
ಮಕ್ಕಳು ಎಂದ ಮೇಲೆ ತರ್ಲೆ ತುಂಟಾಟ ಸಹಜ. ಈ ಮಕ್ಕಳಿಗೆ ಎಲ್ಲಾ ವಿಷಯದಲ್ಲೂ ಕುತೂಹಲ ತುಸು ಹೆಚ್ಚು. ಹೀಗೆ ಇವರುಗಳು ಬೇರೆ ಬೇರೆ ಕುತೂಹಲಕಾರಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಈ ರೀತಿ ಚಟುವಟಿಕೆಗಳು ಕೆಲವೊಮ್ಮೆ ಮಕ್ಕಳ ಪ್ರಾಣಕ್ಕೆಯೇ ಅಪಾಯ ತಂದೊಡ್ಡುತ್ತವೆ. ಇಂತಹ ಸಾಕಷ್ಟು ಉದಾಹರಣೆಗಳನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಬಾಲಕನೊಬ್ಬ ಮಾಲ್ ಒಂದರಲ್ಲಿ ಎಸ್ಕಲೇಟರ್ ನಲ್ಲಿ ಕೆಳಗಿಂದ ಮೇಲೆ ಹೋಗುತ್ತಿರುವ ವೇಳೆ, ಕುತೂಹಲದಿಂದ ಏನನ್ನೋ ಇಣುಕಲು ಹೋಗಿ ಪಜೀತಿಗೆ ಸಿಳುಕಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಈ ವೈರಲ್ ವಿಡಿಯೋವನ್ನು @FAFO_TV ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಬಾಲಕರಿಬ್ಬರು ಮಾಲ್ ಒಂದರಲ್ಲಿ ಎಕ್ಸಿಲೇಟರ್ ನಲ್ಲಿ ಕೆಳಗಿಂದ ಮೇಲೆ ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಅದರಲ್ಲಿ ತುಂಟ ಹುಡುಗನೊಬ್ಬ ಮೇಲಿಂದ ಕೆಳಗೆ ಇಣುಕಿ ಏನೋ ತರ್ಲೆ ಕೆಲಸ ಮಾಡಲು ಹೋಗುತ್ತಾನೆ. ಹೀಗೆ ಎಸ್ಕಲೇಟರ್ ಮೇಲೆ ಚಲಿಸುತ್ತಾ ಹೋದಂತೆ ಆ ಬಾಲಕನ ತಲೆ ಗೋಡೆ ಮತ್ತು ಎಸ್ಕಲೇಟರ್ ಮಧ್ಯೆ ಸಿಕ್ಕಿ ಹಾಕಿಕೊಳ್ಳುತ್ತದೆ. ಆ ತಕ್ಷಣ ಧವಿಸಿದ ರಕ್ಷಣಾ ಸಿಬ್ಬಂದಿಗಳು ಬಾಲಕನನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.
ಇದನ್ನೂ ಓದಿ: ಪಾರ್ಸೆಲ್ ನೀಡಲು ಬಂದು ಮನೆಯ ಹೊರಗಿದ್ದ ಬೆಲೆ ಬಾಳುವ ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 15.5 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಭಯಾನಕ ದೃಶ್ಯವನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದು, ಬಾಲಕನ್ನು ರಕ್ಷಿಸಿದ ರಕ್ಷಣಾ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ