Video: ಶಾಪಿಂಗ್ – ಸುತ್ತಾಟಕ್ಕೆ 1.1 ಲಕ್ಷ ರೂ; ತಿಂಗಳ ಖರ್ಚು ವೆಚ್ಚದ ಬಗ್ಗೆ ರಿವೀಲ್ ಮಾಡಿದ ಬೆಂಗಳೂರಿನ ಮಹಿಳೆ

ಈಗಿನ ದಿನಗಳಲ್ಲಿ ದುಡಿಮೆ ಕಡಿಮೆಯಾಗಿದೆ ಖರ್ಚು ಹೆಚ್ಚಾಗಿದೆ. ಲೈಫ್ ಎಂಜಾಯ್ ಮಾಡ್ತಾ ಇರೋ ಯುವಜನತೆ ಈ ಖರ್ಚಿಗೆ ಕಡಿವಾಣ ಹಾಕುತ್ತಿಲ್ಲ. ಇದೀಗ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಮಹಿಳೆ ಮೇ ತಿಂಗಳ ಮಾಸಿಕ ಖರ್ಚನ್ನು ರಿವೀಲ್ ಮಾಡಿದ್ದಾರೆ. ಈ ಮಹಿಳೆಯ ಒಂದೇ ತಿಂಗಳ ಖರ್ಚು ತಿಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಶಾಪಿಂಗ್ - ಸುತ್ತಾಟಕ್ಕೆ 1.1 ಲಕ್ಷ ರೂ; ತಿಂಗಳ ಖರ್ಚು ವೆಚ್ಚದ ಬಗ್ಗೆ ರಿವೀಲ್ ಮಾಡಿದ ಬೆಂಗಳೂರಿನ ಮಹಿಳೆ
ವೈರಲ್‌ ವಿಡಿಯೋ
Image Credit source: Instagram

Updated on: Jun 16, 2026 | 1:38 PM

ಬೆಂಗಳೂರು, ಜೂನ್ 16: ಇಂದಿನ ದುಬಾರಿ ದುನಿಯಾದಲ್ಲಿ ಎಷ್ಟೇ ದುಡಿದರೂ ಜೀವನ ನಿರ್ವಹಣೆ ತುಂಬಾ ಕಷ್ಟಕರ. ಬೆಂಗಳೂರಿನಲ್ಲಿ (Bengaluru) ವಸತಿ ವೆಚ್ಚಗಳು ಮತ್ತು ಜೀವನಶೈಲಿ ವೆಚ್ಚಗಳು ಏರುತ್ತಲೇ ಇರುವುದರಿಂದ, ನಗರದಲ್ಲಿ ಆರಾಮವಾಗಿ ಬದುಕಲು ಕಷ್ಟವಾಗುತ್ತಿದೆ. ಈ ನಗರದಲ್ಲಿ ವಾಸಿಸುತ್ತಿರುವ ಜನರು ಎಷ್ಟೇ ದುಡಿದ್ರೂ ಸಾಕಾಗುತ್ತಿಲ್ಲ. ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಮಹಿಳೆಯೊಬ್ಬರು ತಮ್ಮ ಮಾಸಿಕ ಖರ್ಚು ವೆಚ್ಚದ ಬಗ್ಗೆ ಮಾತನಾಡಿದ್ದಾರೆ. ಮೇ ತಿಂಗಳಲ್ಲಿ 1.84 ಲಕ್ಷ ರೂ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಸದ್ಯ ವೈರಲ್ ಆಗಿದ್ದು ಆನ್ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

@bloomingalchemy_nee ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡ ಮಹಿಳೆ ಬೆಂಗಳೂರಿನಲ್ಲಿ ನನ್ನ ಖರ್ಚುಗಳು – ಮೇ 2026 ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಮೇ ತಿಂಗಳಿನ ತನ್ನ ಪ್ರಮುಖ ಖರ್ಚು ವೆಚ್ಚಗಳನ್ನು ಪಟ್ಟಿ ಮಾಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

2 ಬಿಹೆಚ್ ಕೆ ಅಪಾರ್ಟ್‌ಮೆಂಟ್‌ನ ಬಾಡಿಗೆಗೆ 45,000 ರೂ, ವಿದ್ಯುತ್‌ಗೆ 3,250 ರೂ, ಸ್ವಿಗ್ಗಿ ಆರ್ಡರ್‌ಗಳಿಗೆ 7,500 ರೂ, ಅಡುಗೆಯವರಿಗೆ 6,000 ರೂ, ಮನೆಕೆಲಸದಾಕೆಗೆ 4,000 ರೂ ಹಾಗೂ ಉಬರ್ ಸವಾರಿಗಳಿಗೆ 8,000 ರೂ ಖರ್ಚು ವೆಚ್ಚಗಳನ್ನು ಪಟ್ಟಿ ಮಾಡಿದ್ದಾರೆ. ಕೆಫೆಗಳು ಹಾಗೂ ಸುತ್ತಾಟಗಳಿಗೆ 60,000 ರೂ ಹಾಗೂ ಶಾಪಿಂಗ್‌ಗೆ 50,000 ರೂ ಖರ್ಚು ತಗಲುತ್ತದೆ. ಹೂಡಿಕೆಗಳನ್ನು ಹೊರತುಪಡಿಸಿ, ತಿಂಗಳಿಗೆ ಅವರ ಒಟ್ಟು ಖರ್ಚು 1,83,750 ರೂ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನನ್ನ ಜೀವನದ ತಪ್ಪು ನಿರ್ಧಾರವಿದು; ಗುರುಗ್ರಾಮದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ಮಹಿಳೆ ಹೀಗೆಂದಿದ್ದೇಕೆ?

ಈ ಪೋಸ್ಟ್ ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, ಖರ್ಚು ವೆಚ್ಚಗಳು ಇತಿಮಿತಿಯಲ್ಲಿದ್ದರೆ ಒಳ್ಳೆಯದು ಎಂದಿದ್ದಾರೆ. ಇನ್ನೊಬ್ಬರು, ನೀವು ಪ್ರತಿ ತಿಂಗಳು ಊಟ ಹಾಗೂ ಶಾಪಿಂಗ್‌ಗೆ 1.1 ಲಕ್ಷ ಖರ್ಚು ಮಾಡುತ್ತೀರಾ ಎಂದು ಕೇಳಿದ್ದಾರೆ. ಮತ್ತೊಬ್ಬರು, ಖರ್ಚು ವೆಚ್ಚಗಳಿಗೆ ಲಗಾಮು ಹಾಕೋದು ಒಳ್ಳೆಯದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 1:35 pm, Tue, 16 June 26

Loading...
Unable to load recommendations.
Follow Us