Viral: ಈ ವರ್ಷ ಸ್ವಿಗ್ಗಿ ಮತ್ತು ಝೊಮ್ಯಾಟೋದಲ್ಲಿ ಗ್ರಾಹಕರು ಅತಿ ಹೆಚ್ಚು ಆರ್ಡರ್‌ ಮಾಡಿದ ಫುಡ್‌ ಯಾವುದು ಗೊತ್ತಾ?

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 30, 2024 | 12:58 PM

ಆಹಾರ ವಿತರಣಾ ದೈತ್ಯ ಸ್ವಿಗ್ಗಿ ಮತ್ತು ಝೊಮ್ಯಾಟೊ ಪ್ರತಿ ವರ್ಷ ಕೂಡಾ ವರ್ಷಾಂತ್ಯದಲ್ಲಿ ತಮ್ಮಲ್ಲಿ ಗ್ರಾಹಕರು ಜಾಸ್ತಿ ಆರ್ಡರ್‌ ಮಾಡಿದಂತಹ ಆಹಾಗಳು ಯಾವುವು? ಎಷ್ಟು ಫುಡ್‌ ಸೇಲ್‌ ಆಗಿವೆ ಈ ಎಲ್ಲದರ ಡೇಟಾವನ್ನು ಹಂಚಿಕೊಳ್ಳುತ್ತವೆ. ಇದೀಗ 2024 ರಲ್ಲಿ ಅತೀ ಹೆಚ್ಚು ಆರ್ಡರ್‌ ಆದ ಫುಡ್‌ ಯಾವುದು ಎಂಬ ಬಗ್ಗೆ ವರದಿಯನ್ನು ಹಂಚಿಕೊಂಡಿದ್ದು, ಸ್ವಿಗ್ಗಿ-ಝೊಮ್ಯಾಟೊದಲ್ಲಿ ಯಾವ ಫುಡ್‌ ಅನ್ನು ಗ್ರಾಹಕರು ಅತೀ ಹೆಚ್ಚು ಆರ್ಡರ್‌ ಮಾಡಿದ್ದಾರೆ ಎಂಬುದನ್ನು ನೋಡೋಣ.

Viral: ಈ ವರ್ಷ ಸ್ವಿಗ್ಗಿ ಮತ್ತು ಝೊಮ್ಯಾಟೋದಲ್ಲಿ ಗ್ರಾಹಕರು ಅತಿ ಹೆಚ್ಚು ಆರ್ಡರ್‌ ಮಾಡಿದ ಫುಡ್‌ ಯಾವುದು ಗೊತ್ತಾ?
ಸ್ವಿಗ್ಗಿ ಮತ್ತು ಝೊಮ್ಯಾಟೋ
Follow us on

ಈಗಂತೂ ಹೆಚ್ಚಿನವರು ರೆಸ್ಟೋರೆಂಟ್‌ಗೆ ಹೋಗುವ ಬದಲು ಆನ್‌ಲೈನ್‌ನಲ್ಲಿಯೇ ಹೆಚ್ಚಾಗಿ ಫುಡ್‌ ಆರ್ಡರ್‌ ಮಾಡ್ತಾರೆ. ಆನ್‌ಲೈನ್‌ನಲ್ಲಿ ಫುಡ್‌ ಆರ್ಡರ್‌ ಮಾಡುವ ವಿಚಾರಕ್ಕೆ ಬಂದಾಗ ಹೆಚ್ಚಿನವರು ಸ್ವಿಗ್ಗಿ ಮತ್ತು ಝೊಮ್ಯಾಟೊ ಈ ಎರಡು ಪ್ರಮುಖ ಅಪ್ಲಿಕೇಷನ್‌ಗಳಲ್ಲಿಯೇ ಹೆಚ್ಚು ಆರ್ಡರ್‌ ಮಾಡುತ್ತಿರುತ್ತಾರೆ. ಈ ಎರಡೂ ಕಂಪೆನಿಗಳು ಪ್ರತಿ ವರ್ಷ ಕೂಡಾ ವರ್ಷಾಂತ್ಯದಲ್ಲಿ ತಮ್ಮಲ್ಲಿ ಗ್ರಾಹಕರು ಜಾಸ್ತಿ ಆರ್ಡರ್‌ ಮಾಡಿದಂತಹ ಆಹಾಗಳು ಯಾವುವು? ಎಷ್ಟು ಫುಡ್‌ ಸೇಲ್‌ ಆಗಿವೆ ಈ ಎಲ್ಲದರ ಡೇಟಾವನ್ನು ಹಂಚಿಕೊಳ್ಳುತ್ತವೆ. ಇದೀಗ 2024 ರಲ್ಲಿ ಅತೀ ಹೆಚ್ಚು ಆರ್ಡರ್‌ ಆದ ಫುಡ್‌ ಯಾವುದು ಎಂಬ ಬಗ್ಗೆ ವರದಿಯನ್ನು ಹಂಚಿಕೊಂಡಿದ್ದು, ಸ್ವಿಗ್ಗಿ-ಝೊಮ್ಯಾಟೊದಲ್ಲಿ ಯಾವ ಫುಡ್‌ ಅನ್ನು ಗ್ರಾಹಕರು ಅತೀ ಹೆಚ್ಚು ಆರ್ಡರ್‌ ಮಾಡಿದ್ದಾರೆ ಎಂಬುದನ್ನು ನೋಡೋಣ.

ಬಿರಿಯಾನಿಯದ್ದೇ ಮೇಲುಗೈ, ಆದರೆ ಪ್ರಾಬಲ್ಯ ಕುಸಿತ:

ಝೊಮ್ಯಾಟೊ ತನ್ನ 2024 ರ ವರದಿಯನ್ನು ಅನಾವರಣಗೊಳಿಸದ್ದು, ನಮ್ಮಲ್ಲಿ ಬಿರಿಯಾನಿಯನ್ನು ಹೆಚ್ಚು ಆರ್ಡರ್‌ ಮಾಡಲಾಗಿತ್ತು ಎಂದು ಹೇಳಿದೆ. 2024ರಲ್ಲಿ ಒಂಬತ್ತು ಕೋಟಿಗೂ ಹೆಚ್ಚು ಬಿರಿಯಾನಿಯನ್ನು ಝೊಮಾಟೊದಲ್ಲಿ ಆರ್ಡರ್‌ ಮಾಡಲಾಗಿದೆ. ಆದರೆ 2023ಕ್ಕೆ ಹೋಲಿಸಿದರೆ ಇದು ಸುಮಾರು ಒಂದು ಕೋಟಿ ಆರ್ಡರ್‌ಗಳ ಕುಸಿತ ಕಂಡಿದೆ. ಹೌದು 2023 ರಲ್ಲಿ, ಝೊಮಾಟೊದಲ್ಲಿ ಸುಮಾರು 10,09,80,615 ಬಿರಿಯಾನಿ ಆರ್ಡರ್‌ ಮಾಡಲಾಗಿತ್ತು. ಆದರೆ ಈ ಸಂಖ್ಯೆ 2024 ರಲ್ಲಿ 9,13,99,110 ಕ್ಕೆ ಇಳಿದಿದೆ. ಅಂದಾಜಿನ ಪ್ರಕಾರ ಹಿಂದಿನ ವರ್ಷಕ್ಕಿಂತ ಈ ವರ್ಷ ಸುಮಾರು 95 ಲಕ್ಷ ಆರ್ಡರ್‌ಗಳ ಇಳಿಕೆಯಾಗಿದೆ

ಝೊಮ್ಯಾಟೊ ಪ್ರತಿ ಸೆಕೆಂಡಿಗೆ ಮೂರು ಬಿರಿಯಾನಿ ಆರ್ಡರ್‌ಗಳನ್ನು ಪಡೆದರೆ, ಸ್ವಿಗ್ಗಿ ಪ್ರತಿ ಸೆಕೆಂಡಿಗೆ ಎರಡು ಬಿರಿಯಾನಿ ಆರ್ಡರ್‌ಗಳನ್ನು ಪಡೆದಿದೆ. ಇನ್ನೂ ಪಿಜ್ಜಾದ ವಿಷಯಕ್ಕೆ ಬಂದ್ರೆ ಝೊಮ್ಯಾಟೊದಲ್ಲಿ ಪಿಜ್ಜಾ ಆರ್ಡರ್‌ಗಳ ಸಂಖ್ಯೆಯು 2023 ರಲ್ಲಿ 7,45,30,036 ರಷ್ಟಿತ್ತು. ಆದರೆ ಈ ವರ್ಷ 5,84,46,908 ಕ್ಕೆ ಇಳಿದಿದೆ. ಇದು ಶೇಕಡಾ 20% ರಷ್ಟು ಇಳಿಕೆ ಕಂಡಿದೆ.

ಇದನ್ನೂ ಓದಿ: ಬೆಂಗಳೂರಿನ CTR ಹೋಟೆಲ್‌ ಮುಂದೆ ಕ್ಯೂ ನಿಲ್ಲುವುದನ್ನು ತಪ್ಪಿಸಲು ಝೊಮ್ಯಾಟೊದಲ್ಲಿ ಬೆಣ್ಣೆ ದೋಸೆ ಆರ್ಡರ್‌ ಮಾಡಿದ ಮಹಿಳೆ

ಇನ್ನೂ 2024 ರಲ್ಲಿ 2.3 ಕೋಟಿ ಆರ್ಡರ್‌ಗಳೊಂದಿಗೆ ದೋಸೆ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯವಾಗಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಸ್ವಿಗ್ಗಿ ಡೇಟಾ ಬಹಿರಂಗಪಡಿಸಿದೆ. ಸ್ವಿಗ್ಗಿಯ 2024 ರ ವರದಿಯ ಪ್ರಕಾರ 2.3 ಕೋಟಿ ದೋಸೆಗಳನ್ನು ಆರ್ಡರ್‌ ಮಾಡಲಾಗಿದೆ. ಝೊಮ್ಯಾಟೊದಲ್ಲಿ ಎರಡನೇ ಸ್ಥಾನವನ್ನು ಪಿಜ್ಜಾ ಪಡೆದುಕೊಂಡಿದೆ. , ಝೊಮ್ಯಾಟೊ ದೇಶಾದ್ಯಂತ 5,84,46,908 ಪಿಜ್ಜಾ ಆರ್ಡರ್‌ಗಳನ್ನು ವಿತರಿಸಿದೆ. ಜೊತೆಗೆ 2024 ರಲ್ಲಿ 77,76755 ಕಪ್‌ ಚಹಾ ಮತ್ತು 74,32,856 ಕಪ್‌ ಕಾಫಿಯನ್ನು ನಮ್ಮಲ್ಲಿ ಗ್ರಾಹಕರು ಆರ್ಡರ್‌ ಮಾಡಿದ್ದಾರೆ ಎಂದು ಝೊಮ್ಯಾಟೊ ವರದಿಯಲ್ಲಿ ತಿಳಿಸಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ