ಹಳೆಯ ಗ್ಯಾಸ್ ಸ್ಟವ್​​ವನ್ನೇ ಶವರ್ ಆಗಿ ಪರಿವರ್ತಿಸಿದ ವ್ಯಕ್ತಿ, ಈತ ಮಾಡಿದ ಜುಗಾಡ್ ಪ್ಲಾನ್ ನೋಡಿ

ನಮ್ಮಲ್ಲಿ ಪ್ರತಿಭೆಗಳಿಗೆ ಹಾಗೂ ಜುಗಾಡ್ ಐಡಿಯಾಗಳಿಗೇನೂ ಕೊರತೆ ಇಲ್ಲ. ಆದರಲ್ಲಿ ಭಾರತೀಯರು ಈ ವಿಚಾರದಲ್ಲಿ ಎತ್ತಿದ ಕೈ. ಹೌದು, ಮನೆಯಲ್ಲಿ ಕೆಟ್ಟು ಹೋದ ವಸ್ತುಗಳಿದ್ದರೆ ಅದರಲ್ಲೇ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಇದಕ್ಕೆ ಸಂಬಂಧ ಪಟ್ಟ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕಾಣಸಿಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗ್ಯಾಸ್ ಸ್ಟವ್ ಅನ್ನು ಶವರ್ ಆಗಿ ಪರಿವರ್ತಿಸಿ, ಅದರಲ್ಲಿಯೇ ಸ್ನಾನ ಮಾಡಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗಿದ್ದು ಈತನ ಬುದ್ಧಿವಂತಿಕೆಯನ್ನು ನೆಟ್ಟಿಗರು ಮೆಚ್ಚಿದ್ದಾರೆ.

ಹಳೆಯ ಗ್ಯಾಸ್ ಸ್ಟವ್​​ವನ್ನೇ ಶವರ್ ಆಗಿ ಪರಿವರ್ತಿಸಿದ ವ್ಯಕ್ತಿ, ಈತ ಮಾಡಿದ ಜುಗಾಡ್ ಪ್ಲಾನ್ ನೋಡಿ
ವೈರಲ್​​ ವಿಡಿಯೋ
Edited By:

Updated on: Apr 18, 2025 | 11:39 AM

ಈಗೇನಿದ್ದರೂ ಕಟ್ಟಿಗೆ (wood stove) ಒಲೆಯಲ್ಲಿ ಅಡುಗೆ (cooking) ಮಾಡುವುದು ಕಡಿಮೆಯೇ. ಹೀಗಾಗಿ ಎಲ್ಲರ ಮನೆಯಲ್ಲಿಯೂ ಗ್ಯಾಸ್ ಸ್ಟವ್ (gas stove) ಇದ್ದೆ ಇರುತ್ತದೆ. ಆದರೆ ಈ ಗ್ಯಾಸ್ ಸ್ಟವ್ ಕೆಟ್ಟು ಹೋದರೆ ರಿಪೇರಿ (repair) ಮಾಡಿಸಿ ಮರು ಬಳಕೆ ಮಾಡುತ್ತೇವೆ. ಮತ್ತೆ ಅದೇ ಸಮಸ್ಯೆಯಾದರೆ ಅದನ್ನು ಗುಜುರಿಗೆ ಹಾಕುತ್ತೇವೆ. ಆದರೆ ಇದೀಗ ವ್ಯಕ್ತಿಯೊಬ್ಬನು ಕೆಟ್ಟು ಹೋದ ಗ್ಯಾಸ್ ಸ್ಟವ್ ಹೇಗೆ ಬಳಸಬೇಕೆಂದು ತೋರಿಸಿಕೊಂಡಿದ್ದಾನೆ. ಹೌದು, ಈ ಗ್ಯಾಸ್ ಸ್ಟವನ್ನು ಶವರ್ (shower) ಆಗಿ ಬಳಸುತ್ತಿರುವ ವ್ಯಕ್ತಿಯ ವಿಡಿಯೋವೊಂದು ವೈರಲ್ ಆಗಿದೆ.

@SingKinngSP ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ವ್ಯಕ್ತಿಯೊಬ್ಬನು ಸ್ನಾನ ಮಾಡುತ್ತಿದ್ದಾನೆ. ಮೇಲಿಂದ ನೀರು ಬೀಳುತ್ತಿದ್ದು ನೀವೇನಾದ್ರೂ ಶವರ್ ಎಂದು ಭಾವಿಸಿದರೆ ನಿಮ್ಮ ಊಹೆ ನಿಜಕ್ಕೂ ತಪ್ಪಾಗುತ್ತದೆ. ಹೌದು, ಸ್ನಾನಗೃಹದ ಸೀಲಿಂಗ್‌ನಲ್ಲಿ ಶವರ್ ಬದಲಿಗೆ ಗ್ಯಾಸ್ ಸ್ಟೌವ್ ಅಳವಡಿಸಲಾಗಿದೆ. ನೀರಿನ ಪೈಪನ್ನು ಗ್ಯಾಸ್ ಸ್ಟೌವ್‌ಗೆ ಜೋಡಿಸಲಾಗಿದ್ದು, ಈ ನೀರು ಸ್ಟೌವ್ ಒಳಗಿಂದ ಸ್ಟೌವ್‌ನ ರಂಧ್ರಗಳ ಮೂಲಕ ಕೆಳಗೆ ಬೀಳುತ್ತಿದೆ. ಈ ವ್ಯಕ್ತಿಯೂ ಅದರ ಕೆಳಗೆ ಕುಳಿತುಕೊಂಡು ಸ್ನಾನ ಮಾಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಇದನ್ನೂ ಓದಿ : ಅರೇ, ಅಪ್ಪ ನಾನು ನಿನ್ನಂತೆ ಬಲಶಾಲಿ ತೋಳುಗಳನ್ನು ಬೆಳೆಸಿಕೊಳ್ತೇನೆ, ತಂದೆ ಮಗಳ ಮುದ್ದಾದ ಸಂಭಾಷಣೆ ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ:

 


ಈ ವಿಡಿಯೋವು ಈಗಾಗಲೇ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಳಕೆದಾರರೊಬ್ಬರು, ಈ ರೀತಿ ಐಡಿಯಾಗಳು ತಿಳಿದಿರುವ ವ್ಯಕ್ತಿಗಳು ಭಾರತದಲ್ಲಿರಲು ಮಾತ್ರ ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ನಿಜಕ್ಕೂ ಈತನ ಬುದ್ಧಿವಂತಿಕೆ ಮೆಚ್ಚಿದೆ. ಗ್ಯಾಸ್ ಸ್ಟವ್ ಕೆಟ್ಟು ಹೋದರೆ ಅದನ್ನು ಎಸೆಯುವ ಬದಲು ಈ ರೀತಿ ಬಳಸುವೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಇನ್ನೊರ್ವ ಬಳಕೆದಾರರು, ‘ನಮ್ಮ ದೇಶದಲ್ಲಿ ಎಷ್ಟೊಂದು ಪ್ರತಿಭಾನ್ವಿತ ಜನರಿದ್ದಾರೆ. ಅವರಿಗೆ ಸರಿಯಾದ ರೀತಿಯಲ್ಲಿ ಅವಕಾಶ ನೀಡಿದರೆ ಅವರು ಪ್ರಪಂಚದಲ್ಲಿರುವ ವಿಜ್ಞಾನಿಗಳನ್ನು ಮೀರಿಸಿ ಎತ್ತರಕ್ಕೆ ಬೆಳೆಯುತ್ತಾರೆ’ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:39 am, Fri, 18 April 25