AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನನ್ನ ಜೀವನದ ತಪ್ಪು ನಿರ್ಧಾರವಿದು; ಗುರುಗ್ರಾಮದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ಮಹಿಳೆ ಹೀಗೆಂದಿದ್ದೇಕೆ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜೀವನ ಸಾಗಿಸುವುದು ಹೇಳಿದಷ್ಟು ಸುಲಭವಲ್ಲ. ಇಲ್ಲಿ ಬಾಡಿಗೆ ದರಗಳು ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿವೆ. ಇದೀಗ ಗುರುಗ್ರಾಮದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ಮಹಿಳೆಯೊಬ್ಬರು ಬಹುದೊಡ್ಡ ತಪ್ಪು ಮಾಡಿದೆ ಎಂದಿದ್ದಾರೆ. ಈ ಮಹಿಳೆ ಹೀಗೆನ್ನಲು ನೀಡಿದ ಕಾರಣ ತಿಳಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ನನ್ನ ಜೀವನದ ತಪ್ಪು ನಿರ್ಧಾರವಿದು; ಗುರುಗ್ರಾಮದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ಮಹಿಳೆ ಹೀಗೆಂದಿದ್ದೇಕೆ?
ಸಾಂದರ್ಭಿಕ ಚಿತ್ರ Image Credit source: Pinterest
ಸಾಯಿನಂದಾ
|

Updated on:Jun 15, 2026 | 6:25 PM

Share

ಬೆಂಗಳೂರು, ಜೂನ್ 15: ಕೆಲಸದ ಕಾರಣಕ್ಕೆ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗೋದು ಅನಿರ್ವಾಯ. ಆದರೆ ಈ ರೀತಿಯ ನಿರ್ಧಾರಗಳು ಕೆಲವೊಮ್ಮೆ ಪಶ್ಚಾತಾಪ ಭಾವನೆಯನ್ನು ಉಂಟು ಮಾಡಬಹುದು. ಗುರುಗ್ರಾಮದಿಂದ ಬೆಂಗಳೂರಿಗೆ (Bengaluru) ಸ್ಥಳಾಂತರಗೊಂಡ ಮಹಿಳೆಗೂ ಅದೇ ರೀತಿಯಾಗಿದೆ. ಇದಕ್ಕೆ ಕಾರಣವಾಗಿದ್ದು ಬೆಂಗಳೂರಿನ ಬಾಡಿಗೆ ದರ. ಹೌದು, ಈ ದಂಪತಿ ಬೆಂಗಳೂರಿನಲ್ಲಿ ಬಾಡಿಗೆ ದರ 52,000 ರೂ ಇರುವ ಫ್ಲಾಟ್‌ಗೆ ಸ್ಥಳಾಂತರಗೊಂಡಿದ್ದು, ಅವರು ಮಾಡಿದ ಪೋಸ್ಟ್ ಸದ್ಯ ಆನ್ಲೈನ್ ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಪಾರುಲ್‌ ಅಸೀಮ್‌ (@parul___aseem) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗುರುಗ್ರಾಮದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ದಂಪತಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ನೀವು ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಿದ್ದರೆ , ಕೇವಲ ಫೇಮಸ್ ಆಗಿರುವ ಪ್ರದೇಶಗಳಿಗೆ ಮಾತ್ರ ಬಲಿಯಾಗಬೇಡಿ. ನಾವು ಆ ತಪ್ಪನ್ನು ಮಾಡಿದ್ದೇವೆ… ಹೆಚ್ಚಿನ ಬಾಡಿಗೆ, ಹೆಚ್ಚಿನ ಠೇವಣಿ ಪಾವತಿಸಿದ್ದೇವೆ. ಆದರೆ ಬಹುತೇಕ ಯಾವುದೇ ಸೌಲಭ್ಯಗಳನ್ನು ಪಡೆಯಲಿಲ್ಲ. ಆದರೆ ನಾವು ಸ್ಥಳಾಂತರಗೊಂಡ ನಂತರ ಇದುನಮಗೆ ಅರಿವಾಯಿತು. ನೀವು ನಿಜವಾಗಿಯೂ ಬಜೆಟ್ ಸ್ನೇಹಿ ಸ್ಥಳಗಳಲ್ಲಿ ಉತ್ತಮವಾಗಿ ಬದುಕಬಹುದು ಎಂದು ಬರೆದುಕೊಂಡಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ಬೆಂಗಳೂರಿನಲ್ಲಿ ಅತ್ಯುತ್ತಮ ಬಜೆಟ್ ಸ್ನೇಹಿ ಪ್ರದೇಶಗಳು ಇವು. ಯಲಹಂಕ – ಶಾಂತಿಯುತ, ವಿಶಾಲವಾದ ಮನೆಗಳು ಹಾಗೂ ಕುಟುಂಬಗಳಿಗೆ ಉತ್ತಮವಾಗಿದೆ. ಎಲೆಕ್ಟ್ರಾನಿಕ್ ಸಿಟಿ – ಕೈಗೆಟುಕುವ ಹಾಗೂ ಐಟಿ ಜನರಿಗೆ ಉತ್ತಮ. ಕನಕಪುರ ರಸ್ತೆ – ವೇಗವಾಗಿ ಬೆಳೆಯುತ್ತಿದೆ. ಸರ್ಜಾಪುರ ಹೊರವಲಯ – ಸರ್ಜಾಪುರಕ್ಕಿಂತ ಉತ್ತಮ ಡೀಲ್‌ಗಳು. ವೈಟ್‌ಫೀಲ್ಡ್ ಹೊರವಲಯ – ಹೆಚ್ಚು ಸ್ಥಳಾವಕಾಶ, ಕಡಿಮೆ ಬಾಡಿಗೆಗೆ ಮನೆ ಸಿಗುತ್ತದೆ ಎಂದಿದ್ದಾರೆ. ನಿಮ್ಮ ಕೆಲಸವು ಹೈಬ್ರಿಡ್ ರಿಮೋಟ್ ಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದರೆ, ‘ಪ್ರೈಮ್’ ಸ್ಥಳಗಳಿಗೆ ಹೆಚ್ಚು ಪಾವತಿಸುವುದನ್ನು ತಪ್ಪಿಸಿ. ಬದಲಿಗೆ ಉತ್ತಮ ಜೀವನಶೈಲಿಗಾಗಿ ಆ ಹಣವನ್ನು ಬಳಸಿ ಎಂದು ಪ್ರೋ ಟಿಪ್ ನೀಡಿದ್ದಾರೆ.

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಬೆಂಗಳೂರನ್ನು ದೂರುವುದು ಸರಿಯಲ್ಲ. ಇಲ್ಲಿನ ಎಲ್ಲಾ ಸ್ಥಳಗಳು ದುಬಾರಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಸ್ಥಳಾಂತರಗೊಂಡ ಬಳಿಕ ದೂರುವುದು ಸರಿಯಲ್ಲ, ಹೊಂದಿಕೊಂಡು ಹೋಗಬೇಕು ಅಷ್ಟೇ ಎಂದಿದ್ದಾರೆ.

ಇದನ್ನೂ ಓದಿ: ಹೆತ್ತವರಿಗೆ ತಾನು ಕೆಲಸ ಮಾಡುವ ಬೆಂಗಳೂರಿನ ಮೈಕ್ರೋಸಾಫ್ಟ್ ಆಫೀಸ್ ತೋರಿಸಿದ ಉದ್ಯೋಗಿ

ಇನ್ನೊಬ್ಬರು, ಸೌಕರ್ಯಗಳು ಮತ್ತು ಸ್ಥಳವನ್ನು ಪರಿಶೀಲಿಸಿದ ನಂತರ ನೀವು ಇಲ್ಲಿಗೆ ಬಂದಿದ್ದೀರಾ ಅಥವಾ ಇಲ್ಲವೇ? ಬುದ್ಧಿವಂತಿಕೆಯಿಂದ ವಲಯವನ್ನು ಆರಿಸಿ… ಪ್ರತಿಯೊಂದು ಪ್ರದೇಶದಂತೆಯೇ, ಹೆಚ್ ಎಸ್ ಆರ್ ನ ಪ್ರತಿಯೊಂದು ಭಾಗವು ಐಷಾರಾಮಿಯಾಗಿಲ್ಲ. ಹೆಚ್ಚು ಬ್ರೌಸ್ ಮಾಡಿ ಮತ್ತು ಸುತ್ತಾಡಿ. ಹೆಚ್ ಎಸ್ ಆರ್ ನ ಉತ್ತಮ ವಲಯಗಳು ಎಲ್ಲವನ್ನೂ ಹೊಂದಿವೆ. ನೀವು ನಿಮ್ಮಷ್ಟಕ್ಕೆ ನೋಡಬೇಕು ಮತ್ತು ದಲ್ಲಾಳಿಗಳನ್ನು ಅವಲಂಬಿಸಬಾರದು ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:47 am, Mon, 15 June 26

Follow Us
ಇಂಡೋನೇಷ್ಯಾದ 1,000 ವರ್ಷದ ಶಿವನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಾರತ ಬೆಂಬಲ
ಇಂಡೋನೇಷ್ಯಾದ 1,000 ವರ್ಷದ ಶಿವನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಾರತ ಬೆಂಬಲ
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ