Viral: ಕೆಲಸ ಬಿಟ್ಟು ಮನೆಯಲ್ಲಿ ಇರ್ಬೇಕು; ಯುವಕನ ಕಂಡೀಶನ್ ಕೇಳಿ ಪ್ರಪೋಸಲ್ ರಿಜೆಕ್ಟ್ ಮಾಡಿದ ಐಟಿ ಉದ್ಯೋಗಿ

ಈಗಿನ ಕಾಲದಲ್ಲಿ ಮದುವೆ ಆಗಲು ಹುಡ್ಗಿ ಸಿಗೋದೇ ಕಷ್ಟ. ಹೀಗಿರುವಾಗ ಮದುವೆ ಆಗುವ ಹುಡ್ಗಿಗೆ ಕಂಡೀಶನ್ ಹಾಕಿದ್ರೆ ಯಾರು ಕೇಳಲ್ಲ. ಐಟಿ ಕೆಲಸ ಬಿಡಲು ಯುವಕ ಹೇಳುತ್ತಿದ್ದಂತೆ ಯುವತಿ ಪ್ರಪೋಸಲ್‌ನ್ನೇ ಕ್ಯಾನ್ಸಲ್ ಮಾಡಿದ್ದಾಳೆ. ಈ ಪೋಸ್ಟ್ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಈ ಯುವತಿಯ ನಿರ್ಧಾರವನ್ನು ಮೆಚ್ಚಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಕೆಲಸ ಬಿಟ್ಟು ಮನೆಯಲ್ಲಿ ಇರ್ಬೇಕು; ಯುವಕನ ಕಂಡೀಶನ್ ಕೇಳಿ ಪ್ರಪೋಸಲ್ ರಿಜೆಕ್ಟ್ ಮಾಡಿದ ಐಟಿ ಉದ್ಯೋಗಿ
ಸಾಂದರ್ಭಿಕ ಚಿತ್ರ
Image Credit source: SimpleImages/Moment/Getty Images

Updated on: Aug 16, 2026 | 6:07 PM

ಈಗಿನ ಕಾಲದಲ್ಲಿ ಹೆಣ್ಣು ಕೂಡ ಗಂಡಿನಷ್ಟೇ ಸರಿಸಮಾನಳಾಗಿ ನಿಂತಿದ್ದಾಳೆ. ಆರ್ಥಿಕ ಸ್ವಾತಂತ್ರ್ಯ ಬಯಸುವ ಹೆಣ್ಣಿಗೆ ಮದುವೆಯಾದ (marriage) ಬಳಿಕ ಕೆಲಸಕ್ಕೆ ಹೋಗಬೇಡ ಅಂದ್ರೆ ಅಂತಹ ಹುಡುಗನೇ ಬೇಡ ಅನ್ನೋರೇ ಹೆಚ್ಚು. ಹೀಗಿರುವಾಗ ಈಗಿನ ಕಾಲದ ಹೆಣ್ಣು ಮಕ್ಕಳಿಗೆ ಕಂಡೀಶನ್ ಹಾಕಿದ್ರೆ ಕ್ಯಾರೇ ಅನ್ನಲ್ಲ. ಇದೀಗ ಬೆಂಗಳೂರಿನ ಯುವತಿಯೊಬ್ಬಳು ಮದುವೆಯ ಬಳಿಕ ಕೆಲಸಕ್ಕೆ ಹೋಗಬಾರದು ಎಂದು ಕಂಡೀಷನ್ ಹಾಕಿದ್ದೇ ತಡ, ತಿಂಗಳಿಗೆ ಬರೊಬ್ಬರಿ 2 ಲಕ್ಷ  ರೂ ವೇತನ ಪಡೆಯುತ್ತಿದ್ದ ಪ್ರಪೋಸಲ್‌ನ್ನೇ ರಿಜೆಕ್ಟ್ ಮಾಡಿದ್ದಾಳೆ. ಈ ಬಗ್ಗೆ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಯುವಕನ ಮನಸ್ಥಿತಿಯನ್ನು ಟೀಕಿಸಿದ್ದಾರೆ.

ನಂದಿನಿ ಎಂ (nandini m) ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾಳೆ. ಈ ಪೋಸ್ಟ್ ನಲ್ಲಿ ಕೆಲವು ತಿಂಗಳ ಹಿಂದೆ ನನ್ನ ತಾಯಿ ಮದುವೆ ಪ್ರಸ್ತಾಪ ಮುಂದಿಟ್ಟು ಎಮೋಷನಲ್ ಬ್ಲಾಕ್ ಮೇಲ್ ಮಾಡಿದ್ರು. ಈ ಯುವಕನು ತಿಂಗಳಿಗೆ 2 ಲಕ್ಷ ರೂ ಮೊತ್ತವನ್ನು ಗಳಿಸುತ್ತಿದ್ದ. ನಾನು ಐಟಿ ಕೆಲಸದಲ್ಲಿದ್ದ ಕಾರಣ ನನ್ನ ತಿಂಗಳ ಸಂಬಳ 90,000 ರೂ ಆಗಿತ್ತು. ಆದರೆ ಈ ಯುವಕನು ನನ್ನ ಕುಟುಂಬದ ವೆಚ್ಚಕ್ಕೆ ಶೇ. 50ರಷ್ಟು ಹಣ ನೀಡಬೇಕು ಇಲ್ಲವಾದ್ರೆ ಈ ಕೆಲಸ ಬಿಟ್ಟು ಗೃಹಿಣಿಯಾಗಿ ಮನೆಯಲ್ಲಿ ಇರುತ್ತೀಯಾ ಎಂದು ಪ್ರಶ್ನೆ ಮಾಡಿದ್ದಾನೆ.

ವೈರಲ್ ಪೋಸ್ಟ್ ಇಲ್ಲಿದೆ

ಇದಕ್ಕೆ ಏನು ಪ್ರತಿಕ್ರಿಯೆ ನೀಡದೇ ಇದ್ದಾಗ ಮತ್ತೆ ಮಹಿಳೆಯರಿಗೆ ಕೆಲಸದ ಅಗತ್ಯವೇನಿದೆ? ಎಂದು ಮರು ಪ್ರಶ್ನಿಸಿದ್ದಾನೆ. ನೀವು ಅವಲಂಬಿತ ಹೆಂಡತಿಯನ್ನು ಬಯಸ್ತೀರಿ ಅಂತಾದ್ರೆ ಗೃಹಿಣಿಯಾಗಲು ಬಯಸುವವರನ್ನು ಏಕೆ ಮದುವೆಯಾಗಬಾರದು?. ಆದರೆ ನೀವು ಕೆಲಸ ಮಾಡುವ ಯುವತಿಯರನ್ನು ಮನವೊಲಿಸಲು ಏಕೆ ಪ್ರಯತ್ನಿಸುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿರುವುದನ್ನು ಕಾಣಬಹುದು.

ಇದನ್ನೂ ಓದಿ: ವೆಡ್ಡಿಂಗ್ ಆನಿವರ್ಸರಿ ದಿನ ಬೈಕ್ ಗಿಫ್ಟ್ ಕೊಟ್ಟ ಮಡದಿ, ಸರ್ಪ್ರೈಸ್‌ಗೆ ಪತಿ ಭಾವುಕ

ಈ ಪೋಸ್ಟ್ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತನ್ನನ್ನು ಮದುವೆಯಾಗುವ ಹುಡುಗಿ ಆರ್ಥಿಕ ಸ್ವಾತಂತ್ರ್ಯಳಾಗಿ ಬಿಟ್ಟರೆ ಕೈ ತಪ್ಪಿ ಹೋಗುತ್ತಾಳೆ ಅನ್ನೋ ಮನಸ್ಥಿತಿ ಈ ಯುವಕನದ್ದಿರಬೇಕು ಎಂದಿದ್ದಾರೆ. ಇನ್ನೊಬ್ಬರು, ನೀವು ಸರಿಯಾದ ನಿರ್ಧಾರ ಮಾಡಿದ್ದೀರಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇಂದಿನ ಜಗತ್ತಿನಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುತ್ತಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us