Viral: ಹಳ್ಳಿಯಿಂದ ಬೆಂಗಳೂರಿಗೆ ಬಂದ ಯುವಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ ಆಟೋಚಾಲಕ

ಬೆಂಗಳೂರಿಗೆ ಹೊಸಬರು ಯಾರಾದ್ರೂ ಬಂದರೆ ಆಟೋ ಚಾಲಕರು ಹೆಚ್ಚುವರಿ ಹಣ ಸುಲಿಗೆ ಮಾಡುತ್ತಾರೆ. ಆದರೆ ಇದೀಗ ಹಳ್ಳಿಯಿಂದ ಬಂದ ಯುವಕರಿಬ್ಬರಿಂದ ಆಟೋ ಚಾಲಕ ಹಣ ದೋಚಿದ್ದಾನೆ. ಟೆಕ್ಕಿಯೊಬ್ಬರು ಮಾಡಿದ ಪೋಸ್ಟ್ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಆಟೋ ಚಾಲಕನ ವಿರುದ್ಧ ಗರಂ ಆಗಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ

Viral: ಹಳ್ಳಿಯಿಂದ ಬೆಂಗಳೂರಿಗೆ ಬಂದ ಯುವಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ ಆಟೋಚಾಲಕ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Jun 24, 2026 | 1:07 PM

ಬೆಂಗಳೂರು, ಜೂನ್ 24: ಬೆಂಗಳೂರಿಗೆ (Bengaluru) ಯಾರಾದ್ರೂ ಹೊಸಬರು ಬಂದರೆ ಕೆಲ ಆಟೋ ಚಾಲಕರು ಅದನ್ನೇ ಬಂಡವಾಳವಾಗಿಸಿಕೊಂಡಿದ್ದಾರೆ. ಹೌದು, ಪ್ರವಾಸಿಗರು ಹಾಗೂ ಹೊಸಬರಿಂದ ಹೆಚ್ಚು ಹಣ ವಸೂಲಿ ಮಾಡುವ ಹಾಗೂ ಸಂಜೆ ವೇಳೆ ದುಪ್ಪಟ್ಟು ದರ ಕೇಳುವ ದೂರುಗಳು ಕೇಳಿ ಬರುತ್ತಲೇ ಇರುತ್ತವೆ, ಇದೀಗ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದೆ. ಆಟೋ ಚಾಲಕನು ಹಳ್ಳಿಯಿಂದ ಬಂದ ಯುವಕರನ್ನು ಬಸ್ ನಿಲ್ದಾಣಕ್ಕೆ ಬಿಡಲು ತಲಾ 50 ರೂ. ಬಾಡಿಗೆ ಬದಲಿಗೆ 2,400 ರೂ. ಗಳನ್ನು ಪಡೆದಿದ್ದಾನೆ. ಈ ಬಗ್ಗೆ ಟೆಕ್ಕಿಯೊಬ್ಬರು ಆರೋಪ ಮಾಡಿದ್ದು, ಇದಕ್ಕೆ ಸಂಬಂಧ ಪಟ್ಟ ಪೋಸ್ಟ್  ವೈರಲ್‌ ಆಗಿದೆ..

ಸಾನು (Sanu) ಹೆಸರಿನ ಎಕ್ಸ್ ಖಾತೆಯಲ್ಲಿ ಬೆಂಗಳೂರಿನ ಟೆಕ್ಕಿ ಈ ಘಟನೆಗೆ ಸಂಬಂಧಿಸಿದ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣದ ಬಳಿ ಸುಮಾರು 16-18 ವರ್ಷ ವಯಸ್ಸಿನ ಇಬ್ಬರು ಯುವಕರಿದ್ದರು. ಈ ಯುವಕರು ಹೊಸೂರಿಗೆ ತೆರಳುವ ಬಸ್ ನಿಲ್ದಾಣ ಅತ್ತಿಬೆಲೆಗೆ ಬಿಡಲು ಆಟೋ ಚಾಲಕನ ಬಳಿ ಕೇಳಿಕೊಂಡಿದ್ದಾನೆ. ಆದರೆ ಆಟೋ ಚಾಲಕ ಮೊದಲು ತಲಾ 50 ರೂ.ಗಳಿಗೆ ಅವರನ್ನು ಬಿಡಲು ಒಪ್ಪಿಕೊಂಡಿದ್ದಾನೆ. ಬಸ್ ನಿಲ್ದಾಣ ತಲುಪುತ್ತಿದ್ದಂತೆ ಈ ಆಟೋ ಚಾಲಕ ತನ್ನ ವರಸೆ ಬದಲಾಯಿಸಿದ್ದಾನೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ಈ ಯುವಕರ ಬಳಿ 35 ಕಿ.ಮೀ ಪ್ರಯಾಣಕ್ಕೆ 3000 ರೂ. ಕೇಳಿದ್ದಾನೆ. ಆಟೋಚಾಲಕ ಹೀಗೆನ್ನುತ್ತಿದ್ದಂತೆ ಯುವಕರು ನನಗೆ ಕರೆ ಮಾಡಿದ್ದಾರೆ. ನನ್ನೊಂದಿಗೆ ಮಾತನಾಡುತ್ತಿದ್ದಾಗಲೇ ಈ ಆಟೋ ಚಾಲಕ ಯುವಕರಿಂದ ಮೊಬೈಲ್ ಕಸಿದುಕೊಂಡಿದ್ದಾನೆ. ಆ ಬಳಿಕ ಅವರು ನನ್ನ ಕರೆಗಳಿಗೆ ಉತ್ತರಿಸಲೇ ಇಲ್ಲ.ಕೊನೆಗೆ ಯುವಕರು ಮೊಬೈಲ್ ಕೊಡುವಂತೆ ಕೇಳಿಕೊಂಡಿದ್ದು, ಆ ಬಳಿಕ ವಾಪಸ್ಸು ನೀಡಿದ್ದಾನೆ. ಅಷ್ಟೇ ಅಲ್ಲದೇ ಯುವಕರು ಅತ್ತಿಬೆಲೆ ಬಸ್ ನಿಲ್ದಾಣಕ್ಕೆ ಬರಲು 2,000 ರೂ ಹೆಚ್ಚುವರಿ ಹಣ ಖರ್ಚು ಮಾಡಿದ್ದಾರೆ. ಈ ಪೋಸ್ಟ್‌ನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದೇನೆ. ನೀವು ಟ್ರ್ಯಾಕ್ ಮಾಡುತ್ತೀರಿ ಅಂತಾದ್ರೆ ಮೊಬೈಲ್ ನಂಬರ್ ಹಂಚಿಕೊಳ್ಳುವೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮನೆ ಖಾಲಿ ಮಾಡ್ತೇನೆ ಎಂದ ಯುವತಿಗೆ ಮನ ಮುಟ್ಟುವಂತೆ ರಿಪ್ಲೈ ಕೊಟ್ಟ ಓನರ್

ಈ ಪೋಸ್ಟ್ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಒಬ್ಬ ಬಳಕೆದಾರ, ನಗರಕ್ಕೆ ಕೆಟ್ಟ ಹೆಸರು ತರುವ ಸಾಲಿನಲ್ಲಿ ಈ ಆಟೋಚಾಲಕರು ಇದ್ದಾರೆ ಎಂದಿದ್ದಾರೆ. ಇನ್ನೊಬ್ಬರು, ಕೆಲ ಆಟೋ ಚಾಲಕರ ವರ್ತನೆಗಳು ವಿಪರೀತವಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ರೀತಿ ನಡವಳಿಕೆ ಒಪ್ಪುವಂತಹದ್ದಲ್ಲ. ಮಿತಿಮೀರಿ ಹಣ ಕೇಳುವುದು, ಫೋನ್ ಕಸಿದುಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Wed, 24 June 26

Follow Us