Viral Post : ಅಂಬಾನಿ ಕಾರ್ಯಕ್ರಮಕ್ಕೆ ಮಾರ್ಕ್ ಜುಕರ್‌ಬರ್ಗ್ ಪತ್ನಿ ಧರಿಸಿದ ಬಟ್ಟೆಯ ಬೆಲೆ 10 ಲಕ್ಷ ರೂ.

ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರ ವಿವಾಹ ಸಮಾರಂಭವು ಅದ್ದೂರಿಯಾಗಿ ನಡೆಯುತ್ತಿದೆ. ಈ ಸಮಾರಂಭಕ್ಕೆ ಈಗಾಗಲೇ ಜಾಗತಿಕ ಮಟ್ಟದ ಗಣ್ಯರು ಆಗಮಿಸಿದ್ದಾರೆ. ಆದರೆ ಇದೀಗ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಪತ್ನಿ ಪ್ರಿಸ್ಸಿಲ್ಲಾ ಚಾನ್ ಅವರೊಂದಿಗೆ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಕಾಕ್ ಟೆಲ್ ಪಾರ್ಟಿಯಲ್ಲಿ ದುಬಾರಿ ಬೆಲೆಯ ಉಡುಗೆ ತೊಟ್ಟು ಗಮನ ಸೆಳೆದಿದ್ದಾರೆ.

Viral Post : ಅಂಬಾನಿ ಕಾರ್ಯಕ್ರಮಕ್ಕೆ ಮಾರ್ಕ್ ಜುಕರ್‌ಬರ್ಗ್ ಪತ್ನಿ ಧರಿಸಿದ ಬಟ್ಟೆಯ ಬೆಲೆ 10 ಲಕ್ಷ ರೂ.
Edited By:

Updated on: Mar 02, 2024 | 3:06 PM

ಭಾರತದ ಆಗರ್ಭ ಶ್ರೀಮಂತ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭಗಳು ನಿನ್ನೆಯಿಂದ ಗುಜರಾತ್‌ನ ಜಾಮ್‌ನಗರದಲ್ಲಿ ಆರಂಭವಾಗಿದ್ದು, ಅದ್ದೂರಿಯಾಗಿ ನಡೆಯುತ್ತಿವೆ. ಈ ವಿವಾಹಪೂರ್ವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಗುರುವಾರದಂದು ಗುಜರಾತ್‌ನ ಜಾಮ್‌ನಗರಕ್ಕೆ ಬಂದಿಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಮಾರ್ಕ್ ಜುಕರ್‌ಬರ್ಗ್ ಮತ್ತು ಪ್ರಿಸ್ಸಿಲ್ಲಾ ಚಾನ್ ಅವರಿಗೆ ಜಾಮ್‌ ನಗರದಲ್ಲಿ ಹಾರ ಹಾಕಿ ಜಾನಪದ ಸಂಗೀತದೊಂದಿಗೆ ಸ್ವಾಗತಿಸಲಾಗಿದೆ. ಅನಂತ್ ಅಂಬಾನಿ ವಿವಾಹ ಪೂರ್ವ ಪಾರ್ಟಿಯಲ್ಲಿ ಜ್ಯೂಕರ್‌ಬರ್ಗ್ ದಂಪತಿ ಬ್ಲಾಕ್ ಬಣ್ಣದ ಉಡುಗೆಯಲ್ಲಿ ಕ್ಲಾಸಿ ಲುಕ್​​​​ನಲ್ಲಿ ಗಮನ ಸೆಳೆದಿದ್ದಾರೆ. ಪತ್ನಿ ಪ್ರಿಸ್ಸಿಲ್ಲಾಯೊಂದಿಗೆ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಫೋಟೋವೊಂದನ್ನು ಜ್ಯೂಕರ್‌ಬರ್ಗ್ ಅವರು ಶೇರ್ ಮಾಡಿಕೊಂಡಿದ್ದಾರೆ. ಇದರೊಂದಿಗೆ “ಭಾರತೀಯ ವಿವಾಹವನ್ನು ಪ್ರೀತಿಸಿ ಅನಂತ್ ಮತ್ತು ರಾಧಿಕಾ ಅವರಿಗೆ ಅಭಿನಂದನೆಗಳು!” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸೋ ಹ್ಯಾಪಿ ಟುಡೇ: ಕೆಲಸಕ್ಕೆ ರಿಸೈನ್ ಕೊಟ್ಟು ಪುಲ್​​​ ಬಿಂದಾಸ್​​ ಆಗಿರುವ ಯುವಕ

ವೈರಲ್​​ ಪೋಸ್ಟ್ ಇಲ್ಲಿದೆ ನೋಡಿ:

ವಿವಾಹ ಪೂರ್ವ ಪಾರ್ಟಿಗೆ ಪ್ರಿಸ್ಸಿಲ್ಲಾ ಚಾನ್ ಅವರು ಧರಿಸಿದ್ದ ಗೌನ್ ಚಿನ್ನದ ಗುಲಾಬಿಗಳಿಂದ ಕೈಯಿಂದ ಕಸೂತಿ ಮಾಡಲಾಗಿದ್ದು, ಅದರೊಂದಿಗೆ ಕೊಲೊರಾಡೋ ನೀಲಮಣಿ ಕಲ್ಲುಗಳು ಮತ್ತು ಬೆಳ್ಳಿಯ ಸ್ಪಟಿಕ ಅಪ್ಲಿಕ್ಯೂಗಳನ್ನು ಗುಲಾಬಿಗೆ ಅಳವಡಿಸಲಾಗಿದೆ. ಈ ಗೌನ್ ಬೆಲೆಯೂ ಬರೋಬ್ಬರಿ 10,76,664 ರೂ. ಎನ್ನಲಾಗಿದೆ. ಇನ್ನು, ಜ್ಯೂಕರ್‌ಬರ್ಗ್ ಅವರು ಚಿನ್ನದ ಡ್ರಾಗನ್‌ಫ್ಲೈಗಳೊಂದಿಗೆ ಕಪ್ಪುಬಣ್ಣದ ಸೂಟ್ ಧರಿಸಿದ್ದು, ಜಾಕೆಟ್ ಚಿನ್ನದ-ಟೋನ್ ರತ್ನದ ಡ್ರಾಗನ್ಸ್ ಅಪ್ಲಿಕ್ಯೂಗಳಿಂದ ಅಲಂಕರಿಸಲಾಗಿದ್ದು, ಭಾರತೀಯ ಕರೆನ್ಸಿಯಲ್ಲಿ ಈ ಸೂಟ್ 6,28,362 ರೂ ಬೆಲೆ ಬಾಳುತ್ತದೆ. ಜ್ಯೂಕರ್‌ಬರ್ಗ್ ಅವರು ಶೇರ್ ಮಾಡಿಕೊಂಡಿರುವ ಈ ಪೋಸ್ಟ್ ಗೆ ಮೂರು ಲಕ್ಷಕ್ಕೂ ಅಧಿಕ ಲೈಕ್ಸ್ ಗಳು ಬಂದಿದ್ದು, ಮೆಚ್ಚುಗೆಯ ಕಾಮೆಂಟ್ ಗಳು ವ್ಯಕ್ತವಾಗಿವೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Sat, 2 March 24