ಬೇರೊಬ್ಬಳೊಂದಿಗೆ ಮದುವೆಯಾಗುತ್ತಿದ್ದ ಪ್ರಿಯಕರನಿಗೆ ಮಂಟಪದಲ್ಲೇ ಮನಬಂದಂತೆ ಥಳಿಸಿದ ಯುವತಿ
ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ಈಗ ಬೇರೊಬ್ಬಳೊಂದಿಗೆ ಮದುವೆಯಾಗುತ್ತಿದ್ದ ಪ್ರಿಯಕರನಿಗೆ ಯುವತಿಯೊಬ್ಬಳು ಮಂಟಪದಲ್ಲೇ ಸಾವಿರಾರೂ ಜನರ ಮುಂದೆ ಮನಬಂದಂತೆ ಥಳಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆ ಕಂಡು ಅಲ್ಲಿದ್ದ ಸಂಬಂಧಿಕರು ಹಾಗೂ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ.
ಮದುವೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿರುತ್ತವೆ. ಇದೀಗ ಅಂತದ್ದೇ ವಿಡಿಯೋ ವೈರಲ್ ಆಗಿದ್ದು, ಬೇರೊಬ್ಬಳೊಂದಿಗೆ ಮದುವೆಯಾಗುತ್ತಿದ್ದ ತನ್ನ ಪ್ರಿಯಕರನಿಗೆ ಯುವತಿಯೊಬ್ಬಳು ಮಂಟಪದಲ್ಲೇ ಮನಬಂದಂತೆ ಥಳಿಸಿದ್ದಾಳೆ. ವರನಿಗೆ ಯುವತಿ ಮದುವೆ ಮಂಟಪದಲ್ಲೇ ಧರ್ಮದೇಟು ನೀಡುತ್ತಿರುವುದನ್ನು ಕಂಡು ಕುಟುಂಬಸ್ಥರು ಶಾಕ್ ಆಗಿ ಹೋಗಿದ್ದಾರೆ.
ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ವಧು-ವರರು ಕುಟುಂಬಸ್ಥರ ಜೊತೆ ವೇದಿಕೆಯ ಮೇಲೆ ನಿಂತಿರುವುದನ್ನು ಕಾಣಬಹುದು. ವರ ವಧುವಿನ ಕೊರಳಿಗೆ ಹಾರ ಹಾಕುತ್ತಿದ್ದಂತೆ ಅನಿರೀಕ್ಷಿತವಾಗಿ ಯುವತಿಯೊಬ್ಬಳು ವೇದಿಕೆಯ ಮೇಲೆ ಬಂದಿದ್ದಾಳೆ. ಬಂದ ಯುವತಿ ಏಕಾಏಕಿ ಮಧುಮಗನಿಗೆ ಒದಿಯಲು ಪ್ರಾರಂಭಿಸಿದ್ದಾಳೆ. ಮದುಮಗ ಸ್ವಲ್ಪ ದೂರ ಹೋಗಿ ಬಿದ್ದಿದ್ದು, ಯುವತಿ ತಕ್ಷಣವೇ ವರನನ್ನುಎಬ್ಬಿಸಿ ಮತ್ತೆ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾಳೆ.
View this post on Instagram
ಈ ಘಟನೆ ಕಂಡು ಅಲ್ಲಿದ್ದ ಸಂಬಂಧಿಕರು ಹಾಗೂ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ತನ್ನ ಕಣ್ಣೆದುರೇ ತನ್ನ ಭಾವಿ ಪತಿ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಂಡು ಆಘಾತಕ್ಕೊಳಗಾದ ವಧು ಮಹಿಳೆಯೊಂದಿಗೆ ವಾಗ್ವಾದಕ್ಕಿಳಿದಿದ್ದಾಳೆ. ಇದಕ್ಕೆ ಪ್ರತಿಯಾಗಿ ಯುವತಿಯೂ ವಧುವಿನೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದಾಳೆ. sonukumargiri396 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಈಗಾಗಲೇ 20ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Sun, 29 December 24