Brain Teaser: ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್; ಈ ಹರಿದ ಅಂಗಿಯಲ್ಲಿ ಎಷ್ಟು ರಂಧ್ರಗಳಿವೆ ಎಂದು ಹೇಳಬಲ್ಲಿರಾ?

ಒಗಟಿನ ಪ್ರಶ್ನೆಗಳೇ ಹಾಗೆ, ನೋಡಲು ಸುಲಭವಾಗಿ ಕಂಡರೂ ಉತ್ತರ ಹುಡುಕುವುದು ಸುಲಭ ವಲ್ಲ. ಇದೀಗ ಇಂತಹ ಒಗಟಿನ ಪ್ರಶ್ನೆಯೊಂದು ವೈರಲ್ ಆಗಿದ್ದು ಈ ಹರಿದ ಅಂಗಿಯಲ್ಲಿರುವ ರಂಧ್ರಗಳೆಷ್ಟು ಎಂದು ಹೇಳುವುದೇ ಇಲ್ಲಿರುವ ಸವಾಲು. ಈ ಒಗಟು ಬಿಡಿಸಲು ನೀವು ರೆಡಿನಾ. ಹಾಗಾದ್ರೆ ಈ ಟ್ರಿಕ್ಕಿಯಾಗಿರುವ ಒಗಟಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ.

Brain Teaser: ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್; ಈ ಹರಿದ ಅಂಗಿಯಲ್ಲಿ ಎಷ್ಟು ರಂಧ್ರಗಳಿವೆ ಎಂದು ಹೇಳಬಲ್ಲಿರಾ?
ಬ್ರೈನ್ ಟೀಸರ್
Image Credit source: Facebook

Updated on: Jun 30, 2026 | 12:37 PM

ಆಪ್ಟಿಕಲ್‌ ಇಲ್ಯೂಷನ್‌ (optical illusion), ಬ್ರೈನ್ ಟೀಸರ್ ನಂತಹ ಒಗಟಿನ ಆಟಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈ ಒಗಟಿನ ಪ್ರಶ್ನೆ ಬಿಡಿಸುವುದು ಖುಷಿಕೊಟ್ಟರೂ ಕೆಲವೊಮ್ಮೆ ಉತ್ತರ ಸಿಗಲ್ಲ. ಆದರೆ, ಕೆಲವರು ನೀರು ಕುಡಿದಂತೆ ಸಲೀಸಾಗಿ ಒಗಟು ಬಿಡಿಸುvlfli  ಇದೀಗ ಈ ಬ್ರೈನ್ ಟೀಸರ್ ನಲ್ಲಿ ಚಿತ್ರವಿದ್ದು, ಈ ಹರಿದ ಅಂಗಿಯಲ್ಲಿರುವ ರಂಧ್ರಗಳನ್ನು ಹುಡುಕುವುದೇ ನಿಮ್ಮ ಮುಂದಿರುವ ಸವಾಲು. ನೀವು ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಿ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಸೀನ್ ಹೇಡಾನ್ (Sean Heydon) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಬ್ರೈನ್ ಟೀಸರ್ ಒಗಟನ್ನು ಹಂಚಿಕೊಳ್ಳಲಾಗಿದೆ. ಹರಿದ ಅಂಗಿಯಲ್ಲಿ ಮೊದಲ ನೋಟಕ್ಕೆ ನಿಮಗೆ ಎರಡು ರಂಧ್ರಗಳು ಮಾತ್ರ ಕಾಣಿಸುತ್ತದೆ. ಆದರೆ ಈ ಟೀ ಶರ್ಟ್‌ನಲ್ಲಿ ಎರಡಕ್ಕಿಂತ ಹೆಚ್ಚು ರಂಧ್ರಗಳಿವೆ. ಆದರೆ ಶೇಕಡಾ 99 ರಷ್ಟು ಜನರು ಈ ರಂಧ್ರಗಳನ್ನು ಪತ್ತೆ ಹಚ್ಚುವಲ್ಲಿ ಸೋಲುತ್ತಾರೆ. ನೀವು ಈ ಒಗಟು ಬಿಡಿಸಿ ಸರಿಯಾದ ಉತ್ತರ ನೋಡಲು ಸಾಧ್ಯವೇ ಎಂದು ಪ್ರಯತ್ನಿಸಿ ನೋಡಿ.

 ವೈರಲ್‌ ಪೋಸ್ಟ್‌ ಇಲ್ಲಿದೆ

ಇದನ್ನೂ ಓದಿ: ಕೋಳಿ ಮರಿಗಳ ನಡುವೆ ಇದೆ ಐದು ನಿಂಬೆ ಹಣ್ಣು; ಜಸ್ಟ್ 10 ಸೆಕೆಂಡುಗಳಲ್ಲಿ ಹುಡುಕಿ

ಸರಿಯಾದ ಉತ್ತರ ಹೇಳಲು ಸಾಧ್ಯವಾಯಿತೇ?

ತಲೆಗೆ ಹುಳ ಬಿಡುವ ಒಗಟಿನ ಚಿತ್ರಗಳನ್ನು ಬಿಡಿಸುವುದು ಹೇಳಿದ್ದಷ್ಟು ಸುಲಭವಲ್ಲ. ಈ ಹರಿದ ಟೀ ಶರ್ಟ್ ನಲ್ಲಿ ಎಷ್ಟು ರಂಧ್ರಗಳಿವೆ ಎಂದು ಹುಡುಕುವಲ್ಲಿ ನೀವು ಸೋತಿದ್ದೀರಾ. ಈ ಟೀ ಶರ್ಟ್ ನ ಮಧ್ಯದಲ್ಲಿರುವ ಎರಡು ರಂಧ್ರಗಳು ನಮ್ಮ ಕಣ್ಣಿಗೆ ಕಾಣಿಸುತ್ತದೆ. ಮುಂಭಾಗದಲ್ಲಿ ಕಾಣುವ ಎರಡು ರಂಧ್ರಗಳ ಜತೆಗೆ ಅದರ ಹಿಂದಿನ ಬಟ್ಟೆಯಲ್ಲಿ ಇನ್ನೂ ಎರಡು ರಂಧ್ರಗಳಿವೆ. ಇನ್ನು ಕುತ್ತಿಗೆ ಭಾಗಕ್ಕೆ ಒಂದು, ದೇಹವನ್ನು ಹಾಕುವ ಶರ್ಟ್ ಕೆಳಭಾಗದಲ್ಲಿ ಒಂದು ಹಾಗೂ ಎರಡು ತೋಳುಗಳ ತುದಿಯಲ್ಲಿ ಎರಡು ರಂಧ್ರಗಳಿವೆ. ನಿಮ್ಮ ಕಣ್ಣಿಗೆ ಕಾಣುವ ಎರಡು ರಂಧ್ರಗಳನ್ನು ಸೇರಿಸಿ ಒಟ್ಟು ಎಂಟು ರಂಧ್ರಗಳಿವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us