Viral: ಕನಸು ನನಸಾದ ಕ್ಷಣ; ತನ್ನ ಅಜ್ಜಿಯನ್ನು ಮೈಕ್ರೋ ಸಾಫ್ಟ್ ಆಫೀಸ್ ತೋರಿಸಲು ಕರೆದೊಯ್ದ ಉದ್ಯೋಗಿ

ಜೀವನದ ಸಾರ್ಥಕ ಕ್ಷಣಗಳಲ್ಲಿ ಇದು ಕೂಡ ಒಂದು ಎಂದರೆ ತಪ್ಪಾಗಲ್ಲ. ತನ್ನವರನ್ನು ತನ್ನ ಆಫೀಸಿಗೆ ಕರೆದುಕೊಂಡು ಹೋಗಿ ಕೆಲಸ ಮಾಡುವ ಸ್ಥಳವನ್ನು ತೋರಿಸುವುದರಲ್ಲಿರುವ ಖುಷಿಯೇ ಬೇರೆ. ಹೌದು, ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರು ತನ್ನ 81 ವರ್ಷದ ಅಜ್ಜಿಯನ್ನು ಮೊದಲ ಬಾರಿಗೆ ತಮ್ಮ ಬೆಂಗಳೂರಿನ ಮೈಕ್ರೋಸಾಫ್ಟ್ ಕಚೇರಿಗೆ ಕರೆದುಕೊಂಡು ಹೋಗಿದ್ದು, ಈ ಬಗ್ಗೆ ಮಾಡಿದ ಲಿಂಕ್ಡ್‌ಇನ್ ಪೋಸ್ಟ್ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ಪೋಸ್ಟ್ ನೋಡಿದ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಕನಸು ನನಸಾದ ಕ್ಷಣ; ತನ್ನ ಅಜ್ಜಿಯನ್ನು ಮೈಕ್ರೋ ಸಾಫ್ಟ್ ಆಫೀಸ್ ತೋರಿಸಲು ಕರೆದೊಯ್ದ ಉದ್ಯೋಗಿ
ವೈರಲ್‌ ಪೋಸ್ಟ್‌
Image Credit source: LinkedIn

Updated on: May 22, 2026 | 3:34 PM

ಬೆಂಗಳೂರು, ಮೇ 22: ತಾವು ಚೆನ್ನಾಗಿ ಓದಬೇಕು, ಹೆತ್ತವರನ್ನು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರ ಆಸೆಗಳನ್ನು ಈಡೇರಿಸಬೇಕು ಹೀಗೆ ಪ್ರತಿಯೊಬ್ಬರಿಗೆ ಇಂತಹ ಸಾಕಷ್ಟು ಆಸೆಗಳಿರುತ್ತವೆ. ಅಂತಹ ಕ್ಷಣ ಬಂದರೆ ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರ ಜೀವನದಲ್ಲಿ ಭಾವನಾತ್ಮಕ ಕ್ಷಣವು ಎದುರಾಗಿದೆ. ಈ ವ್ಯಕ್ತಿ ತನ್ನ ಅಜ್ಜಿಯನ್ನು ಬೆಂಗಳೂರಿನ (Bengaluru) ಮೈಕ್ರೋಸಾಫ್ಟ್ ಆಫೀಸ್ ತೋರಿಸಲು ಕರೆದುಕೊಂಡು ಹೋಗಿದ್ದಾರೆ. ಈ ಭಾವನಾತ್ಮಕ ಕ್ಷಣದ ಪೋಸ್ಟ್ ಹಂಚಿಕೊಂಡು ತಮಗಾದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

Vyanktesh Bajaj ಎಂಬ ವ್ಯಕ್ತಿ ತಮ್ಮ ಲಿಂಕ್ಡ್ ಇನ್ ಖಾತೆಯಲ್ಲಿ ಜೀವನದ ಅಮೂಲ್ಯ ಕ್ಷಣದ ಪೋಸ್ಟ್ ಹಂಚಿಕೊಂಡಿದ್ದಾರೆ. ಸೀನಿಯರ್ ಮ್ಯಾನೇಜರ್ ಆಗಿ  ವ್ಯಂಕ್ತೇಶ್ ಬಜಾಜ್ ಅವರು ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೋಸ್ಟ್ ನಲ್ಲಿ, ಇಂದು ನನ್ನ ಜೀವನದ ಅತ್ಯಂತ ಭಾವನಾತ್ಮಕ ಕ್ಷಣಗಳಲ್ಲಿ ಒಂದಾಗಿತ್ತು. ನಾನು ಮಹಾರಾಷ್ಟ್ರದ ಮಂಗ್ರುಲ್‌ಪಿರ್ ಎಂಬ ಸಣ್ಣ ಪಟ್ಟಣದಿಂದ ಬಂದಿದ್ದೇನೆ, ಅಲ್ಲಿ ಅವಕಾಶಗಳು ಹಾಗೂ ಕಾರ್ಪೊರೇಟ್ ಜಗತ್ತಿಗೆ ಒಡ್ಡಿಕೊಳ್ಳುವುದು ಏನೂ ಇರಲಿಲ್ಲ, ಮೆಟ್ರೋ-ನಗರ ಐಷಾರಾಮಿಗಳು ಸಹ ನಮಗೆ ದೂರವಿತ್ತು ಎಂದು ಹೇಳಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ನನ್ನ ಬಾಲ್ಯದಲ್ಲಿ, ನಾನು ಟಿವಿಯಲ್ಲಿ ನೋಡುತ್ತಿದ್ದ ಆ ಎತ್ತರದ ಗಾಜಿನ ಕಟ್ಟಡಗಳಲ್ಲಿ ಇರಬೇಕೆಂದು ಯಾವಾಗಲೂ ಕನಸು ಕಾಣುತ್ತಿದ್ದೆ. ಇಂದು, ನಾನು ನನ್ನ 81 ವರ್ಷದ ಅಜ್ಜಿಯನ್ನು ಬೆಂಗಳೂರಿನ ಮೈಕ್ರೋಸಾಫ್ಟ್ ಕ್ಯಾಂಪಸ್ ಗೆ ಕರೆದುಕೊಂಡು ಹೋಗಿದ್ದೆ. ಈ ಕಾರ್ಪೊರೇಟ್ ಜಗತ್ತನ್ನು ಒಳಗಿನಿಂದ ನೋಡಿದ್ದು ಇದೇ ಮೊದಲು. ತಂತ್ರಜ್ಞಾನ ಮತ್ತು ಕೆಲಸದ ಸ್ಥಳದ ವಾತಾವರಣವನ್ನು ಗಮನಿಸುತ್ತಾ ಅಜ್ಜಿ “ಶುದ್ಧ ಕುತೂಹಲ ಮತ್ತು ಆಶ್ಚರ್ಯ” ದಿಂದ ಸುತ್ತಲೂ ನೋಡುತ್ತಿದ್ದರು ಎಂದು ಆ ಕ್ಷಣವನ್ನು ವಿವರಿಸಿದ್ದಾರೆ.

ಇಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸ ಹೇಗೆ ನಡೆಯುತ್ತದೆ? ಎಂದು ಅಜ್ಜಿ ನನ್ನನ್ನು ಕೇಳುತ್ತಲೇ ಇದ್ದರು. ತರಗತಿಗಳು ಎಂದಿಗೂ ಸಾಧ್ಯವಾಗದ ರೀತಿಯಲ್ಲಿ ಜೀವನವು ಅವಳಿಗೆ ಬುದ್ಧಿವಂತಿಕೆಯನ್ನು ಕಲಿಸಿತು. ತಲೆಮಾರುಗಳ ತ್ಯಾಗಗಳು ಸದ್ದಿಲ್ಲದೆ ಪೂರ್ಣ ವೃತ್ತಕ್ಕೆ ಬರುತ್ತಿವೆ” ಎಂಬುದರ ಸಂಕೇತವಾಗಿ ಕಚೇರಿ ಭೇಟಿ ಕಂಡುಬಂದಿದೆ. ಅಜ್ಜಿ ಮುಗುಳ್ನಕ್ಕು, ‘ನೀನು ತುಂಬಾ ಅರ್ಥಪೂರ್ಣ ಕೆಲಸ ಮಾಡುತ್ತಿದ್ದೀಯಾ ಎಂದು ಸರಳವಾಗಿ ಹೇಳಿದರು. ಆ ಒಂದು ವಾಕ್ಯವು ಯಾವುದೇ ಬಡ್ತಿ, ಶೀರ್ಷಿಕೆ ಅಥವಾ ಪ್ರಶಸ್ತಿಗಿಂತ ದೊಡ್ಡದಾಗಿದೆ ಎಂದು ಭಾವಿಸಿದೆ. ಇಂದು ನಾನು ಸ್ವಲ್ಪ ಎತ್ತರವಾಗಿದ್ದೇನೆ ಎಂದು ಭಾವಿಸಿದೆ. ನನ್ನ ಪದವಿ ಅಥವಾ ನನ್ನ ಅಧಿಕಾರಾವಧಿಯಿಂದಾಗಿ ಅಲ್ಲ, ಆದರೆ ನಾನು ಅವಳ ಕಣ್ಣುಗಳ ಮೂಲಕ ನನ್ನ ಜಗತ್ತನ್ನು ನೋಡಿದ್ದರಿಂದ. ಮಹಾರಾಷ್ಟ್ರದ ಒಂದು ಸಣ್ಣ ಪಟ್ಟಣವಾದ ಮಂಗ್ರುಲ್‌ಪಿರ್‌ನಿಂದ ಮೈಕ್ರೋಸಾಫ್ಟ್‌ನ ಕಾರಿಡಾರ್‌ಗಳವರೆಗೆ – ಇಂದು ವಿಶೇಷವೆನಿಸಿತು ಎಂದು ಅನುಭವವನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗಿಂತ ಜರ್ಮನಿಯೇ ಬೆಸ್ಟ್; ಬೆಂಗಳೂರಿನ ಟೆಕ್ಕಿ ಹೀಗೆಂದಿದ್ದೇಕೆ ಗೊತ್ತಾ?

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಎಲ್ಲರಿಗೂ ಇಂತಹ ಅವಕಾಶಗಳು ಬರುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪ್ರತಿಯೊಬ್ಬ ವ್ಯಕ್ತಿಗೂ ಇದು ಹೆಮ್ಮೆಯ ಕ್ಷಣ ಎಂದರೆ, ಮತ್ತೊಬ್ಬರು, ಅಜ್ಜಿಗೆ ಮೊಮ್ಮಗನ ಮೇಲೆ ಎಷ್ಟು ಹೆಮ್ಮೆ ಅನಿಸಿದ್ದೀರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 3:29 pm, Fri, 22 May 26

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us