Video: ನನ್ನ ಜೀವನದ ತಪ್ಪು ನಿರ್ಧಾರ ಇದು; ಬಸವನಗುಡಿಯಿಂದ ಬೆಳ್ಳಂದೂರಿಗೆ ಸ್ಥಳಾಂತರಗೊಂಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ನಿವಾಸಿ

ವರ್ಷಗಳ ಕಾಲ ಒಂದೇ ಊರಿನಲ್ಲಿ ನೆಲೆಸಿ, ಆ ಊರಿನಿಂದ ಹೊರಡಬೇಕಾದ ಪರಿಸ್ಥಿತಿ ಬಂದಾಗ ಆ ನಿರ್ಧಾರವನ್ನು ಒಪ್ಪಿಕೊಳ್ಳಲು ಸಮಯ ಬೇಕಾಗುತ್ತದೆ. ಆದರೆ, ಅನಿವಾರ್ಯ ಕಾರಣಕ್ಕೆ ಸ್ಥಳಾಂತರಗೊಳ್ಳಲೇ ಬೇಕು. ಮುಂದೊಂದು ದಿನ ತಮ್ಮ ಈ ನಿರ್ಧಾರ ನೆನೆದು ತಪ್ಪು ಮಾಡಿದೆ ಎಂಬ ಭಾವನೆ ಬರಬಾರದು. ಸ್ಥಳೀಯ ನಿವಾಸಿಯೊಬ್ಬರು ಬಸವನಗುಡಿಯಿಂದ ಬೆಳ್ಳಂದೂರಿಗೆ ಸ್ಥಳಾಂತರಗೊಂಡ ಬಳಿಕ ತಮ್ಮ ಈ ನಿರ್ಧಾರದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ನನ್ನ ಜೀವನದ ಅತೀ ದೊಡ್ಡ ತಪ್ಪು ಎಂದು ಹೇಳಿರುವ ರೆಡ್ಡಿಟ್ ಪೋಸ್ಟ್ ಸದ್ಯ ವೈರಲ್ ಆಗಿದೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಸಮಾಧಾನ ಮಾಡಿದ್ದಾರೆ.

Video: ನನ್ನ ಜೀವನದ ತಪ್ಪು ನಿರ್ಧಾರ ಇದು; ಬಸವನಗುಡಿಯಿಂದ ಬೆಳ್ಳಂದೂರಿಗೆ ಸ್ಥಳಾಂತರಗೊಂಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ನಿವಾಸಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Mar 22, 2026 | 11:28 AM

ಬೆಂಗಳೂರು, ಮಾರ್ಚ್‌ 22; ಉದ್ಯೋಗದ ನಿಮ್ಮಿತ್ತ ಅಥವಾ ವಯಸ್ಸಾದ ತಂದೆತಾಯಿಯನ್ನು ನೋಡಿಕೊಳ್ಳಬೇಕೆನ್ನುವ ಕಾರಣಕ್ಕೆ ಒಂದು ಊರಿನಿಂದ ಇನ್ನೊಂದು ಊರಿಗೆ ಸ್ಥಳಾಂತರಗೊಳ್ಳುತ್ತಾರೆ. ಕೆಲವೊಮ್ಮೆ ಹೊಸ ಊರು, ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದು. ಆದರೆ ಇದೀಗ ಬೆಂಗಳೂರು (Bengaluru) ಜೀವನವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬ ಸ್ಥಳೀಯ ನಿವಾಸಿಯೊಬ್ಬರ ಹೃದಯಸ್ಪರ್ಶಿ ಪೋಸ್ಟ್
ಭಾರಿ ಚರ್ಚೆಗೆ ನಾಂದಿ ಹಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಸ್ಕ್ರೀನ್‌ಗ್ರಾಬ್ (screengrab) ಹೆಸರಿನ ರೆಡ್ಡಿಟ್ ಪೋಸ್ಟ್‌ನಲ್ಲಿ ಸ್ಥಳೀಯ ನಿವಾಸಿಯೊಬ್ಬರು ಬೆಂಗಳೂರಿನ ಸರಳ ಜೀವನವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕಳೆದ 5 ವರ್ಷಗಳಿಂದ ನಾನು ಬೆಳ್ಳಂದೂರು ಪ್ರದೇಶದಲ್ಲಿ ವಾಸಿಸುತ್ತಿದ್ದೇನೆ, ಬಸವನಗುಡಿ ಬಳಿ ವಾಸಿಸುತ್ತಿದ್ದ ನನಗೆ ಈ ಸ್ಥಳಾಂತರವು ಯೋಗ್ಯವಾಗಿಲ್ಲ ಎಂದೆನಿಸುತ್ತಿದೆ. ಕೇವಲ ಸಕಾರಾತ್ಮಕ ವಿಷಯವೆಂದರೆ ಕಡಿಮೆ ಸಮಯದಲ್ಲಿ ಆಫೀಸ್ ತಲುಪಬಹುದು ಎನ್ನುವುದಷ್ಟೇ. ಆದರೆ ವಾರಾಂತ್ಯ ಬಂದಾಗ ನಾನು ಬೇರೆ ರಾಜ್ಯದಲ್ಲಿ ವಾಸಿಸುತ್ತಿದ್ದೇನೆ ಎಂದು ಭಾಸವಾಗುತ್ತದೆ ಎಂದು ಹೇಳಿದ್ದಾರೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

ಆ ರೀತಿಯ ಸ್ವಾಧೀನ ಭಾವನೆ ಅಸ್ತಿತ್ವದಲ್ಲಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅಪಾರ್ಟ್ಮೆಂಟ್ ಖರೀದಿಸಿರುವುದು ಇದುವರೆಗೆ ನಾನು ಮಾಡಿದ ದೊಡ್ಡ ತಪ್ಪು ಎಂದು ನಾನು ಭಾವಿಸುತ್ತೇನೆ, ಒಂದೇ ಒಂದು ಸ್ಥಳೀಯ ಉತ್ಸವ ಆಚರಣೆಯನ್ನು ನಾನು ನೋಡಿಲ್ಲ, ಇದು ನಾನು ಒಬ್ಬ ಕನ್ನಡಿಗನಾಗಿ, ನನ್ನ ಸಲಹೆಯೆಂದರೆ ಇಂತಹ ಪ್ರದೇಶಗಳಿಗೆ ಹೋಗಬೇಡಿ, ಹಳೆಯ ಬೆಂಗಳೂರಿನ ಪ್ರದೇಶಗಳಲ್ಲಿ ವಾಸಿಸುವುದು ಮತ್ತು ಪ್ರಯಾಣದಲ್ಲಿ ರಾಜಿ ಮಾಡಿಕೊಳ್ಳುವುದು ಉತ್ತಮ. ಆದರೆ ಇಲ್ಲಿನ ಸಾಮಾಜಿಕ ಜೀವನವು ಕೆಟ್ಟದಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ನನಗೆ 3BHK ಮನೆ ಹುಡುಕಿ ಕೊಡಿ, ಅರ್ಧ ತಿಂಗಳ ಬಾಡಿಗೆ ಕೊಡುತ್ತೇನೆ’: ಬೆಂಗಳೂರಿನಲ್ಲಿ ಮನೆ ಹುಡುಕಾಟದಿಂದ ಬೇಸತ್ತ ಯುವಕ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೀವು ವಾಸ್ತವ ಸ್ಥಿತಿಯನ್ನು ಅರಿತುಕೊಂಡು ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯ. ಹೆಚ್ಚಿ ಚಿಂತಿಸಿದರೆ ನೀವು ತಪ್ಪು ಮಾಡಿದ ಭಾವನೆ ಕಾಡುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಬಸವನಗುಡಿಯಿಂದ ಬೆಳ್ಳಂದೂರಿಗೆ ಪ್ರಯಾಣ ಮಾನಸಿಕ ಆರೋಗ್ಯದ ದೃಷ್ಟಿಯಿಂದ ದೊಡ್ಡ ಕುಸಿತವಾಗಿದೆ. ನನಗೆ ಆ ಸಂಘರ್ಷ ಅರ್ಥವಾಗುತ್ತದೆ. ಏಕೆಂದರೆ ಪ್ರಯಾಣದ ಸಮಯ ಮುಖ್ಯವಾಗಿದೆ. ಬಹುಶಃ ನೀವು ನಿಮ್ಮ ವಾರಾಂತ್ಯವನ್ನು ಗಾಂಧಿ ಬಜಾರ್, ಬುಗಲ್ ರಾಕ್ ಇತ್ಯಾದಿಗಳಲ್ಲಿ ಕಳೆಯಬಹುದು. ಈ ರೀತಿ ಮಾಡುವುದರಿಂದ ಕನಿಷ್ಠ ಬದುಕುತ್ತಿರುವಂತೆ ಅನಿಸಬಹುದು, ಸ್ವಲ್ಪ ಚೇತರಿಸಿಕೊಳ್ಳಬಹುದು ಎಂದು ಧೈರ್ಯ ತುಂಬಿದ್ದಾರೆ. ಮತ್ತೊಬ್ಬರು, ಬದುಕೆಂದರೆ ಹಾಗೆಯೇ, ಆಯ್ಕೆಗಳು ಎಡವುದು ಸಹಜ, ಆದರೆ ಒಪ್ಪಿಕೊಂಡು ಬದುಕುವುದು ಜಾಣತನ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us