Viral Post: ಬೆಂಗಳೂರಿನಲ್ಲಿ ಗುಟ್ಕಾ ತಿಂದು ಯುವತಿಯ ಮೇಲೆ ಉಗಿದ ಆಟೋ ಚಾಲಕ; ನೆಟ್ಟಿಗರಿಂದ ಭಾರೀ ಆಕ್ರೋಶ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 05, 2024 | 2:16 PM

ಇತ್ತೀಚಿಗಷ್ಟೇ ನಮ್ಮ ಬೆಂಗಳೂರಿನಲ್ಲಿ ನಾಚಿಕೆಗೇಡಿನ ಘಟನೆಯೊಂದು ನಡೆದಿದ್ದು, ಎಲ್ಲೆಂದರಲ್ಲಿ ಉಗುಳಬಾರದೂ ಎಂಬ ನಿಯಮ ಜಾರಿಯಲ್ಲಿದ್ದರೂ ಆಟೋ ಚಾಲಕನೊಬ್ಬ ಗುಟ್ಕಾ ತಿಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಮೇಲೆ ಉಗುಳಿದ್ದಾನೆ. ಈ ಕಹಿ ಅನುಭವದ ಬಗ್ಗೆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ಪೊಲೀಸ್ ಭರವಸೆ ನೀಡಿದ್ದಾರೆ.

Viral Post: ಬೆಂಗಳೂರಿನಲ್ಲಿ ಗುಟ್ಕಾ ತಿಂದು ಯುವತಿಯ ಮೇಲೆ ಉಗಿದ ಆಟೋ ಚಾಲಕ; ನೆಟ್ಟಿಗರಿಂದ ಭಾರೀ ಆಕ್ರೋಶ
Follow us on

ಎಷ್ಟೇ ಜಾಗೃತಿ ಮೂಡಿಸಿದರೂ ಕೂಡಾ ಕೆಲವೊಬ್ಬರು ಪಾನ್ ಮಸಾಲ, ಗುಟ್ಕಾ ಇತ್ಯಾದಿ ಹೊಗೆ ರಹಿತ ತಂಬಾಕು ಪದಾರ್ಥಗಳನ್ನು ತಿಂದು ಎಲ್ಲೆಂದರಲ್ಲಿ ಉಗಿದು ನಿಯಮ ಉಲ್ಲಂಘಿಸುತ್ತಿರುತ್ತಾರೆ. ಇನ್ನೂ ಸಾರ್ವಜನಿಕ ಸ್ಥಳಗಳಲ್ಲಂತೂ ಉಗುಳುವವರ ಸಂಖ್ಯೆ ಕಡಿಮೆ ಆಗಿಲ್ಲ. ಹೌದು ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರೂ ಗುಟ್ಕಾ  ತಿನ್ನುವವರು ಎಲ್ಲೆಂದರಲ್ಲಿ ಉಗುಳುವ ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಅದೇ ರೀತಿಯ ನಾಚಿಕೆಗೇಡಿನ ಘಟನೆಯೊಂದು ನಮ್ಮ ಬೆಂಗಳೂರಿನಲ್ಲಿ ನಡೆದಿದ್ದು, ಆಟೋ ಚಾಲಕನೊಬ್ಬ ಗುಟ್ಕಾ ತಿಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಮೇಲೆ ಉಗುಳಿದ್ದಾನೆ. ತನಗಾದ ಕಹಿ ಅನುಭವದ  ಬಗ್ಗೆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆಟೋ ಚಾಲಕನ ವಿರುದ್ಧ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.

ವೃತ್ತಿಯಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವಂತ ಪರಿಶಿ ಎಂಬ ಯುವತಿ ತನಗಾದ ಕಹಿ ಅನುಭವದ ಬಗ್ಗೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಂದಿರಾ ನಗರದಲ್ಲಿ ತಾನು ನಡೆದುಕೊಂಡು ಹೋಗುತ್ತಿರುವ ವೇಳೆ ಆಟೋ ಚಾಲಕನೊಬ್ಬ ತನ್ನ ಮೇಲೆ ಉಗುಳಿದ್ದಾನೆ ಎಂದು ಹೇಳಿದ್ದಾರೆ. ಜೊತೆಗೆ ಈ ಕುರಿತ ಫೋಟೋಗಳನ್ನು ಕೂಡಾ ಶೇರ್ ಮಾಡಿದ್ದಾರೆ. ಈ ಪೋಸ್ಟ್ಗೆ ಉತ್ತರಿಸಿರುವ ಬೆಂಗಳೂರು ಪೊಲೀಸ್ ದಯವಿಟ್ಟು ಆ ಸ್ಥಳದ ವಿವರವನ್ನು ನೀಡಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಚಹಾ ಮಾರಿ ಕೇವಲ ಎರಡೂವರೆ ವರ್ಷದಲ್ಲಿ ತನ್ನ 8 ಲಕ್ಷ ರೂ ಸಾಲ ತೀರಿಸಿದ ಮಂಗಳೂರಿನ ವ್ಯಕ್ತಿ

ವೈರಲ್​​ ಫೋಟೋ ಇಲ್ಲಿದೆ:

ಜೂನ್ 03 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನೆಟ್ಟಿಗರು ಆಟೋ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ