Silchar : ಅಸ್ಸಾಮಿನ ಸಿಲ್ಚಾರ್ನ ರಾಮಾನುಜ್ ಗುಪ್ತಾ ಎಂಬ ಖಾಸಗಿ ಕಾಲೇಜಿನಲ್ಲಿ 11ನೇ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರಸ್ಪರ ತಬ್ಬಿಕೊಂಡು ಕುಣಿಯುತ್ತಿದ್ದುದನ್ನು ಅದೇ ತರಗತಿಯ ಮತ್ತೊಬ್ಬ ವಿದ್ಯಾರ್ಥಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದು ವೈರಲ್ ಆಗುತ್ತಿದ್ದಂತೆ ಕಾಲೇಜಿನ ಆಡಳಿತ ಮಂಡಳ ಗಮನಕ್ಕೆ ಬಂದಿದೆ. ತಕ್ಷಣವೇ ವಿದ್ಯಾರ್ಥಿಗಳನ್ನು ಕಾಲೇಜಿಗೆ ಹಾಜರಾಗದಂತೆ ನಿರ್ಬಂಧ ವಿಧಿಸಿಲಾಗಿದೆ. ಏಳು ಜನರಲ್ಲಿ ನಾಲ್ಕು ಹುಡುಗಿಯರು ಮೂರು ಹುಡುಗರಿದ್ದಾರೆ. ಇವರ ಅನುಚಿತ ವರ್ತನೆಗೆ ಕಾಲೇಜು ಮಂಡಳಿಯು ವಿದ್ಯಾರ್ಥಿಗಳಿಗೆ ನೋಟೀಸ್ ನೀಡಿದೆ. ಸಂಸ್ಥೆಯ ಶಿಸ್ತನ್ನು ಉಲ್ಲಂಘಿಸಿದ ಕಾರಣ ನಿರ್ಧಿಷ್ಠ ಅವಧಿಯವರೆಗೆ ತರಗತಿಗಳಿಗೆ ಹಾಜರಾಗದಂತೆ ಅಮಾನತು ಮಾಡಲಾಗಿದೆ.
ಕಾಲೇಜಿನ ಪ್ರಾಂಶುಪಾಲ ಪೂರ್ಣದೀಪ್ ಚಂದಾ, ‘ಶಿಕ್ಷಕರು ಇಲ್ಲದ ಸಮಯದಲ್ಲಿ ಊಟದ ಬಿಡುವಿನ ವೇಳೆ ವಿದ್ಯಾರ್ಥಿಗಳು ಹೀಗೆ ವರ್ತಿಸಿದ್ದಾರೆ. ಸುರಕ್ಷತೆ ಮತ್ತು ಶಿಸ್ತಿಗಾಗಿ ನಮ್ಮ ಕಾಲೇಜು ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ. ಅಲ್ಲದೆ, ಕ್ಯಾಂಪಸ್ನಲ್ಲಿ ಮೊಬೈಲ್ ಫೋನ್ಗಳನ್ನೂ ನಿಷೇಧಿಸಲಾಗಿದೆ. ಈ ವಿದ್ಯಾರ್ಥಿಗಳು 11ನೇ ತರಗತಿಗೆ ಹಾಜರಾಗಿ ಕೇವಲ ಹದಿನೈದು ದಿನಗಳಷ್ಟೇ ಕಳೆದಿವೆ.’ ಎಂದು ಐಎಎನ್ಎಸ್ಗೆ ತಿಳಿಸಿದ್ದಾರೆ.
ಈ ಮಧ್ಯೆ, ಕಾಲೇಜು ಮಂಡಳಿಯು ಆ ಏಳು ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ಸಮಾಲೋಚನೆ ನಡೆಸಿದೆ. ಈ ಘಟನೆಯ ನಂತರ ಕಾಲೇಜು ಮಂಡಳಿ ಶಿಸ್ತಿನ ವಿಷಯವಾಗಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬಹುದು ಮತ್ತು ಶಿಸ್ತು ಉಲ್ಲಂಘಿಸಿದವರನ್ನು ವಜಾಗೊಳಿಸಬಹುದು ಎನ್ನುವುದೂ ಈ ಮೂಲಕ ತಿಳಿದುಬಂದಿದೆ.
ಇನ್ನಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:26 pm, Fri, 12 August 22