ಮೈಕಲ್‌ ಜಾಕ್ಸನ್‌ ಡ್ಯಾನ್ಸ್‌ ಸ್ಟೆಪ್ಪನ್ನು ಮರು ಸೃಷ್ಟಿಸಿದ ಕಾಲೇಜು ಪ್ರೊಫೆಸರ್;‌ ವಿಡಿಯೋ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 31, 2025 | 12:26 PM

ನಾವ್ಯಾರಿಗೂ ಕಮ್ಮಿಯಿಲ್ಲ ಎನ್ನುತ್ತಾ ಭರ್ಜರಿಯಾಗಿ ಡ್ಯಾನ್ಸ್‌ ಮಾಡುವ ಸ್ಕೂಲ್‌ ಟೀಚರ್ಸ್‌, ಕಾಲೇಜು ಪ್ರೊಫೆಸರ್‌ಗಳಿಗೆ ಸಂಬಂಧಿಸಿದ ಒಂದಷ್ಟು ವಿಡಿಯೋಗಳು ಸೋಷಿಯಲ್‌ ಮಿಡಿಯಾದಲ್ಲಿ ಆಗಾಗ್ಗೆ ಕಾಣ ಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ಕಾಲೇಜು ಪ್ರೊಫೆಸರ್‌ ಸ್ಟೇಜ್‌ ಮೇಲೆ ಭರ್ಜರಿಯಾಗಿ ಡ್ಯಾನ್ಸ್‌ ಮಾಡಿದ್ದಾರೆ. ಮೈಕಲ್‌ ಜಾಕ್ಸನ್‌ ಸ್ಟೆಪ್ಪನ್ನು ಮರುಕಳಿಸಿದ ಪ್ರೊಫೆಸರ್‌ ಎನರ್ಜಿಗೆ ವಿದ್ಯಾರ್ಥಿಗಳಂತೂ ಫುಲ್‌ ಫಿದಾ ಆಗಿದ್ದಾರೆ.

ಮೈಕಲ್‌ ಜಾಕ್ಸನ್‌ ಡ್ಯಾನ್ಸ್‌ ಸ್ಟೆಪ್ಪನ್ನು ಮರು ಸೃಷ್ಟಿಸಿದ ಕಾಲೇಜು ಪ್ರೊಫೆಸರ್;‌ ವಿಡಿಯೋ ವೈರಲ್‌
ವೈರಲ್​​ ವಿಡಿಯೋ
Follow us on

ಬೆಂಗಳೂರು, ಮಾ. 31: ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ರೀತಿಯ ಪ್ರತಿಭೆ (talent) ಇದ್ದೇ ಇರುತ್ತದೆ. ಕೆಲವರಂತೂ ವೇದಿಕೆ ಸಿಕ್ಕಾಗ, ಅದನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಅದೆಷ್ಟೋ ಪ್ರತಿಭಾವಂತರು ತಮ್ಮ ಆಕ್ಟಿಂಗ್‌ (acting), ಡ್ಯಾನ್ಸ್‌ (dance) ಮತ್ತು ಹಾಡಿನ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ  ರಾತ್ರೋ ರಾತ್ರಿ ಸ್ಟಾರ್‌ ಆಗಿದ್ದಾರೆ. ಅದೇ ರೀತಿ ಬೆಂಗಳೂರಿನ (Bengaluru) ಕಾಲೇಜೊಂದರ ಪ್ರೊಫೆಸರ್‌ (professor) ತಮ್ಮ ಡ್ಯಾನ್ಸ್‌ (dance) ಮೂಲಕ ಧೂಳೆಬ್ಬಿಸಿದ್ದಾರೆ. ಹೌದು ಇವರು ವೇದಿಕೆಯ ಮೇಲೆ ಮೈಕಲ್‌ ಜಾಕ್ಸನ್‌ (Michel Jackson) ಸ್ಟೆಪ್ಪನ್ನು ಮರು ಸೃಷ್ಟಿಸಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಪ್ರೊಫೆಸರ್‌ ಡ್ಯಾನ್ಸ್‌ ಮೋಡಿಗೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ಬೆಂಗಳೂರಿನ ಕಾಲೇಜೊಂದರ ಪ್ರೊಫೆಸರ್‌ ಮೈಕಲ್‌ ಜಾಕ್ಸನ್‌ನಂತೆ ಅದ್ಭುತವಾಗಿ ಸ್ಟೆಪ್ಸ್‌ ಹಾಕುವ ಮೂಲಕ ತಮ್ಮ ವಿದ್ಯಾರ್ಥಿಗಳನ್ನು ಅಚ್ಚರಿಗೊಳಿಸಿದ್ದಾರೆ. ತಮ್ಮ ನೆಚ್ಚಿನ ಪ್ರಾಧ್ಯಾಪಕರ ಮನಮೋಹಕ ನೃತ್ಯವನ್ನು ಕಂಡು ವಿದ್ಯಾರ್ಥಿಗಳಂತೂ ಫುಲ್‌ ಫಿದಾ ಆಗಿದ್ದಾರೆ.

ಇದನ್ನೂ ಓದಿ
ಹಿರಿ ಜೀವಗಳಿಗೆ  ಮರುಮದುವೆ ಮಾಡಿಸಿದ ಮೊಮ್ಮಕ್ಕಳು
ರಾತ್ರಿಯ ರೊಮ್ಯಾ‌ನ್ಸ್ ವಿಡಿಯೋ ಶೇರ್‌ ಮಾಡಿದ ನವಜೋಡಿ
ಕೋಪದಲ್ಲಿ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ಹೆಂಡತಿ
ಯಾವ ಲಾಭದಾಯಕ ಉದ್ದಿಮೆಗೂ ಕಮ್ಮಿಯಿಲ್ಲ ಈ ಚೇಳು ಸಾಕಾಣಿಕೆ

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನುajdiaries___ ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದ್ದು, “ಏನ್‌ ಎನರ್ಜಿ; ಡ್ಯಾನ್ಸರ್‌ ಬೈ ಪ್ಯಾಷನ್‌, ಟೀಚರ್‌ ಬೈ ಪ್ರೊಫೆಷನ್”‌ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಾಲೇಜು ಪ್ರೊಫೆಸರ್‌ ಸ್ಟೇಜ್‌ ಮೇಲೆ ನಿಂತು ಮೈಕಲ್‌ ಜಾಕ್ಸನ್‌ ಸ್ಟೆಪ್ಪನ್ನು ಮರು ಸೃಷ್ಟಿಸಿರುವ ಅದ್ಭುತ ದೃಶ್ಯವನ್ನು ಕಾಣಬಹುದು. ತಮ್ಮ ನೆಚ್ಚಿನ ಪ್ರಾಧ್ಯಾಪಕರ ಅದ್ಭುತ ಡ್ಯಾನ್ಸ್‌ ಪ್ರತಿಭೆಯನ್ನು ಕಂಡು ವಿದ್ಯಾರ್ಥಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವಾಗ ಟಿಪ್ಸ್ ನೀಡಿದ್ರೆ ಮಾತ್ರ ಬುಕಿಂಗ್ ಕನ್ಫರ್ಮ್

ಮಾರ್ಚ್‌ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಏನ್‌ ಸ್ಟೆಪ್ಸ್‌ ನೋಡಿ, ಸಖತ್ತಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸರ್‌ ದಯವಿಟ್ಟು ಡ್ಯಾನ್ಸ್‌ ಟ್ಯೂಷನ್‌ ಕ್ಲಾಸ್‌ ಓಪನ್‌ ಮಾಡಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ತುಂಬಾ ಕೂಲ್‌ ಆಗಿದೆʼ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ