
ದಾಂಪತ್ಯ ಜೀವನ ನಿಂತಿರುವುದೇ ಪ್ರೀತಿ, ನಂಬಿಕೆಯ ಮೇಲೆ. ವಯಸ್ಸು ಎಷ್ಟು ಆದರೇನು? ಸಂಗಾತಿಗಳಿಬ್ಬರ ನಡುವೆ ಪ್ರೀತಿಗೆ ಕೊರತೆಯಿಲ್ಲ ಹೋದರೆ ಅದಕ್ಕಿಂತ ಹೆಚ್ಚು ಇನ್ನೇನು ಬೇಕು ಅಲ್ಲವೇ. ಹೌದು, ದಂಪತಿಗಳ ಪ್ರೀತಿ (love) ಯನ್ನು ಸಾರುವ ಹೃದಯ ಸ್ಪರ್ಶಿ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ರೈಲಿನಲ್ಲಿ ಪ್ರಯಾಣಿಸುವ ವೃದ್ಧ ದಂಪತಿ (Old Couple) ಗಳಿಬ್ಬರ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ವೃದ್ಧನು ತನ್ನ ಮಡದಿ ಕೈಬೆರಳುಗಳಿಗೆ ನೈಲ್ ಪಾಲಿಶ್ (nail polish) ಹಚ್ಚುತ್ತಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಜೋಡಿಗಳ ನಡುವಿನ ಬಾಂಧವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
iamrohabtmhane ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ತನ್ನ ಸಂಗಾತಿಯ ಕೈಬೆರಳಿಗೆ ನೈಲ್ ಪಾಲಿಶ್ ಹಚ್ಚುವುದನ್ನು ನೋಡಬಹುದು. ಜಗತ್ತು ಎಷ್ಟೇ ಬ್ಯುಸಿಯಾಗಿರಲಿ ಅವರಿಬ್ಬರೂ ತಮ್ಮದೇ ಲೋಕದಲ್ಲಿದ್ದರು. ವೃದ್ಧನು ತನ್ನ ಪತ್ನಿಯ ಕೈಗೆ ನೈಲ್ ಪಾಲಿಶ್ ಹಚ್ಚುತ್ತಿದ್ದನು. ಆಕೆ ಮಾತ್ರ ಮೊದಲ ಬಾರಿ ಬೆರಳು ಸ್ಪರ್ಶಿದ ಹಾಗೆ ನಗುತ್ತಿದ್ದಳು. ಈ ರೀತಿಯ ಪ್ರೀತಿಗೆ ವಯಸ್ಸು ಆಗುವುದಿಲ್ಲ. ವಯಸ್ಸು ಆದಂತೆ ಇನ್ನಷ್ಟು ಆಳವಾಗುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಇದನ್ನೂ ಓದಿ :ಹೆಂಡ್ತಿಗೆ ಹೆರಿಗೆ ನೋವು : ಪತ್ನಿ ನೋವು ಅನುಭವಿಸುವುದನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಪತಿ
ಈ ವಿಡಿಯೋದಲ್ಲಿ ವೃದ್ಧ ದಂಪತಿಗಳಿಬ್ಬರೂ ರೈಲಿನಲ್ಲಿ ಪ್ರಯಾಣಿಸುತ್ತಿರುವುದನ್ನು ನೋಡಬಹುದು. ಸಂಗಾತಿಯೂ ತನ್ನ ಎರಡು ಕೈಯನ್ನು ಚಾಚಿದ್ದು, ಪತಿಯೂ ಬಹಳ ಎಚ್ಚರಿಕೆಯಿಂದ ನೈಲ್ ಪಾಲಿಶ್ ಹಚ್ಚುತ್ತಿರುವುದನ್ನು ಕಾಣಬಹುದು. ಈ ಪತ್ನಿಗೆ ಪತಿಯು ಮಾರ್ಗದರ್ಶನ ಮಾಡುತ್ತಿರುವುದನ್ನು ನೋಡಬಹುದು.
ಈ ವಿಡಿಯೋವೊಂದು 46 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ವೃದ್ಧ ದಂಪತಿಗಳ ನಡುವಿನ ಬಾಂಧವ್ಯವನ್ನು ಮೆಚ್ಚಿದ್ದಾರೆ. ಬಳಕೆದಾರರೊಬ್ಬರು, ನಿಜವಾದ ಪ್ರೀತಿ ವಯಸ್ಸಾದರೂ ಸದಾ ಹಸಿರಾಗಿಯೇ ಇರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ಅದ್ಭುತವಾದ ವಿಡಿಯೋ, ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೇನಿಸುತ್ತದೆ ಎಂದಿದ್ದಾರೆ. ಮತ್ತೊಬ್ಬರು, ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ