ ಇಳಿಸಿದರು. ಇದಾದ ನಂತರ ಮಹಿಳೆಯನ್ನು ಹೂಸ್ಟನ್ ಪೊಲೀಸರಿಗೆ ಒಪ್ಪಿಸಲಾಯಿತು. ಸದ್ಯ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ವಿರುದ್ಧ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ನಂತರ ಸೌತ್‌ವೆಸ್ಟ್ ಏರ್‌ಲೈನ್ಸ್ ಇತರ ಪ್ರಯಾಣಿಕರಿಗೆ ಕ್ಷಮೆಯಾಚಿಸಿದೆ ಮತ್ತು ಈ ಪರಿಸ್ಥಿತಿಯಲ್ಲಿ ತಾಳ್ಮೆಯಿಂದ ವರ್ತಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದೆ.

Collin Rugg ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಓರ್ವ ಮಹಿಳೆ ಹಾರಾಟದ ವೇಳೆ ಸಂಪೂರ್ಣವಾಗಿ ವಿವಸ್ತ್ರಗೊಂಡು ಗದ್ದಲ ಸೃಷ್ಟಿಸಿದ ದೃಶ್ಯವನ್ನು ಕಾಣಬಹುದು. ಈಕೆಯ ಈ ಅನುಚಿತ ವರ್ತನೆಯನ್ನು ಕಂಡು ವಿಮಾನದಲ್ಲಿದ್ದ ಸಹ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: ಗೇಟ್‌ ಕ್ಲೋಸ್‌ ಆಯಿತೆಂದು ಬೈಕನ್ನು ಹೆಗಲ ಮೇಲೆ ಹೊತ್ತು ರೈಲ್ವೆ ಕ್ರಾಸಿಂಗ್ ದಾಟಿದ ಸವಾರ; ವಿಡಿಯೋ ವೈರಲ್‌

ಮಾರ್ಚ್‌ 07 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈಕೆಯದ್ದು ಇದೆಂತ ಹುಚ್ಚಾಟʼ ಎಂದು ಗರಂ ಆಗಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಹ ಪ್ರಯಾಣಿಕರು ಭಯಭೀತರಾದಂತೆ ಕಾಣುತ್ತಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಏಕೆ ಜನ ಹೀಗೆ ಬೇಜವಾಬ್ದಾರಿತನದಿಂದ ವರ್ತಿಸುತ್ತಾರೆʼ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:37 am, Sat, 8 March 25