
ಟ್ರಾಫಿಕ್ ಟ್ರಾಫಿಕ್ ಟ್ರಾಫಿಕ್, ಬೆಂಗಳೂರಿನಲ್ಲಿ(Bengaluru) ಬೆಳಗ್ಗೆ ಹಾಗೂ ಸಂಜೆಯ ವೇಳೆ ಟ್ರಾಫಿಕ್ ಜಾಮ್ ನಿಂದ (Traffic jam) ವಾಹನ ಸವಾರರು ಸುಸ್ತಾಗಿ ಬಿಡುತ್ತಾರೆ. ಆದರೆ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಜನರು ಈ ಸಮಸ್ಯೆಗೆ ಹೊಂದಿಕೊಳ್ಳುವುದು ಅನಿವಾರ್ಯ. ಟ್ರಾಫಿಕ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್ ವೈರಲ್ ಆಗುತ್ತಲೇ ಏರುತ್ತದೆ. ಆದರೆ ಇದೀಗ ಇಲ್ಲೊಬ್ಬ ವ್ಯಕ್ತಿಯೂ ಟ್ರಾಫಿಕ್ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕೆಲವು ಸಲಹೆಗಳನ್ನು ಅನುಸರಿಸಿದ್ರೆ ಎಲ್ಲಾ ಸಮಸ್ಯೆಗೆ ಮುಕ್ತಿ ಸಿಗುತ್ತೆ ಎಂದು ಹೇಳಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಇವರ ಸಲಹೆಯನ್ನು ಮೆಚ್ಚಿಕೊಂಡಿದ್ದಾರೆ.
ವೈರಲ್ ಪೋಸ್ಟ್‌ನಲ್ಲಿ ವ್ಯಕ್ತಿ ಬೆಂಗಳೂರಿನ ನಿವಾಸಿಗಳೇ ನೀವು ನಿಮ್ಮ ವಾಹನವನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ನಡೆದುಕೊಂಡು ಹೋಗಿ. ಬೆಂಗಳೂರಿನಲ್ಲಿ ನಡೆದುಕೊಂಡು ಹೋಗುವುದು ವಾಹನದಲ್ಲಿ ಹೋಗುವುದಕ್ಕಿಂತ ಒಳ್ಳೆಯದು. ನೀವು ವೇಗವಾಗಿ ಅಂದುಕೊಂಡ ಸ್ಥಳವನ್ನು ತಲುಪಬಹುದು. ನಡೆದುಕೊಂಡು ಹೋಗಲು ಇಲ್ಲಿನ ವಾತಾವರಣವು ಅಷ್ಟೇ ಉತ್ತಮವಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Viral: ಟ್ರಾಫಿಕ್ ಜಾಮ್ ನಡುವೆ ಸಮಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಬೆಂಗಳೂರಿನ ಉದ್ಯಮಿ
ಈ ಪೋಸ್ಟ್‌ಗೆ ಬಳಕೆದಾರರು ಕಾಮೆಂಟ್ ಮಾಡಿದ್ದು, ಒಬ್ಬರು ಬೆಂಗಳೂರಿನಲ್ಲಿ ಫುಟ್ ಪಾತ್ ವ್ಯವಸ್ಥೆ ಕೂಡ ಇಲ್ಲ, ಪುಟ್ ಪಾತ್ ನ್ನು ಬೀದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ ಎಂದಿದ್ದಾರೆ. ಮತ್ತೊಬ್ಬರು, ನಡೆಯಲು ಸ್ಥಳವೆಲ್ಲಿದೆ. ಸುರಂಗ ಮಾರ್ಗವೊಂದೇ ಪರಿಹಾರ ಬಿಟ್ಟರೆ ಬೇರೆ ಯಾವುದೇ ದಾರಿಯಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಬೆಂಗಳೂರಿನ ಜನರು ಇಲ್ಲಿನ ಟ್ರಾಫಿಕ್ ಸಮಸ್ಯೆಗೆ ಹೊಂದಿಕೊಳ್ಳುವುದು ಅನಿವಾರ್ಯ, ಇದಕ್ಕೆ ಪರಿಹಾರ ಕಂಡುಕೊಂಡರೆ ನಮ್ಮ ಸಮಯ ವ್ಯರ್ಥ, ಇಂತಹ ಸಲಹೆಗಳು ಸ್ವಲ್ಪ ಜನರಿಗೆ ಮಾತ್ರ ಉಪಯೋಗಕ್ಕೆ ಬರಬಹುದು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ