Video: ತಾಯ್ನಾಡಿಗೆ ಹೊರಟ ಭಾರತೀಯ ಕುಟುಂಬ ಕಂಡು ಕಣ್ಣೀರಿಟ್ಟ ಅಮೆರಿಕನ್ ಅಜ್ಜಿ

ಪ್ರೀತಿ ಮತ್ತು ವಾತ್ಸಲ್ಯಕ್ಕೆ ಭಾಷೆ, ದೇಶ ಅಥವಾ ಸಂಸ್ಕೃತಿಯಂತಹ ಯಾವುದೇ ಗಡಿಗಳಿಲ್ಲ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿ. ಇದೀಗ ಭಾರತೀಯ ಕುಟುಂಬವೊಂದನ್ನೂ ಭಾರವಾದ ಮನಸ್ಸಿನಿಂದ ಕಳುಹಿಸಿ ಕೊಟ್ಟ ವಿಡಿಯೋ ವೈರಲ್ ಆಗಿದೆ. ಈ ದೃಶ್ಯವು ಭಾರತೀಯರ ಮನಸ್ಸನ್ನೂ ಗೆದ್ದು ಕೊಂಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ತಾಯ್ನಾಡಿಗೆ ಹೊರಟ ಭಾರತೀಯ ಕುಟುಂಬ ಕಂಡು ಕಣ್ಣೀರಿಟ್ಟ ಅಮೆರಿಕನ್ ಅಜ್ಜಿ
ವೈರಲ್‌ ವಿಡಿಯೋ
Image Credit source: Instagram

Updated on: Aug 14, 2026 | 11:28 AM

ಊರು, ದೇಶ ಯಾವುದಾದರೇನು, ನಮ್ಮವರು ಎನ್ನುವ ಭಾವನೆ ಮೂಡಿದ ಮೇಲೆ ಭಾಷೆ, ಜಾತಿ, ಧರ್ಮವನ್ನು ಮೀರಿದ ಬಂಧವೊಂದು ಹುಟ್ಟಿಕೊಳ್ಳುತ್ತದೆ. ಇದೀಗ ಇಂತಹದ್ದೇ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಅಮೆರಿಕದಲ್ಲಿ (American) ನೆಲೆಸಿದ್ದ ತೆಲುಗು ಕುಟುಂಬವೊಂದು ಭಾರತಕ್ಕೆ ಮರಳಲು ಸಜ್ಜಾಗಿದೆ. ಆತ್ಮೀಯರಾಗಿದ್ದ ಅಮೆರಿಕನ್ ಅಜ್ಜಿಯೊಬ್ಬರು ಈ ನೋವನ್ನು ಸಹಿಸಿಕೊಳ್ಳಲು ಆಗದೇ ಕಣ್ಣೀರಿಟ್ಟಿದ್ದಾರೆ. ಈ ಭಾವುಕ ಕ್ಷಣದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ದಿ ಭಾರತ್‌ ಪೋಸ್ಟ್‌ (thebharatpost) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ತೆಲುಗು ಕುಟುಂಬವೊಂದನ್ನು ಅಮೆರಿಕನ್ ವೃದ್ಧೆ ಕಣ್ಣೀರು ಇಡುತ್ತಾ ಭಾರತಕ್ಕೆ ಕಳುಹಿಸಿಕೊಟ್ಟ ದೃಶ್ಯ ಇದಾಗಿದೆ. ಈ ಕ್ಲಿಪಿಂಗ್ ಭಾರತೀಯ ದಂಪತಿ ತಮ್ಮ ಹುಟ್ಟೂರಿಗೆ ಹೊರಟು ನಿಂತಿದ್ದು, ಅಮೆರಿಕನ್ ಅಜ್ಜಿ ಕಣ್ಣೀರಿಡುತ್ತಾ ಅಪ್ಪಿಕೊಂಡಿದ್ದಾರೆ. ದೇಶ, ಭಾಷೆ ಬೇರೆಯಾಗಿದ್ದರೂ ಭಾರತೀಯ ಕುಟುಂಬದೊಂದಿಗೆ ಅಮೆರಿಕನ್ ಅಜ್ಜಿಗೆ ಆತ್ಮೀಯ ಸ್ನೇಹ ಸಂಬಂಧ ಬೆಸೆದಿದ್ದು, ಈ ಭಾವನಾತ್ಮಕ ವಿದಾಯದ ದೃಶ್ಯವನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ವಿದೇಶಿ ಮಹಿಳೆಗೆ ಕಿವಿಯೋಲೆಯನ್ನು ಉಡುಗೊರೆಯಾಗಿ ನೀಡಿದ ಭಾರತೀಯ ಬೀದಿ ಬದಿ ವ್ಯಾಪಾರಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತುಂಬಾನೇ ಮುದ್ದಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದುವೇ ನಿಜವಾದ ಪ್ರೀತಿ ಎಂದಿದ್ದಾರೆ. ಇನ್ನೊಬ್ಬರು, ಈ ಪ್ರಪಂಚದಲ್ಲಿ ಒಳ್ಳೆಯ ಜನರು ಇದ್ದಾರೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us