
ರೈಲ್ವೆ ನಿಲ್ದಾಣದಲ್ಲಿ, ರೈಲಿನೊಳಗೆ ಕೆಲವೊಂದಿಷ್ಟು ಪ್ರಯಾಣಿಕರು ಮಾಡುವಂತಹ ಅವಾಂತರಗಳಿಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇತ್ತೀಚಿಗಷ್ಟೆ ಪ್ರಯಾಣಿಕರು ರೈಲಿನ ಗಾಜು ಒಡೆದು ಹಾಕಿದಂತಹ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಯುವಕನೊಬ್ಬ ರೈಲಿನೊಳಗಿದ್ದ ಪ್ರಯಾಣಿಕರ ಮೇಲೆ ಬಾಟಲಿಯಲ್ಲಿದ್ದ ನೀರನ್ನು ಎರಚುವ ಮೂಲಕ ಪುಂಡಾಟಿಕೆ ಮೆರೆದಿದ್ದಾನೆ. ಇದನ್ನು ಗಮನಿಸಿದ ರೈಲ್ವೆ ಪೊಲೀಸ್, ಆ ಪುಂಡ ಯುವಕನ ಕಾಲರ್ ಹಿಡಿದು ದರದರನೇ ಎಳೆದುಕೊಂಡು ಹೋಗಿ ಸರಿಯಾಗಿ ಏಟು ಕೊಟ್ಟಿದ್ದು, ಇಂತಹ ಪುಂಡರಿಗೆ ಹೀಗೆಯೇ ಆಗ್ಬೇಕು ಎಂದು ಪೊಲೀಸಪ್ಪನ ಕಾರ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.
ರೈಲ್ವೆ ಸ್ಟೇಷನ್‌ನಿಂದ ರೈಲು ಹೊರಡುವ ಸಂದರ್ಭದಲ್ಲಿ ಅಲ್ಲಿ ನಿಂತಿ ಯುವಕನೊಬ್ಬ ತನ್ನ ಬ್ಯಾಗ್‌ನಿಂದ ಬಾಟಲಿಯನ್ನು ತೆಗೆದು ಅದರಲ್ಲಿದ್ದ ನೀರನ್ನು ರೈಲಿನೊಳಗಿದ್ದ ಪ್ರಯಾಣಿಕರ ಮೇಲೆ ಎರಚಿದ್ದಾನೆ. ಆ ಸಂದರ್ಭದಲ್ಲಿ ಅಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಕೈಗೆ ಆತ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು ಮಾಡಿದ ತಪ್ಪಿಗೆ ಸರಿಯಾಗಿ ಏಟು ತಿಂದಿದ್ದಾನೆ.
आज फसा एक उपद्रवी, ट्रेन यात्रियों पर पानी डाल रहा था, पुलिस इंस्पेक्टर मौके पर थे। देखते ही लपेट लिए। pic.twitter.com/yTBDi3vKTg
— Abhimanyu Singh Journalist (@Abhimanyu1305) February 25, 2025
ಪತ್ರಕರ್ತ ಅಭಿಮನ್ಯು ಸಿಂಗ್ (Abhimanyu1305) ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪುಂಡ ಯುವಕನೊಬ್ಬ ರೈಲಿನೊಳಗಿದ್ದ ಪ್ರಯಾಣಿಕರ ಮೇಲೆ ನೀರೆರಚುತ್ತಿರುವ ದೃಶ್ಯವನ್ನು ಕಾಣಬಹುದು. ಈತನ ಪುಂಡಾಟಿಕೆಯನ್ನು ಗಮನಿಸಿದ ಪೊಲೀಸ್ ಅಧಿಕಾರಿಯೊಬ್ಬರು ಆತನ ಕೊರಳ ಪಟ್ಟಿಯನ್ನು ಹಿಡಿದು ದರದರನೇ ಎಳೆದುಕೊಂಡು ಹೋಗಿ, ತಪ್ಪು ಮಾಡಿದ ಆ ಯುವಕನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ.
ಇದನ್ನೂ ಓದಿ: ಆಟೋ ಚಾಲಕನ ಜೊತೆ ರಿಕ್ಷಾದಲ್ಲಿ ಮುದ್ದು ಶ್ವಾನದ ಸಿಟಿ ರೌಂಡ್ಸ್; ಹೇಗಿದೆ ನೋಡಿ ಕ್ಯೂಟ್ ಫೋಟೋ
ಫೆಬ್ರವರಿ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ ಪೊಲೀಸ್ʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಷ್ಟು ಸಾಲದು ಚರ್ಮ ಕಿತ್ತು ಬರುವ ಹಾಗೆ ಏಟು ಕೊಡ್ಬೇಕುʼ ಎಂದು ಕಿಡಿ ಕಾರಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹವರಿಗೆ ಇದೇ ಒಳ್ಳೆಯ ಮದ್ದುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:24 am, Thu, 27 February 25