Video: ಭಯ ಅನ್ನೋ ಮಾತೇ ಇಲ್ಲ; ಹಾವನ್ನು ಬರಿಗೈಲಿ ಹಿಡಿದ ಧೈರ್ಯವಂತ ಬಾಲಕ

ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಹುತೇಕ ಎಲ್ಲರೂ ಹಾವುಗಳನ್ನು ಕಂಡ್ರೆ ಭಯ ಪಡ್ತಾರೆ. ಅದರಲ್ಲೂ ಪುಟ್ಟ ಮಕ್ಕಳು ತುಸು ಹೆಚ್ಚೇ ಹೆದರುತ್ತಾರೆ. ಆದ್ರೆ ಇಲ್ಲೊಬ್ಬ ಬಾಲಕ ಮಾತ್ರ ನನ್ಗೆ ಭಯ ಅನ್ನೋದು ಇಲ್ವೇ ಇಲ್ಲ ಎನ್ನುತ್ತಾ ಬರಿಗೈಲಿ ಧೈರ್ಯವಾಗಿ ಹಾವು ಹಿಡಿದಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಬಾಲಕನ ಧೈರ್ಯವನ್ನು ಕಂಡು ನೋಡುಗರು ಬೆರಗಾಗಿದ್ದಾರೆ.

Video: ಭಯ ಅನ್ನೋ ಮಾತೇ ಇಲ್ಲ; ಹಾವನ್ನು ಬರಿಗೈಲಿ  ಹಿಡಿದ ಧೈರ್ಯವಂತ ಬಾಲಕ
ಬರಿಗೈಲಿ ಹಾವು ಹಿಡಿದ ಬಾಲಕ
Image Credit source: Social Media

Updated on: Aug 22, 2025 | 11:49 AM

ಹಾವುಗಳು (Snake) ತುಂಬಾನೇ ಡೇಂಜರ್‌, ಅವುಗಳು ಕಚ್ಚಿದ್ರೆ ಪ್ರಾಣಕ್ಕೆ ಅಪಾಯ ಅನ್ನೋ ಕಾರಣಕ್ಕೆ ಹೆಚ್ಚಿನವರು ಹಾವುಗಳನ್ನು ಕಂಡ್ರೆ ಭಯದಲ್ಲಿ ಓಡಿ ಹೋಗ್ತಾರೆ. ಇನ್ನೂ ಕನಸಿನಲ್ಲಿ ಸರ್ಪ ಕಂಡರೂ ಬೆಚ್ಚಿ ಬೀಳುವವರು ಇದ್ದಾರೆ. ಹೀಗೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಹುತೇಕ ಹೆಚ್ಚಿನ ಜನ ಹಾವುಗಳಿಗೆ ಭಯ ಪಡುತ್ತಾರೆ. ಅಂತದ್ರಲ್ಲಿ ಇಲ್ಲೊಬ್ಬ ಪುಟ್ಟ ಬಾಲಕ ನನ್ಗೆ ಭಯ ಅನ್ನೋ ಮಾತೇ ಇಲ್ಲ ಎನ್ನುತ್ತಾ ಬರಿಗೈಲಿ ಹಾವನ್ನು (boy catches snake with bare hands) ಹಿಡಿದು ಧೈರ್ಯ ಮೆರೆದಿದ್ದಾನೆ. ಈ ಪುಟ್ಟ ಬಾಲಕ ಹಾವು ಸಲೀಸಾಗಿ ಹಾವು ಹಿಡಿಯುವಂತಹ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಈತನ ಧೈರ್ಯವನ್ನು ಕಂಡು ನೋಡುಗರು ಬೆರಗಾಗಿದ್ದಾರೆ.

ಬರಿಗೈಲಿ ಹಾವು ಹಿಡಿದ ಬಾಲಕ:

ಹಾವುಗಳನ್ನು ಹಿಡಿಯಲು ಧೈರ್ಯವಂತರೇ ಒಂದು ಬಾರಿ ಹಿಂದೇಟು ಹಾಕುವುದುಂಟು. ಆದ್ರೆ ಇಲ್ಲೊಬ್ಬ ಪುಟ್ಟ ಬಾಲಕ ಯಾವುದೇ ಭಯ, ಹಿಂಜರಿಕೆಯಿಲ್ಲದೆ ಸಲೀಸಾಗಿ ಹಾವನ್ನು ಹಿಡಿದಿದ್ದಾನೆ.

ಇದನ್ನೂ ಓದಿ
ಮನೆ ಹತ್ರ ಹಾವು ಬಂದ್ರೆ ಓಡಿಸೋಕೆ ನಾನೊಬ್ಬನೇ ಸಾಕು; ಈ ಬೆಕ್ಕಿನ ಧೈರ್ಯ ನೋಡಿ
ಭಯದಲ್ಲಿ ಹಾವನ್ನೇ ಸಾಯಿಸಿ ಆಸ್ಪತ್ರೆಗೆ ಓಡೋಡಿ ಹೋದ ಯುವಕ
ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿ, ಏನಾಯ್ತು ನೋಡಿ
ಹೂವು ಹಿಡಿದಷ್ಟು ಸಲೀಸಾಗಿ ನಾಗರಹಾವು ಹಿಡಿದ ವ್ಯಕ್ತಿ

ಈ ಕುರಿತ ವಿಡಿಯೋವನ್ನು ಮಂಜು cop_manjumeena ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಪುಟ್ಟ ಬಾಲಕ ಹಾವು ಹಿಡಿಯುತ್ತಿರುವ ದೃಶ್ಯವನ್ನು ಕಾಣಬಹುದು. ಆತ ಯಾವುದೇ ಭಯ, ಹಿಂಜರಿಕೆಯಿಲ್ಲದೆ ಬರಿಗೈಲಿ ಸಲೀಸಾಗಿ ಹಾವನ್ನು ಹಿಡಿದಿದ್ದಾನೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಮನೆ ಹತ್ರ ಹಾವು ಬಂದ್ರೆ ಓಡಿಸೋಕೆ ನಾನೊಬ್ಬನೇ ಸಾಕು; ಈ ಬೆಕ್ಕಿನ ಧೈರ್ಯ ನೋಡಿ

ಆಗಸ್ಟ್‌  20 ರಂದು ಶೇರ್‌ ಮಾಡಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆತ ಮುಗ್ಧ, ಚಿಕ್ಕ ಬಾಲಕ ಎಂಬುದನ್ನು ನಾನು ಒಪ್ಪುತ್ತೇನೆ, ಆದ್ರೆ ಅಲ್ಲಿ ಒಂದು ಸಣ್ಣ ತಪ್ಪಾದರೂ ಆತನ ಪ್ರಾಣಕ್ಕೆ ಅದು ಕುತ್ತುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಹಾವು ವಿಷಕಾರಿಯಲ್ಲʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼದೊಡ್ಡವರು ಮಾಡಲು ಅಸಾಧ್ಯವಾದ ಕೆಲಸವನ್ನು ಈ ಪುಟಾಣಿ ಮಾಡಿದ್ದಾನೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ