ಚೀನಾ, ಮಾ. 14: ಕೆಲವೊಂದಿಷ್ಟು ಜನಕ್ಕೆ ಎಲ್ಲಿ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಅರಿವೇ ಇರೊಲ್ಲ. ಅದರಲ್ಲೂ ಕೆಲ ಪುಂಡ ಯುವಕರು (Youths) ಎಲ್ಲೆಂದರಲ್ಲಿ ಅತಿರೇಕವಾಗಿ ವರ್ತಿಸುತ್ತಾರೆ. ಇಂತಹ ಘಟನೆಗಳು ಆಗಾಗ್ಗೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತವೆ. ಇಲ್ಲೊಂದು ಕಡೆ ಅಂತಹದ್ದೇ ಅಸಹ್ಯಕರ ಘಟನೆಯೊಂದು ನಡೆದಿದ್ದು ರೆಸ್ಟೋರೆಂಟ್‌ನಲ್ಲಿ (Restaurants) ಗ್ರಾಹಕರು (customers) ಕುಡಿಯೋ ಸೂಪ್‌ಗೆ (soup) ಪುಂಡ ಯುವಕರಿಬ್ಬರು ಮೂತ್ರ ವಿಸರ್ಜನೆ ಮಾಡಿ ಹುಚ್ಚಾಟ ಮೆರೆದಿದ್ದಾರೆ. ಸೂಪ್‌ನ ಹಾಟ್‌ಪಾಟ್‌ಗೆ (hotpot) ಟೇಬಲ್ ಮೇಲೆ ನಿಂತು ಮೂತ್ರ ವಿಸರ್ಜನೆ (urinate) ಮಾಡಿದ್ದಾರೆ. ಈ ದೃಶ್ಯ ವೈರಲ್ ಆದ ಬಳಿಕ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಆ ದಿನ ಸೂಪ್ ಕುಡಿದ 4 ಸಾವಿರ ಗ್ರಾಹಕರಿಗೆ ಪರಿಹಾರ ನೀಡುವುದಾಗಿ ರೆಸ್ಟೋರೆಂಟ್ ಘೋಷಿಸಿದೆ.
ಚೀನಾದ ಪ್ರಸಿದ್ಧ ಹಾಟ್‌ಪಾಟ್ ರೆಸ್ಟೋರೆಂಟ್ ಹೈಡಿಲಾವ್ ಇದೀಗ ವಿವಾದದ ಕಾರಣದಿಂದ ಸುದ್ದಿಯಲ್ಲಿದೆ. ಹೌದು ಈ ರೆಸ್ಟೋರೆಂಟ್‌ಗೆ ಬಂದಿದ್ದಂತಹ ಹದಿಹರೆಯದ ಯುವಕರಿಬ್ಬರು ಸೂಪ್ ಹಾಟ್‌ಪಾಟ್‌ಗೆ ಟೇಬಲ್ ಮೇಲೆ ನಿಂತು ಮೂತ್ರ ವಿಸರ್ಜನೆ ಮಾಡಿದ್ದಾರೆ. ಶಾಂಘೈ ಶಾಖೆಯಲ್ಲಿ ಈ ಯುವಕರು ಗ್ರಾಹಕರು ಕುಡಿಯೋ ಸೂಪ್‌ಗೆ ಮೂತ್ರ ವಿಸರ್ಜನೆ ಮಾಡಿ ಹುಚ್ಚಾಟ ಮೆರೆದಿದ್ದು, ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಗ್ರಾಹಕರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Two boys have been detained by Shanghai police for allegedly urinating into a hotpot at an outlet of famous restaurant #Haidilao, police officers announced on Saturday.
In the video, the man also laughed and said that the restaurant, Haidilao, China’s hotpot chain, had launched a… pic.twitter.com/WeT0QSliDH— Shanghai Daily (@shanghaidaily) March 8, 2025
ಕಳೆದ ತಿಂಗಳು ಶಾಂಘೈನಾ ಹೈಡಿಲಾವ್ ಔಟ್ಲೆಟ್‌ನಲ್ಲಿ ಮದ್ಯದ ಅಮಲಿನಲ್ಲಿದ್ದ ಹದಿಹರೆಯದ ಯುವಕರಿಬ್ಬರು ಸೂಪ್ ಪಾತ್ರೆಗೆ ಟೇಬಲ್ ಮೇಲೆ ನಿಂತು ಮೂತ್ರ ವಿಸರ್ಜನೆ ಮಾಡಿದ್ದಾರೆ. ಈ ದೃಶ್ಯವನ್ನು ಯಾರೋ ವಿಡಿಯೋ ರೆಕಾರ್ಡ್ ಮಾಡಿ ಇಂಟರ್ನೆಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಜನ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ರೆಸ್ಟೋರೆಂಟ್ ವಿರುದ್ಧ ಭಾರೀ ಟೀಕೆಗಳೂ ಕೇಳಿ ಬಂದವು. ಇದಾದ ಬಳಿಕ ಹೈಡಿಲಾವ್ ಆಡಳಿತ ಮಂಡಳಿಯು ಗ್ರಾಹಕರಲ್ಲಿ ಕ್ಷಮೆಯಾಚಿಸಿದೆ. ಜೊತೆಗೆ ಆ ಔಟ್‌ಲೆಟ್‌ನಲ್ಲಿರುವ ಎಲ್ಲಾ ಹಾಟ್‌ಪಾಟ್ ಉಪಕರಣಗಳು, ಪಾತ್ರೆಗಳನ್ನು ಬದಲಾಯಿಸಿರುವುದಾಗಿ ಹೇಳಿದೆ. ಮತ್ತು ಪ್ರತಿಯೊಬ್ಬ ಗ್ರಾಹಕರಿಗೆ ತಮ್ಮದೇ ಆದ ಪ್ರತ್ಯೇಕ ಹಾಟ್‌ಪಾಟ್ ನೀಡಲಾಗುತ್ತದೆ, ಆದ್ದರಿಂದ ಒಂದು ಹಾಟ್‌ಪಾಟ್‌ನಲ್ಲಿದ್ದ ಸೂಪ್ ಅನ್ನು ಇನ್ನೊಬ್ಬ ಗ್ರಾಹಕರಿಗೆ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಇದರ ಜೊತೆಗೆ ಘಟನೆ ಸಂಭವಿಸಿದ ಆ ದಿನ ಶಾಂಘೈನಾ ಹೈಡಿಲಾವ್ ಔಟ್ಲೆಟ್‌ನಲ್ಲಿ ಊಟ ಮಾಡಲು ಬಂದಂತಹ 4000 ಗ್ರಾಹಕರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ: ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್ ಪತ್ರದೊಂದಿಗೆ ಗಿಫ್ಟ್
Manya Koetse ಹೆಸರಿನ ಎಕ್ಸ್ ಖಾತೆಯಲ್ಲಿ ಇದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ಟೇಬಲ್ ಮೇಲೆ ನಿಂತು ಸೂಪ್ ತುಂಬಿದ್ದ ಹಾಟ್‌ಪಾಟ್‌ಗೆ ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಯುವಕನ ಅತಿರೇಕದ ವರ್ತನೆಗೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ