Video: ಮರದ ಕಡ್ಡಿ ಬಳಸಿ ಕಿವಿ ಸ್ವಚ್ಛಗೊಳಿಸಿದ ಗಜರಾಜ

ಕೆಲವೊಮ್ಮೆ ಆನೆಗಳು ಮರದ ಕಡ್ಡಿಗಳನ್ನು ಬಳಸಿ ತಮ್ಮ ಕಿವಿಗಳನ್ನು ಸ್ವಚ್ಛಗೊಳಿಸುವ ಅಪರೂಪದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ಇದೀಗ ಇಂತಹದ್ದೇ ದೃಶ್ಯ ವೈರಲ್ ಆಗಿದೆ. ಆನೆಯೊಂದು ತನ್ನ ಕಿವಿಯನ್ನು ಸ್ವಚ್ಛಗೊಳಿಸಲು ಮರದ ಕಡ್ಡಿ ಬಳಸಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಆನೆಯ ಬುದ್ಧಿವಂತಿಕೆಗೆ ಫುಲ್ ಫಿದಾ ಆಗಿದ್ದಾರೆ.

Video: ಮರದ ಕಡ್ಡಿ ಬಳಸಿ ಕಿವಿ ಸ್ವಚ್ಛಗೊಳಿಸಿದ ಗಜರಾಜ
ವೈರಲ್‌ ವಿಡಿಯೋ
Image Credit source: Instagram

Updated on: Aug 18, 2026 | 11:50 AM

ಆನೆಗಳ (elephants) ಆಟ ತುಂಟಾಟಗಳ ಮನಸ್ಸಿಗೆ ಇಷ್ಟವಾಗುತ್ತವೆ. ಅದೇ ರೀತಿ ಅವುಗಳ ಬುದ್ಧಿವಂತಿಕೆ ಹುಬ್ಬೇರಿಸುವಂತೆ ಮಾಡುತ್ತವೆ. ಇದೀಗ ಆನೆಯೊಂದು ತನ್ನ ಕಿವಿಯನ್ನು ಸ್ವಚ್ಛಗೊಳಿಸುವ ವಿಡಿಯೋ ವೈರಲ್ ಆಗಿದೆ. ಮರದ ಕಡ್ಡಿಯನ್ನು ಬಳಸಿ ಕಿವಿ ಶುಚಿಗೊಳಿಸುವ ದೃಶ್ಯವೊಂದು ನೆಟ್ಟಿಗರ ಗಮನ ಸೆಳೆದಿದೆ.

ಇಟ್ಸ್ ಕ್ರಿಶ್ ಆರ್ಟ್ (itskrishart) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಆನೆಯೊಂದು ತನ್ನ ಕಿವಿಯನ್ನು ತಾನೇ ಮರದ ಕಡ್ಡಿ ಬಳಸಿ ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಗತ್ತಿನಿಂದಲೇ ಹೆದರಿಸಿ ಓಡಿಸಲು ಪ್ರಯತ್ನಿಸಿದ ಮರಿಯಾನೆ

ಈ ವಿಡಿಯೋ ಇದುವರೆಗೆ ಅಧಿಕ ವೀಕ್ಷಣೆಗಳನ್ನು ಕಂಡು ಕೊಂಡಿದ್ದು, ಒಬ್ಬ ಬಳಕೆದಾರ, ಬುದ್ಧಿವಂತ ಕಣಯ್ಯ ನೀನು ಎಂದಿದ್ದಾರೆ. ಇನ್ನೊಬ್ಬರು, ಇಂತಹ ದೃಶ್ಯಗಳೇ ಬೇಗನೆ ಮನಸ್ಸಿಗೆ ಹತ್ತಿರವಾಗೋದು ಎಂದು ಹೇಳಿದ್ದಾರೆ. ಮತ್ತೊಬ್ಬರು, ಆನೆ ಬುದ್ಧಿವಂತ ಅಂತ ಈಗ ಗೊತ್ತೈತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us