
ನೀವು ಜಂಗಲ್ ಬುಕ್ ಸಿನಿಮಾ ನೋಡಿದ್ದರೆ ಈ ವಿಡಿಯೋ ಅದೇ ರೀತಿ ಇದೆ ಎನಿಸುವುದಂತೂ ಸುಳ್ಳಲ್ಲ. ಅರೇ ಏನಪ್ಪಾ ಅಂತಿರಾ. ಸಿನಿಮಾದಲ್ಲಿ ಹುಲಿಯಿಂದ ಕರಡಿ ತನ್ನ ಗೆಳೆಯನನ್ನು ರಕ್ಷಿಸುವುದನ್ನು ಕಾಣಬಹುದು. ಅದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕರಡಿ ಮತ್ತು ಹುಲಿ ಮುಖಾಮುಖಿಯಾಗಿದ್ದಾರೆ. ದಾರಿಯಲ್ಲಿ ಮಲಗಿದ್ದ ಹುಲಿಯನ್ನು ಕಂಡು ಕರಡಿ ಕುಣಿದಾಡಿ ನಂತರ ಸುಮ್ಮನೆ ಸಾಗಿದೆ. ಇದರ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ವಿಡಿಯೋವನ್ನು ಸಾಕೇತ್ ಎನ್ನುವ ಐಎಫ್ಎಸ್ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದ ತಡೋಬಾ ಹುಲಿ ಸಂರಕ್ಷಿತ ವಲಯದಲ್ಲಿ ಈ ಘಟನೆ ನಡೆದಿದೆ. ನಮನ್ ಅಗರ್ವಾಲ್ ಎನ್ನುವವರು ಈ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದಾರೆ. ವಿಡಿಯೋದಲ್ಲಿ ಕರಡಿ ನಡೆದುಕೊಂಡು ಹೋಗುವ ದಾರಿಯಲ್ಲಿ ಹುಲಿ ಮಲಗಿರುತ್ತದೆ. ಅದನ್ನು ನೋಡಿದ ಕರಡಿ ಗಾಬರಿಗೊಂಡು ನಂತರ ತಲೆತಗ್ಗಿಸುತ್ತದೆ. ಈ ಸಣ್ಣ ತುಣುಕಿನ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. 31 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದ ವಿಡಿಯೋ ಪ್ರಾಣಿ ಪ್ರಿಯರ ಮನಗೆದ್ದಿದೆ.
ಇದನ್ನೂ ಓದಿ:
ತಮಿಳಿನ ‘ಹಲಮಿತಿ ಹಬೀಬೋ’ ಹಾಡಿಗೆ ತಾಯಿ ಮಗನ ಸಖತ್ ಸ್ಟೆಪ್: ವಿಡಿಯೋ ವೈರಲ್
Published On - 3:35 pm, Thu, 10 March 22