
Viral Video: ಬಲೂಚಿಸ್ತಾನದಲ್ಲಿ ಪ್ರವಾಹ ಉಂಟಾದ ಕಾರಣ ಕೋಕ್ ಸ್ಟುಡಿಯೋದ ಗಾಯಕ ವಹಾದ್ ಅಲಿ ಬುಗ್ತಿ ನಿರಾಶ್ರಿತರಾಗಿದ್ದಾರೆ. ಇವರು ಕೋಕ್ ಸ್ಟುಡಿಯೋ ಸೀಸನ್ 14 ರಲ್ಲಿ ಭಾಗವಹಿಸಿದ್ದರು. ‘ಕನಾ ಯಾರಿ’ ಎಂಬ ಹಾಡನ್ನು ಹಾಡಿದ ಇವರ ಸದ್ಯದ ಅಸಹಾಯಕ ಪರಿಸ್ಥಿತಿಯನ್ನು ಟ್ವಿಟರ್ ಖಾತೆದಾರರಾದ ನಿಶಾತ್ ಎನ್ನುವವರು ನೆಟ್ಟಿಗರ ಗಮನಕ್ಕೆ ತಂದಿದ್ದಾರೆ. ನಿಶಾತ್ ಹಂಚಿಕೊಂಡ ಫೋಟೋಗಳಲ್ಲಿ ವಹಾಬ್ ತನ್ನ ಕುಟುಂಬದೊಂದಿಗೆ ಇರುವ ಫೋಟೋಗಳಿವೆ. ಅವರ ಮಣ್ಣಿನ ಮನೆ ನೆಲಸಮವಾದ ನಂತರ ಉಳಿದ ಒಂದು ಚಾರ್ಪಾಯ್ ಮಕ್ಕಳಿಗೆ ಆಸರೆಯಾಗಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ದಯವಿಟ್ಟು ವಹಾದ್ ಅವರಿಗೆ ಸಹಾಯ ಮಾಡಿ, ನಾನು ಈಗಷ್ಟೇ ಅವರೊಂದಿಗೆ ಮಾತನಾಡಿದ್ದೇನೆ ಎಂದು ನೆಟ್ಟಿಗರಲ್ಲಿ ನಿಶಾತ್ ವಿನಂತಿಸಿಕೊಂಡಿದ್ದಾರೆ. ಯುಎನ್ ವುಮೆನ್ ಪಾಕಿಸ್ತಾನದ ಸದ್ಭಾವನಾ ರಾಯಭಾರಿ ಮುನಿಬಾ ಮಜಾರಿ ಕೂಡ ವಹಾಬ್ ಅವರ ಈ ಸಂಕಟಮಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:52 pm, Thu, 25 August 22