Video: ಊರುಗೋಲನ್ನೇ ಕುಳಿತುಕೊಳ್ಳುವ ಆಸನವನ್ನಾಗಿ ಮಾಡಿಕೊಂಡ ವೃದ್ಧ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತವೆ. ಇದೀಗ ವೃದ್ಧ ವ್ಯಕ್ತಿಯೊಬ್ಬ ತನ್ನ ಊರುಗೋಲನ್ನೇ ಕುಳಿತು ಕೊಳ್ಳುವ ಆಸನವಾಗಿ ಮಾಡಿಕೊಂಡಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವೃದ್ಧ ವ್ಯಕ್ತಿಯ ಬುದ್ಧಿವಂತಿಕೆ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಊರುಗೋಲನ್ನೇ ಕುಳಿತುಕೊಳ್ಳುವ ಆಸನವನ್ನಾಗಿ ಮಾಡಿಕೊಂಡ ವೃದ್ಧ
ವೈರಲ್‌ ವಿಡಿಯೋ
Image Credit source: Instagram

Updated on: Aug 17, 2026 | 11:21 AM

ಕೆಲವರ ಬುದ್ಧಿವಂತಿಕೆ ನೋಡಿದ್ರೆ ಇದೇನಪ್ಪ ಇಂತಹ ನಮ್ಗೆ ಬರಲೇ ಇಲ್ಲ ಎಂದುಕೊಳ್ಳುತ್ತೇವೆ. ಇದೀಗ ಈ ಅಜ್ಜನ (elderly man) ಬುದ್ಧಿವಂತಿಕೆಯನ್ನು ನೀವು ಮೆಚ್ಚುತ್ತೀರಿ. ಹೌದು, ಕೈಯಲ್ಲಿರುವ ಊರುಗೋಲನ್ನೇ ಆಸನವನ್ನಾಗಿ ಮಾಡಿಕೊಂಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಲೇ ಬುದ್ಧಿವಂತ ಈ ತಾತ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂಡಿಯಾ ಟ್ರೆಂಡ್ಸ್ (India trends) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವೃದ್ಧ ವ್ಯಕ್ತಿಯೊಬ್ಬ ಊರುಗೋಲು ಹಿಡಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಆ ಬಳಿಕ ಸುಸ್ತಾಯಿತೆಂದು ಊರುಗೋಲನ್ನೇ ಆಸನವನ್ನಾಗಿ ಮಾಡಿಕೊಂಡಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: Video: ಪಿಜ್ಜಾ ಆರ್ಡರ್ ಮಾಡಿ ಅಜ್ಜಿಗೆ ಸರ್ಪ್ರೈಸ್ ಕೊಟ್ಟ ಮೊಮ್ಮಗಳು

ಈ ವಿಡಿಯೋ ಮೂವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸಮಸ್ಯೆ ಯಾವುದೇ ಇರ್ಲಿ ಪರಿಹಾರ ಕಂಡುಕೊಳ್ಳುವುದು ಮುಖ್ಯ ಎಂದಿದ್ದಾರೆ. ಇನ್ನೊಬ್ಬರು, ಇಲ್ಲದರ ಬಗ್ಗೆ ಕೊರಗುವುದಕ್ಕಿಂತ ಇರುವುದಲ್ಲೇ ಖುಷಿ ಆಗಿರೋದು ಅಂದ್ರೆ ಇದೇ ನೋಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಅಜ್ಜ ನಿಜಕ್ಕೂ ಬುದ್ಧಿವಂತ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us