ಈ ದುಬಾರಿ ದುನಿಯಾದಲ್ಲಿ ಬದುಕೋದೇ ಕಷ್ಟ. ಹೌದು, ಮುಂಬೈ, ಬೆಂಗಳೂರಿನಂತಹ (Bengaluru) ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಜನರು ಎಷ್ಟು ದುಡಿದರೂ ಕೂಡ ಸಾಕಾಗುವುದಿಲ್ಲ. ಮನೆ ಬಾಡಿಗೆಯಿಂದ ಹಿಡಿದು ಮನೆಯ ಖರ್ಚುವೆಚ್ಚಗಳನ್ನು ಸರಿದೂಗಿಸುವುದರಲ್ಲಿ ತಿಂಗಳ ಸಂಬಳವು ಮುಗಿದೇ ಹೋಗುತ್ತದೆ. ಹೀಗಾಗಿ ಬೆಂಗಳೂರಿನಲ್ಲಿ ಬಂದು ನೆಲೆಸುವ ಜನರು ಮನೆ ಸಣ್ಣದಿದ್ದರೂ ಸಮಸ್ಯೆಯಿಲ್ಲ, ಬಾಡಿಗೆ ಮಾತ್ರ ಕಡಿಮೆಯಿರಬೇಕು ಎಂದ ಬಯಸುವುದು ಸಹಜ. ಆದರೆ ಬೆಂಗಳೂರಿನಲ್ಲಿ ನೆಲೆಸಿರುವ ಈ ಮೆಕ್ಸಿಕನ್ (Mexican) ಮೂಲದ ವ್ಯಕ್ತಿಯೂ ಎರಡು ಗಂಟೆಗೆ ನೀಡುವ ಬಾಡಿಗೆ ಕೇಳಿದ್ರೆ, ಒಂದು ಕ್ಷಣ ಶಾಕ್ ಆಗ್ತೀರಾ. ಈತನು ನೀಡುವ ಬಾಡಿಗೆಯನ್ನು ನೀವು ವರ್ಷಪೂರ್ತಿ ದುಡಿದರೂ ಕೂಡ ನಿಮ್ಮ ಕೈಯಲ್ಲಿ ಅಷ್ಟು ಮೊತ್ತವನ್ನು ಸಂಪಾದಿಸಲು ಸಾಧ್ಯವಿಲ್ಲ. ತಾನು ಉಳಿದುಕೊಳ್ಳಲು ಈತನು ಬಾಡಿಗೆ ಮನೆಗಾಗಿ ಖರ್ಚು ಮಾಡುವ ಹಣದ ಬಗ್ಗೆ ಕೇಳಿ, ಇಷ್ಟೊಂದಾ ಎಂದು ನೀವು ಹೇಳಿದರೂ ತಪ್ಪೇನಿಲ್ಲ. ಈ ಕುರಿತಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಬಳಕೆದಾರರು ಬಾಯಿಯ ಮೇಲೆ ಬೆರಳಿಟ್ಟಿದ್ದಾರೆ.
@theshashankp ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಯುವತಿಯೂ ಬೆಂಗಳೂರಿನ ಹೊರಭಾಗದಲ್ಲಿ ನೆಲೆಸಿರುವ ಮೆಕ್ಸಿಕನ್ ಮೂಲದ ವ್ಯಕ್ತಿಯೊಬ್ಬರನ್ನು ಮಾತನಾಡಿದ್ದಾಳೆ. ಈ ವ್ಯಕ್ತಿಯೂ ನಂದಿ ಹಿಲ್ಸ್ ರಸ್ತೆಯಲ್ಲಿರುವ ಐಷಾರಾಮಿ ಮನೆಯಲ್ಲಿ ಉಳಿದುಕೊಂಡಿದ್ದು, ಈ ತಾನು ಈ ಮನೆಯಲ್ಲಿ ಉಳಿದುಕೊಳ್ಳುವ ಸಲುವಾಗಿ ನೀಡುವ ಬಾಡಿಗೆಯ ಬಗ್ಗೆ ರಿವೀಲ್ ಮಾಡಿದ್ದಾನೆ. ಬೆಂಗಳೂರಿನಲ್ಲಿ ನೆಲೆಸಿರುವ ನೀವು ಎಷ್ಟು ಬಾಡಿಗೆ ಕಟ್ಟುತ್ತೀರಾ ಎಂದು ಯುವತಿಯೂ ಕೇಳುತ್ತಿದ್ದಂತೆ, ಈ ವ್ಯಕ್ತಿಯೂ ನಾಲ್ಕು ಲಕ್ಷ ಎಂದಿದ್ದಾನೆ. ನಾನು ಮೆಕ್ಸಿಕೋದವನಾಗಿದ್ದು, ನಂದಿ ಹಿಲ್ಸ್ ರಸ್ತೆಯಲ್ಲಿರುವ ಐಷಾರಾಮಿ ಮನೆಯಲ್ಲಿ ಉಳಿದುಕೊಂಡಿದ್ದೇನೆ ಎಂದು ಹೇಳಿದ್ದಾನೆ. ಆ ಬಳಿಕ ಯುವತಿ ನಿಮ್ಮ ಬಾಡಿಗೆ ಮನೆಯನ್ನು ತೋರಿಸಬಹುದೇ ಎನ್ನುತ್ತಿದ್ದಂತೆಯೇ ಆಕೆಯನ್ನು ಕರೆದುಕೊಂಡು ಹೋಗಿ ತನ್ನ ಮನೆಯನ್ನೆಲ್ಲಾ ತೋರಿಸಿರುವುದನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು.
ಇದನ್ನೂ ಓದಿ :Video: ಅಪರಿಚಿತ ವ್ಯಕ್ತಿಗೆ ಊಟ ಹಾಕಿ ಸತ್ಕರಿಸಿದ ಬೆಂಗಳೂರಿನ ಕುಟುಂಬ, ಇದೇ ನೋಡಿ ನಿಜವಾದ ಸಂಸ್ಕಾರ
ಈ ವಿಡಿಯೋದಲ್ಲಿ ಈ ವ್ಯಕ್ತಿಯೂ ಈ ಮನೆಯಲ್ಲಿನ ಸವಲತ್ತುಗಳನ್ನು ತೋರಿಸಿದ್ದಾನೆ. ಹಚ್ಚಹಸಿರಿನ ವಾತಾವರಣದ ನಡುವೆ ಇರುವ ಈ ಮನೆಯು ಐಷಾರಾಮಿ ಸೌಲಭ್ಯವನ್ನು ಹೊಂದಿದೆ. ಮನೆಯೊಳಗೆ ಖಾಸಗಿ ಈಜುಕೊಳ, ಸುಂದರವಾದ ಗಾರ್ಡನ್, ವಿಶಾಲವಾದ ಲಿವಿಂಗ್ ರೂಮ್, ಆಕರ್ಷಕ ಬೆಡ್‌ರೂಮ್ ನೋಡಬಹುದು. ಅಷ್ಟೇ ಅಲ್ಲದೇ, ಲಿವಿಂಗ್ ರೂಮ್‌ನಲ್ಲಿರುವ ಪೀಠೋಪಕರಣಗಳನ್ನು ಮೆಕ್ಸಿಕೋದಿಂದ ತರಲಾಗಿದೆ ಎಂದು ಈ ವಿಡಿಯೋದಲ್ಲಿ ರಿವೀಲ್ ಮಾಡಿದ್ದಾನೆ.
Man is living in a different Bengaluru… pic.twitter.com/0foQGM3rv0
— Akki Rotti (@Theshashank_p) June 17, 2025
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ