AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೆಂಗಳೂರಿನಲ್ಲಿ ಬಾಡಿಗೆ ಮನೆ ತೋರಿಸಲು ದುಡ್ಡು ಕೇಳ್ತಾರೆ; ಮನೆ ಮಾಲೀಕನ ದುರಾಸೆ ಕಂಡು ಶಾಕ್ ಆದ ವ್ಯಕ್ತಿ

ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿ ಬದುಕುವುದೇ ದೊಡ್ಡ ಸವಾಲು. ಮನೆ ಮಾಲೀಕರು ದೊಡ್ಡ ಠೇವಣಿ, ಹೆಚ್ಚಿನ ಬಾಡಿಗೆ ಅಥವಾ ಹೆಚ್ಚುವರಿ ಶುಲ್ಕವನ್ನು ಕೇಳುವುದು ಮಾಮುಲಿಯಾಗಿದೆ. ಆದರೆ ಬೆಂಗಳೂರಿನ ಯುವ ವೃತ್ತಿಪರರೊಬ್ಬರಿಗೆ ಇದೇ ರೀತಿ ಕಹಿ ಅನುಭವವಾಗಿದೆ. ಫ್ಲಾಟ್ ನೋಡಲು ಒಂದು ತಿಂಗಳ ಬಾಡಿಗೆ ನೀಡಿ ಎಂದು ಬೇಡಿಕೆ ನೀಡಿದ್ದಾರೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

Viral: ಬೆಂಗಳೂರಿನಲ್ಲಿ ಬಾಡಿಗೆ ಮನೆ ತೋರಿಸಲು ದುಡ್ಡು ಕೇಳ್ತಾರೆ; ಮನೆ ಮಾಲೀಕನ ದುರಾಸೆ ಕಂಡು ಶಾಕ್ ಆದ ವ್ಯಕ್ತಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on:Feb 05, 2026 | 11:13 AM

Share

ಬೆಂಗಳೂರು, ಫೆಬ್ರವರಿ 05: ಈಗಿನ ದುಬಾರಿ ದುನಿಯಾದಲ್ಲಿ ಬೆಂಗಳೂರಿನಂತಹ (Bengaluru) ದೊಡ್ಡ ದೊಡ್ಡ ನಗರದಲ್ಲಿ ಬಾಡಿಗೆ ಮನೆಯಲ್ಲಿ ಇರುವುದು ಕಷ್ಟಕರ. ದುಡಿದ ಹಣವನ್ನೆಲ್ಲವೂ ಬಾಡಿಗೆ ಕಟ್ಟುವುದಕ್ಕೆ ಆಗುತ್ತದೆ. ಆದರೆ ಮನೆ ಮಾಲೀಕರು ತಿಂಗಳ ಬಾಡಿಗೆ ಸಾವಿರ ಅಲ್ಲ, ಲಕ್ಷ ರೂ ಹೇಳ್ತಾರೆ. ಆದರೆ ಬೆಂಗಳೂರಿನಲ್ಲಿ ಮನೆಯನ್ನು ಹುಡುಕುತ್ತಿರುವಾಗ ಎದುರಾದ ಅನಿರೀಕ್ಷಿತ ಘಟನೆಯ ಬಗ್ಗೆ ವಿವರಿಸಿದ್ದಾರೆ. ಮನೆ ಹೇಗಿದೆ ಎಂದು ನೋಡಲು ಒಂದು ತಿಂಗಳ ಬಾಡಿಗೆ ನೀಡಬೇಕೆಂದ ಮನೆ ಮಾಲೀಕರ ವಿಚಿತ್ರ ಬೇಡಿಕೆ ಕಂಡು ಶಾಕ್ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಯುವ ವೃತ್ತಿಪರರೊಬ್ಬರು ಬೆಂಗಳೂರಿನ ಮನೆ ಮಾಲೀಕರ ಆಸೆ ಬುರುಕುತನದ ಬಗ್ಗೆ ವಿವರಿಸಿದ್ದಾರೆ. ಫ್ಲಾಟ್ ನೋಡಲು ಒಂದು ತಿಂಗಳ ಬಾಡಿಗೆ ಕೇಳಿದೆ” ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಈ ಘಟನೆ ಸುಮಾರು ಎರಡು ತಿಂಗಳ ಹಿಂದೆ ನಡೆದಿತ್ತು. ಬಹುಮಹಡಿ ಕಟ್ಟಡದ ಸುತ್ತಲೂ ನಡೆದುಕೊಂಡು ಹೋಗುತ್ತಿದ್ದಾಗ ಭದ್ರತಾ ಸಿಬ್ಬಂದಿ ಬಳಿ ಯಾವುದಾದರೂ ಫ್ಲಾಟ್‌ಗಳು ಖಾಲಿ ಇವೆಯೇ ಎಂದು ಕೇಳಿದೆ. ಭದ್ರತಾ ಸಿಬ್ಬಂದಿ ಒಂದು ಫ್ಲಾಟ್ ಖಾಲಿಯಿದೆ ಎಂದು ಹೇಳಿ ಮನೆಮಾಲೀಕರ ಫೋನ್ ನಂಬರ್ ಕೊಟ್ಟರು ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

Reddit Post

ಮಾಲೀಕರಿಗೆ ಕರೆ ಮಾಡಿದ ಬಳಿಕ ಭದ್ರತಾ ಸಿಬ್ಬಂದಿ ಫ್ಲಾಟ್ ತೋರಿಸಿದರು. ಸಂಭಾಷಣೆಯ ಸಮಯದಲ್ಲಿ ಯಾವುದೇ ಶುಲ್ಕ, ಠೇವಣಿ ಅಥವಾ ವಿಶೇಷ ಶುಲ್ಕದ ಉಲ್ಲೇಖವಿರಲಿಲ್ಲ. ಆದರೆ ಸೆಕ್ಯೂರಿಟಿ ಗಾರ್ಡ್ ವಿಚಿತ್ರ ಬೇಡಿಕೆ ಇಟ್ಟರು. ಅಪಾರ್ಟ್ಮೆಂಟ್ ತೋರಿಸಲು ನಾನು ಒಂದು ತಿಂಗಳ ಬಾಡಿಗೆಯನ್ನು ಪಾವತಿಸಬೇಕೆಂದು ಭದ್ರತಾ ಸಿಬ್ಬಂದಿ ನನಗೆ ಹೇಳಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿರಲಿಲ್ಲ. ಇದು ದಲ್ಲಾಳಿ ಅಥವಾ ಯಾವುದೇ ಅಧಿಕೃತ ವ್ಯವಹಾರವಾಗಿರಲಿಲ್ಲ. ಬಾಗಿಲು ತೆರೆದು ಫ್ಲಾಟ್ ತೋರಿಸಲು ಹಣ ನೀಡಬೇಕೇ? ಎಂದು ಇಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಿಂದ ಗುರಂಗಾವ್‌ಗೆ ಸ್ಥಳಾಂತರಗೊಳ್ಳುವ ಹಿಂದಿನ ಕಾರಣ ವಿವರಿಸಿದ ವ್ಯಕ್ತಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇಲ್ಲಿಗೆ ದುಡ್ಡಿಗೆ ಮಾತ್ರ ಬೆಲೆ ಎಂದಿದ್ದಾರೆ. ಮತ್ತೊಬ್ಬರು, ಭಾರತದಲ್ಲಿ ಎಲ್ಲರೂ ವಂಚನೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ನೈತಿಕವಾಗಿ ದಿವಾಳಿಯಾಗಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮನೆ ಮಾಲೀಕರು ಬಾಡಿಗೆ ಹೆಸರಿನಲ್ಲಿ ಜನರಿಂದ ಬೇಕಾಬಿಟ್ಟಿ ದುಡ್ಡು ವಸೂಲಿ ಮಾಡುತ್ತಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:11 am, Thu, 5 February 26

Follow Us
ಹೀರೋ ಆಗಬೇಕೆಂಬ ಕನಸು ಈಡೇರಿಸಿಕೊಂಡ ರೈತ ಚೇತನ್: ವಿಡಿಯೋ
ಹೀರೋ ಆಗಬೇಕೆಂಬ ಕನಸು ಈಡೇರಿಸಿಕೊಂಡ ರೈತ ಚೇತನ್: ವಿಡಿಯೋ
ಬಾಗಲಕೋಟೆಯಲ್ಲಿ ಏಕಾಏಕಿ ಕಾರು ಸ್ಫೋಟ: ಬಾಂಬ್ ಶಂಕೆ, ಖಾಕಿ ತನಿಖೆ
ಬಾಗಲಕೋಟೆಯಲ್ಲಿ ಏಕಾಏಕಿ ಕಾರು ಸ್ಫೋಟ: ಬಾಂಬ್ ಶಂಕೆ, ಖಾಕಿ ತನಿಖೆ
ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರ ಕೈಗೊಂಡ ಮೋದಿ, ಏನದು?
ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರ ಕೈಗೊಂಡ ಮೋದಿ, ಏನದು?
ಇವಾನ್ಸ್ ಹಿಡಿದ ಅತ್ಯದ್ಭುತ ಕ್ಯಾಚ್​​ಗೆ ಶತಕ ವಂಚಿತರಾದ ವೈಭವ್
ಇವಾನ್ಸ್ ಹಿಡಿದ ಅತ್ಯದ್ಭುತ ಕ್ಯಾಚ್​​ಗೆ ಶತಕ ವಂಚಿತರಾದ ವೈಭವ್
ಯುವಕರೊಂದಿಗೆ ಮೋದಿ ಸಂವಾದ ಹೇಗಿತ್ತು? ವಿದ್ಯಾರ್ಥಿಗಳು ಹೇಳಿದ್ದೇನು?
ಯುವಕರೊಂದಿಗೆ ಮೋದಿ ಸಂವಾದ ಹೇಗಿತ್ತು? ವಿದ್ಯಾರ್ಥಿಗಳು ಹೇಳಿದ್ದೇನು?
102 ಮೀ. ಉದ್ದದ ಸಿಕ್ಸರ್ ಬಾರಿಸಿದ ವೈಭವ್; ವಿಡಿಯೋ
102 ಮೀ. ಉದ್ದದ ಸಿಕ್ಸರ್ ಬಾರಿಸಿದ ವೈಭವ್; ವಿಡಿಯೋ
ವಿಕಸಿತ್ ವೈಬ್ರೆಂಟ್‌ ವಿಲೇಜ್‌:ಯುವಕರೊಂದಿಗೆ ಮೋದಿ ಸಂವಾದ ನೇರ ಪ್ರಸಾರ
ವಿಕಸಿತ್ ವೈಬ್ರೆಂಟ್‌ ವಿಲೇಜ್‌:ಯುವಕರೊಂದಿಗೆ ಮೋದಿ ಸಂವಾದ ನೇರ ಪ್ರಸಾರ
ಬಾಗಲಕೋಟೆಯ ಹಿಪ್ಪರಗಿ ಬಳಿ ಕಾರು ಸ್ಫೋಟದ ಬಗ್ಗೆ ಎಸ್​ಪಿ ಹೇಳಿದ್ದೇನು?
ಬಾಗಲಕೋಟೆಯ ಹಿಪ್ಪರಗಿ ಬಳಿ ಕಾರು ಸ್ಫೋಟದ ಬಗ್ಗೆ ಎಸ್​ಪಿ ಹೇಳಿದ್ದೇನು?
ರಾಜ್ ಬಿ. ಶೆಟ್ಟಿ ಹೋದಲ್ಲೆಲ್ಲ ‘ಕರಾವಳಿ’ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ
ರಾಜ್ ಬಿ. ಶೆಟ್ಟಿ ಹೋದಲ್ಲೆಲ್ಲ ‘ಕರಾವಳಿ’ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ
ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ ಅಧಿಕಾರ ಸ್ವೀಕಾರ
ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ ಅಧಿಕಾರ ಸ್ವೀಕಾರ