
ಬೆಂಗಳೂರು, ಜೂನ್ 17: ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡವರು ಹಲವರು. ಬೇರೆ ಬೇರೆ ಊರು, ರಾಜ್ಯಗಳಿಂದ ಬಂದ ಜನರು ಇಲ್ಲಿ ನೆಲೆಸಿದ್ದಾರೆ. ಆದರೆ ಕನ್ನಡ ಭಾಷೆ ಮಾತನಾಡಲು ಮಾತ್ರ ಯಾರು ತಯಾರಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಕನ್ನಡ ಭಾಷಾ (Kannada language) ವಿಚಾರಕ್ಕೆ ಸಂಬಂಧ ಪಟ್ಟಂತೆ ವಿವಾದಗಳು ನಡೆಯುತ್ತಲೇ ಇದೆ. ಆದರೆ ಇದೀಗ ಹಿರಿಯ ನಾಗರಿಕರೊಬ್ಬರು ಇದೇ ವಿಚಾರವಾಗಿ ಧ್ವನಿ ಎತ್ತಿದ್ದಾರೆ. ಹೌದು, ಬೆಂಗಳೂರಿನ ಬೇಗೂರು ಪ್ರದೇಶ (Begur area of Bengaluru) ದಲ್ಲಿನ ಕಲಕುಶಲ ಅಂಗಡಿಯ ಮಾಲಕಿಗೆ ಕನ್ನಡದಲ್ಲಿ ನಾಮಫಲಕ ಅಳವಡಿಸಿಕೊಳ್ಳುವ ಬಗ್ಗೆ ತಾಳ್ಮೆಯಿಂದ ಹೇಳಿದ್ದು, ಮಹಿಳೆಯೂ ಮಾತ್ರ ಹಿರಿಯ ನಾಗರಿಕನ ವಿರುದ್ಧ ದರ್ಪ ತೋರಿದಿದ್ದಾಳೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆಗೆ ಕಾರಣವಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
@AV Speaks ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೆ ಈ ಬಗ್ಗೆ ಪ್ರಶ್ನೆ ಮಾಡುವ ಹಕ್ಕಿದೆ. ಈ ಹಿರಿಯ ನಾಗರಿಕ ಹೇಳಿದ್ದು ಸರಿ, ಈ ಮಹಿಳೆಯೂ ನಿಯಮವನ್ನು ಪಾಲಿಸುತ್ತಿಲ್ಲ. ಅದಲ್ಲದೇ ತಾರತಮ್ಯದ ಬಗ್ಗೆ ಮಾತನಾಡಿದ್ದಾಳೆ. ಮಾನ್ಯರೇ ಬೆಂಗಳೂರಿನಲ್ಲಿ ನಾಮಫಲಕಗಳ ನಿಯಮ ಸೂಕ್ತ ರೀತಿಯಲ್ಲಿ ಪಾಲನೆ ಆಗ್ತಿಲ್ಲ ಕ್ರಮ ಕೈಗೊಳ್ಳಿ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಕರಕುಶಲ ಅಂಗಡಿಯೊಂದರ ಬೋರ್ಡ್‌ನಲ್ಲಿ ಅಂಗಡಿ ಹೆಸರನ್ನು ಚಿಕ್ಕದಾಗಿ ಹಾಕಿ ಇಂಗ್ಲೀಷ್‌ನಲ್ಲಿ ದೊಡ್ಡ ಅಕ್ಷರದಲ್ಲಿ ಬರೆಯಲಾಗಿದೆ. ಇದನ್ನು ನೋಡಿದ ಹಿರಿಯ ನಾಗರಿಕರೊಬ್ಬರು ಈ ಬಗ್ಗೆ ಪ್ರಶ್ನೆ ಮಾಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ :Video : ಕನ್ನಡದಲ್ಲಿ ಪ್ರಶ್ನೆ ಕೇಳಿ : ತೆಲುಗು ಸಂದರ್ಶಕನಿಗೆ ಬುದ್ಧಿ ಹೇಳಿದ ಬೆಂಗಳೂರಿನ ಯುವತಿ
ಈ ವಿಡಿಯೋದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಈಗಾಗಲೇ ಕನ್ನಡದಲ್ಲಿರುವ ಬೋರ್ಡ್‌ನ್ನು ಕನ್ನಡಕ್ಕೆ ಬದಲಾಯಿಸಬೇಕೆಂದು ನನಗೆ ಹಿಂಸೆ ನೀಡುತ್ತಿದ್ದಾರೆ. ಆದರೆ ನನ್ನ ಅಂಗಡಿಯ ಬೋರ್ಡ್‌ನಲ್ಲಿ ಕನ್ನಡ ಇದೆ. ಇದನ್ನು ಹೇಳುವುದಕ್ಕೆ ನೀವು ಯಾರು ಎಂದು ಮಹಿಳೆಯೂ ಪ್ರಶ್ನೆ ಮಾಡುವುದನ್ನು ನೋಡಬಹುದು. ಇದಕ್ಕೆ ಹಿರಿಯನಾಗರಿಕ, ಇದು ಕರ್ನಾಟಕ, ನಾನು ಕನ್ನಡದವನು, ಈ ನೆಲದವನು. ಸರ್ಕಾರದ ಆದೇಶದ ಪ್ರಕಾರ ಕರ್ನಾಟಕ ನಾಮಫಲಕದಲ್ಲಿ ಶೇ 60 ರಷ್ಟು ಕನ್ನಡ ಇರಲೇಬೇಕು ಎಂದು ತಾಳ್ಮೆಯಿಂದ ತಿಳಿ ಹೇಳಿದ್ದಾರೆ. ಆದರೆ ಮಹಿಳೆ ಮಾತ್ರ ದರ್ಪದಿಂದ ಇದು ಭಾರತ ಇಲ್ಲಿ ಏನು ಮಾಡಬೇಕೆಂದು ನೀವು ನನಗೆ ಹೇಳಿಕೊಡಬೇಕಿಲ್ಲ ಎಂದು ಹೇಳಿರುವುದನ್ನು ಗಮನಿಸಬಹುದು.
Every citizen has the right to question & Uncle is right.
She is not following the rules laid by @BBMPofficial & talks about discrimination!@BBMPCOMM @KDA_Bengaluru ಮಾನ್ಯರೇ ಬೆಂಗಳೂರಿನಲ್ಲಿ ನಾಮಫಲಕಗಳ ನಿಯಮ ಸೂಕ್ತ ರೀತಿಯಲ್ಲಿ ಪಾಲನೆ ಆಗ್ತಿಲ್ಲ. ಕ್ರಮ ತೆಗೆದುಕೊಳ್ಳಿ🙏https://t.co/lIOxgbJ0Xt pic.twitter.com/PUjefa3Lyh— A_Virupaksha (@A_V_Speaks) June 16, 2025
ಬಳಕೆದಾರರ ಕಾಮೆಂಟ್‌ಗಳು ಹೀಗಿವೆ
ಜೂನ್ 16 ರಂದು ಶೇರ್ ಮಾಡಲಾದ ಈ ವಿಡಿಯೋವೊಂದು ನಲವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಖಾರವಾಗಿಯೇ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ದೇಶದ ನಿಯಮಗಳನ್ನು ಪಾಲಿಸಿ,ಯಾರು ನಿಮ್ಮನ್ನು ಪ್ರಶ್ನಿಸುವುದಿಲ್ಲ, ಅದು ಅಷ್ಟು ಸರಳ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ನಮ್ಮ ಪ್ರೀತಿಯ ಕರ್ನಾಟಕವನ್ನು ರಕ್ಷಿಸಲು ಪ್ರತಿಜ್ಞೆ ಮಾಡೋಣ, ನಾವು ಕರ್ನಾಟಕದ ಶಕ್ತಿ. ನಮ್ಮ ವೈವಿಧ್ಯತೆ ಹಾಗೂ ಏಕತೆಯನ್ನು ಪಾಲಿಸೋಣ ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬರು, ಬೆಂಗಳೂರು ತನ್ನ ವಿನಾಶವನ್ನು ತಾನೇ ಬರೆಸಿಕೊಳ್ಳುತ್ತಿದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:13 pm, Tue, 17 June 25